ಮೊದಲ ಮತದ ಪುಳಕ, ಸುಕ್ಕುಬಿದ್ದ ಮುಖದ ಹೊಳಪು, ಕೈಗೂಸಿನ ಜತೆ ತಾಯಿ!

ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ವ್ಯವಸ್ಥೆ ಇರುವ ಭಾರತದಲ್ಲಿ ಗುರುವಾರದಿಂದ ಸಾರ್ವತ್ರಿಕ ಚುನಾವಣೆಯ ಮತದಾನ ಶುರುವಾಗಿದೆ. ಇಂದು ನಡೆದಿರುವುದು ಮೊದಲ ಹಂತದ ಮತದಾನ. ಹೀಗೆ ಏಪ್ರಿಲ್ ಹನ್ನೊಂದರಿಂದ ಮೇ ಹತ್ತೊಂಬತ್ತರ ತನಕ ಏಳು ಹಂತಗಳಲ್ಲಿ ಮತದಾನ ನಡೆದು, ಮೇ ಇಪ್ಪತ್ಮೂರನೇ ತಾರೀಕು ಫಲಿತಾಂಶ ಪ್ರಕಟ ಆಗಲಿದೆ.

ಒಟ್ಟು ತೊಂಬತ್ತು ಕೋಟಿಯಷ್ಟು ಜನಕ್ಕೆ ಮತದಾನದ ಹಕ್ಕಿದೆ. ಈ ಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ, ಆರೆಂಟು ದೇಶಗಳು ಸೇರಿದರೂ ಇಷ್ಟು ಜನ ಸಂಖ್ಯೆ ಆಗಲಿಕ್ಕಿಲ್ಲ. ಭಾರತದ ಹೆಚ್ಚುಗಾರಿಕೆ ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಅನ್ನೋದರಲ್ಲಿ ಎರಡು ಮಾತಿಲ್ಲ. ಅದರ ಜತೆಗೆ ಜಾತ್ಯತೀತ ಮನೋಭಾವ, ಸಹಿಷ್ಣುತೆ ಇಲ್ಲಿನ ಮಣ್ಣಿನ ಗುಣ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗ ಸಂದರ್ಭ ಬಂದಿದೆ. ನಮ್ಮ ಹಕ್ಕನ್ನು- ಜವಾಬ್ದಾರಿಯನ್ನು ತಪ್ಪದೆ ನಿರ್ವಹಿಸಲೇ ಬೇಕು. ನಮ್ಮೆಲ್ಲರಿಗೆ ಸ್ಫೂರ್ತಿ ಆಗಬಹುದಾದ ಕೆಲ ಭಾವಚಿತ್ರಗಳು ನಿಮ್ಮೆದುರು ಇಲ್ಲಿವೆ. ದೇಶದ ವಿವಿಧ ಭಾಗದ ಮತದಾನದ ಚಿತ್ರಗಳಿವು. ನಮ್ಮ ಸರದಿ ಬಂದಾಗ ಈ ಚಿತ್ರಗಳೆಲ್ಲ ಕಣ್ಣೆದುರು ತಂದುಕೊಳ್ಳಬೇಕು. ಅರ್ಹರನ್ನು, ಯೋಗ್ಯರನ್ನು ಆರಿಸಬೇಕು. ಇದಕ್ಕೆ ನೀವೇನಂತೀರಿ?

ಚಂದ್ರಬಾಬು ನಾಯ್ಡು ಮತ್ತು ಕುಟುಂಬ

ಚಂದ್ರಬಾಬು ನಾಯ್ಡು ಮತ್ತು ಕುಟುಂಬ

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಅವರ ಪತ್ನಿ, ಮಗ ಹಾಗೂ ಸೊಸೆ ಗುರುವಾರದಂದು ಆಂಧ್ರಪ್ರದೇಶದ ಅಮರಾವತಿಯಲ್ಲಿ ಮತ ಚಲಾಯಿಸಿದರು. ಆಂಧ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಯುತ್ತಿದ್ದು, ಮತ ಹಾಕಿದ ಗುರುತನ್ನು ಇಡೀ ಕುಟುಂಬದವರು ಮಾಧ್ಯಮದವರ ಎದುರು ತೋರಿಸಿದರು.

