Video: ಹೆಲ್ಮೆಟ್ ಇಲ್ಲದೇ ಬೈಕ್‌ನಲ್ಲಿ ಪ್ರೇಮಿಗಳ ರೋಮ್ಯಾನ್ಸ್: ಪೊಲೀಸರಿಂದ ಬಿತ್ತು ಭರ್ಜರಿ ದಂಡ, ವಿವರಣೆ
ನವದೆಹಲಿ, ಜುಲೈ 20: ಬೆಂಗಳೂರು ಮತ್ತು ದೆಹಲಿಯಂತಹ ಬೃಹತ್ ಮೆಟ್ರೋ ನಗರಗಳಲ್ಲಿ ಸದಾ ವಾಹನದಟ್ಟಣೆ ಹೆಚ್ಚಿರುತ್ತದೆ. ಇಂತಹ ಪ್ರದೇಶಗಳಲ್ಲಿ ಪ್ರೇಮಿಗಳು ಹಾಡಹಗಲೇ ಮೆಟ್ರೋ, ಕಾರಿನಲ್ಲಿ, ಬೈಕ್ ಮೇಲೆ ರೋಮ್ಯಾನ್ಸ್ ಮಾಡುವವರು ಕಡಿಮೇಏನಿಲ್ಲ. ಪ್ರೇಮಿಗಳ ಮೆಟ್ರೋದಲ್ಲಿನ ಸರಸ ಸಲ್ಲಾಪದ ವಿಡಿಯೋ ವೈರಲ್ ಆದ ಬೆನಲ್ಲೆ, ಇದೀಗ ನಡು ರಸ್ತೆಯಲ್ಲಿ ಬೈಕ್ಕ ಓಡಿಸುವಾಗಿ ರೋಮ್ಯಾನ್ಸ್ ಮಾಡಿದ ಜೋಡಿಗಳು ಪೊಲೀಸರು ತಕ್ಕ ಶಾಸ್ತಿ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಹಾಡಹಗಲೇ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗಳನ್ನು ನೋಡಿದರೆ ಯಾರು ಸಹ ಈ ಪ್ರೇಮಿಗಳು ಸಾಮಾನ್ಯರಂತೆ ಕೂತು ವಾಹನದಲ್ಲಿ ತೆರಳುತ್ತಿದ್ದಾರೆ ಎಂದನಿಸದು. ಯುವಕ ಬೈಕ್ ಓಡಿಸುತ್ತಿದ್ದಾರೆ, ಆತನಿಗೆ ಎದುರಾಗಿ ಪೆಟ್ರೋಲ್ ಟ್ಯಾಂಕ್ ಮೇಲೆ ಕೂತು ಯುವತಿ ಪ್ರೇಮಿಯನ್ನು ತಬ್ಬಿದ ದೃಶ್ಯ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.

ಪ್ರೇಮಿಗಳು ಹೀಗೆ ಹಾದಿ ಬೀದಿಯಲ್ಲಿ, ಮೆಟ್ರೋ ರೈಲು, ಬಸ್, ಫ್ಲೈಓವರ್ ಮೇಲೆ ರೋಮ್ಯಾನ್ಸ್ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಂಡು ಉದಾಹರಣೆಗಳು ಕಣ್ಣಮುಂದಿವೆ.
ಈ ಪ್ರೇಮಿಗಳು ದೆಹಲಿ ಪ್ರಮುಖ ರಸ್ತೆಯೊಂದರಲ್ಲಿ ಬೈಕ್ ಓಡಿಸುವ ಜೊತೆ ಜೊತೆಗೆ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹವು ಕೇಳಿ ಬಂದಿವೆ.
Taking cognisance of a viral video wherein the two-wheeler was being driven dangerously, @dtptraffic has booked the offender under appropriate sections. A total fine of Rs. 11,000 has been imposed.
