ಲಂಡನ್ ವಿಮಾನದಲ್ಲಿ 60 ಮಕ್ಕಳು ಅಸ್ವಸ್ಥ
ನವದೆಹಲಿ, ಮೇ6: ಲೋಕಸಭಾ ಚುನಾವಣಾ ರೌಂಡ್ ಆಪ್ ಸೇರಿದಂತೆ ದೇಶದೆಲ್ಲೆಡೆ ನಡೆದ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ, ನಿಮಗಾಗಿ. ಜತೆಗೆ ಒಂದಷ್ಟು ಪ್ರಮುಖ ವಿದೇಶಿ ಸುದ್ದಿಗಳು ಇವೆ:
ದಕ್ಷಿಣ ಆಫ್ರಿಕಾದಿಂದ ಲಂಡನ್ನಿಗೆ ವಾಪಸಾಗುತ್ತಿದ್ದ ವಿಮಾನದಲ್ಲಿ 60 ಮಕ್ಕಳು ಅಸ್ವಸ್ಥ. ವಾಂತಿ-ಬೇಧಿಗೆ ತುತ್ತಾದ ಮಕ್ಕಳನ್ನು ಹೀಥ್ರೂ ವಿಮಾನದಲ್ಲಿ ಇಳಿಯುತ್ತಿದ್ದಂತೆ ಸ್ಥಳೀಯ ಆಸ್ಪತ್ರೆಗೆ ರವಾನೆ. 10-14 ವರ್ಷ ವಯಸ್ಸಿನ ಮಕ್ಕಳು ಕೇಪ್ ಟೌನ್ ನಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ವರ್ಣಭೇಧ ನೀತಿ ಅಂತ್ಯಗೊಂಡು 20 ವರ್ಷವಾಗಿದ್ದು, ಅದರ ಆಚರಣೆಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದುಬೈ ಮೂಲಕ ಅವರು ಎಮಿರೇಟ್ಸ್ ವಿಮಾನದಲ್ಲಿ ವಾಪಸಾಗುತ್ತಿದ್ದರು.

8.25: ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಚುನಾವಣಾ ಪ್ರಚಾರ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮೇ 12ರಂದು ಇಲ್ಲಿ ಮತದಾನ.
8.20: ನನ್ನ ಕುಟುಂಬವನ್ನು ಕ್ಷೇತ್ರದಿಂದ ಆಚೆಗಟ್ಟುವ ಪ್ರಯತ್ನ ನಡೆದಿದೆ. ಜೀವಬೆದರಿಕೆಯೊಡ್ಡಲಾಗಿದೆ: ಅಮೇಥಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕುಮಾರ್ ಬಿಸ್ವಾಸ್.
8.15 ದಕ್ಷಿಣ ಆಫ್ರಿಕಾ ರಾಷ್ಟ್ರಪತಿ ಪತ್ನಿಯ ಮೇಲೆ ಅತ್ಯಾಚಾರ.












Click it and Unblock the Notifications