ಮೊದಲ ಬಾರಿಗೆ ಮತ ಚಲಾಯಿಸಿದ ಹೆಮ್ಮೆ

ಮೊದಲ ಬಾರಿಗೆ ಮತ ಚಲಾಯಿಸಿದ ಹೆಮ್ಮೆ

ಜಮ್ಮುವಿನ ನಗ್ರೋಟಾದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆಯ ಮತದಾನದ ವೇಳೆ ಇದೇ ಮೊದಲ ಬಾರಿಗೆ ಮತದಾನ ಮಾಡಿದವರು ತಮ್ಮ ಬೆರಳಿಗೆ ಹಾಕಿದ ಶಾಯಿಯನ್ನು ಹೆಮ್ಮೆಯಿಂದ ತೋರಿಸಿದರು.

ಕೈಗೂಸಿನ ಜತೆ ಬಂದು ಮತ ಚಲಾಯಿಸಿದ ಮಹಿಳೆ

ಕೈಗೂಸಿನ ಜತೆ ಬಂದು ಮತ ಚಲಾಯಿಸಿದ ಮಹಿಳೆ

ಅಸ್ಸಾಮಿನ ಶಿವಸಾಗರದ ಹೊರಭಾಗದಲ್ಲಿನ ಹಳ್ಳಿಯೊಂದರಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ತನ್ನ ಹಕ್ಕನ್ನು ಚಲಾಯಿಸಿದ ಮಹಿಳೆ ಕೈಗೆ ಇಂಕ್ ಗುರುತು ಮಾಡುತ್ತಿರುವ ಅಧಿಕಾರಿ. ಕೈಗೂಸಿನೊಂದಿಗೆ ಬಂದು ತನ್ನ ಕರ್ತವ್ಯ ನಿಭಾಯಿಸುತ್ತಿರುವ ಈ ತಾಯಿಗೊಂದು ನಮಸ್ಕಾರ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಗಂಟೆಗಟ್ಟಲೆ ಭಾಷಣಕ್ಕಿಂತ ಇದೊಂದು ಫೋಟೋ ಸಾಕು

ಗಂಟೆಗಟ್ಟಲೆ ಭಾಷಣಕ್ಕಿಂತ ಇದೊಂದು ಫೋಟೋ ಸಾಕು

ಮೇಘಾಲಯದ ರಿ-ಭೋಯ್ ಜಿಲ್ಲೆಯಲ್ಲಿ ಮತದಾನದ ನಂತರ ಬೆರಳಿನ ಮೇಲಿನ ಶಾಯಿ ತೋರಿಸುತ್ತಿರುವ ಈ ಹಿರಿಯ ಜೀವನದ ಸಂತಸ ನೋಡಿ. ವಾಹ್, ಮತದಾನ ಮಾಡಲೇಬೇಕು, ಅದು ನಮ್ಮೆಲ್ಲರ ಕರ್ತವ್ಯ ಎಂಬ ಗಂಟೆಗಟ್ಟಲೆ ಭಾಷಣಕ್ಕಿಂತ ಈ ಒಂದು ಫೋಟೋ ಎಲ್ಲ ಹೇಳುವುದಿಲ್ಲವೆ?

ಮಗಳ ಜತೆಗೆ ಮಾಜಿ ಮುಖ್ಯಮಂತ್ರಿ

ಮಗಳ ಜತೆಗೆ ಮಾಜಿ ಮುಖ್ಯಮಂತ್ರಿ

ಉತ್ತರಾಖಂಡ್ ನ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ತಮ್ಮ ಮಗಳು ಆರುಷಿ ಪೋಖ್ರಿಯಾಲ್ ಜತೆಗೆ ಬಂದು ಮತ ಚಲಾಯಿಸಿದ ನಂತರ ಮಾಧ್ಯಮಗಳ ಎದುರು ಫೋಟೋಗಾಗಿ ನಿಂತ ಭಂಗಿ ಇದು.

ಮತದಾನಕ್ಕಾಗಿ ಹೆಣ್ಣುಮಕ್ಕಳ ಸರತಿ ಸಾಲು

ಮತದಾನಕ್ಕಾಗಿ ಹೆಣ್ಣುಮಕ್ಕಳ ಸರತಿ ಸಾಲು

ಅರುಣಾಚಲಪ್ರದೇಶದ ಇಟಾನಗರ್ ನಲ್ಲಿ ಮತದಾನ ಕೇಂದ್ರದಲ್ಲಿ ಸಾಲುಗಟ್ಟಿ ನಿಂತಿದ್ದ ಮಹಿಳೆಯರು. ಮೊದಲ ಹಂತದ ಮತದಾನ ಗುರುವಾರದ ದೃಶ್ಯವಿದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+