— Delhi Police (@DelhiPolice) July 20, 2023
Please don't copy movies. Drive safe. Be safe.#DriveSafe#RoadSafety pic.twitter.com/P6auuS4YAS
₹11,000 ದಂಡ ತೆತ್ತ ಜೋಡಿ
ಈ ಕುರಿತು ದೆಹಲಿ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ರೋಮ್ಯಾನ್ಸ್ ಮಾಡುತ್ತಿದ್ದ ಜೋಡಿಗೆ ಟ್ರಾಫಿಕ್ ಪೊಲೀಸರು ₹11,000 ದಂಡ ವಿಧಿಸಿದ್ದಾಗಿ ತಿಳಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡುತ್ತಿದ್ದಂತೆ ಎಚ್ಚೆತ್ತ ಟ್ರಾಫಿಕ್ ಪೊಲೀಸರು ಘಟನೆಯ ಬಗ್ಗೆ ಗಮನ ಹರಿಸಿದ್ದೇವೆ. ಇಂತಹ ಅಹಿತಕರ ಮತ್ತು ಕಾನೂನು ವಿರುದ್ಧದ ವರ್ತನೆ ಸಹಿಸುವುದಿಲ್ಲ. ಅಪರಾಧಿಗಳ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದಷ್ಟೆ ಅಲ್ಲದೇ ದ್ವಿಚಕ್ರ ವಾಹನವನ್ನು ಅಪಾಯಕಾರಿಯಾಗಿ ಚಲಾಯಿಸುವುದು ತಪ್ಪು. ಸಿನಿಮಾ ಇನ್ನಿತರ ದೃಶ್ಯಗಳಿಗೆ ಮಾರು ಹೋಗಿ ಅದರಂತೆ ವಾಹನಗಳ ಚಲಾಯಿಸುವುದು, ಸಿನಿಮಾದಂತೆ ನಕಲು ಮಾಡಲು ಹೋಗಿ ತೊಂದರೆ ತಂದುಕೊಳ್ಳವುದು ಬೇಡ. ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಸಂಚಾರ ಪೊಲೀಸರು ಇಂದು ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.
ಘಟನೆ ಆಗಿದ್ದೆಲ್ಲಿ?: ವಿವರಣೆ ಇಲ್ಲಿದೆ
ಜುಲೈ 16 ರಂದು ದೆಹಲಿಯ ಮಂಗೋಲ್ಪುರಿ ಹೊರ ವರ್ತುಲ ರಸ್ತೆಯ ಮೇಲ್ಸೇತುವೆಯಲ್ಲಿ ಈ ಘಟನೆ ಸಂಭವಿಸಿದೆ ಎಂಬುದು ಟ್ವೀಟ್ ನಿಂದ ತಿಳಿದು ಬಂದಿದೆ. ಯುವ ಜೋಡಿಗಳು ಹಲ್ಮೆಟ್ ಇಲ್ಲದೇಯೆ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಇದರಿಂದ ಅವರಿಗಷ್ಟೇ ಅಲ್ಲದೇ ಇತರರ ವಾಹನ ಸವಾರರಿಗೂ ತೊಂದರೆ ಅಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವುದು ಸಹ ಅಪರಾಧವಾಗಿದೆ.
ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ
ಇನ್ನೂ ಯುವ ಜೋಡಿಗಳು ಬೇಜವಾಬ್ದಾರಿ ಮತ್ತು ಅಶ್ಲೀಲ ನಡವಳಿಕೆಯನ್ನು ಟೀಕಿಸಿರುವ ನೆಟ್ಟಿಗರು ಕ್ರಮಕ್ಕೆ ಆಗ್ರಹಿಸಿದರು.
ಹೆಲ್ಮೆಟ್ ಮತ್ತು ಪರವಾನಗಿ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ, ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿದ್ದೆಲ್ಲಕ್ಕೂ ಸೇರಿ ಒಟ್ಟು ದಂಡ ₹11,000 ಕಟ್ಟಿಸಿಕೊಳ್ಳಲಾಗಿದೆ.
ಇನ್ನೂ ಈ ಘಟನೆ ಕುರಿತು ತ್ವರಿತವಾಗಿ ಸ್ಪಂದನೆ ನೀಡಿದ ದೆಹಲಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ತಿಂಗಳು ಇದೇ ರೀತಿಯ ಘಟನೆ ನಡೆದಿದೆ. ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಬಳಿ NH9 ನಲ್ಲಿ ದಂಪತಿಗಳು ಬೈಕ್‌ನಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ವಾಹನ ಚಾಲಾಯಿಸುತ್ತಿದ್ದರು. ಅವರು ಸಹ ಹೆಲ್ಮೆಟ್ ಹಾಕಿರಲಿಲ್ಲ ಎಂದು ನೆಟ್ಟಿಗರು ತಿಳಿಸಿದ್ದಾರೆ.












Click it and Unblock the Notifications