ಲೋಕಸಭಾ ಚುನಾವಣೆ 2024: ಎರಡನೇ ಹಂತದಲ್ಲಿ 61% ಮತದಾನ; ಎಲ್ಲೆಲ್ಲಿ ಎಷ್ಟು?

13 ರಾಜ್ಯಗಳ 88 ಸ್ಥಾನಗಳಲ್ಲಿ ಶುಕ್ರವಾರ ನಡೆದ ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ 15.88 ಕೋಟಿ ಮತದಾರರಲ್ಲಿ ಕನಿಷ್ಠ 61% ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 1,202 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಎರಡು ಹಂತಗಳ ಮತದಾನ ಮುಕ್ತಾಯದ ಬಳಿಕ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದಿದೆ. ಕೆಲವೊಂದು ಕಡೆ ಸಣ್ಣ ಪುಟ್ಟ ಗಲಭೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆದಿದೆ.

Lok Sabha Elections 2024 Phase 2 Witnesses Nearly 61 Turnout

ಕೇರಳದ ಎಲ್ಲಾ 20 ಲೋಕಸಭಾ ಸ್ಥಾನಗಳೊಂದಿಗೆ ಕರ್ನಾಟಕದಲ್ಲಿ 14, ರಾಜಸ್ಥಾನದಲ್ಲಿ 13, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8, ಮಧ್ಯಪ್ರದೇಶದಲ್ಲಿ 6, ಅಸ್ಸಾಂ ಮತ್ತು ಬಿಹಾರದಲ್ಲಿ ತಲಾ 5, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 3, ಮತ್ತು ಮಣಿಪುರ, ತ್ರಿಪುರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಒಂದು ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಯಿತು.

ಶುಕ್ರವಾರ ನಡೆದ ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡಾ 60.96 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಸಂಜೆ 7 ಗಂಟೆ ವೇಳೆಗೆ ಶೇ.60.96ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಮೊದಲು 89 ಕ್ಷೇತ್ರಗಳಿಗೆ ಈ ಹಂತದಲ್ಲಿ ಮತದಾನ ನಡೆಯಬೇಕಿತ್ತು. ಆದರೆ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯ ಮರಣದ ನಂತರ ಮಧ್ಯಪ್ರದೇಶದ ಬೇತುಲ್‌ನಲ್ಲಿ ಮತದಾನವನ್ನು ಮುಂದೂಡಲಾಗಿದೆ. ಮೂರನೇ ಹಂತದಲ್ಲಿ ಬೆತುಲ್‌ನಲ್ಲಿ ಮತದಾನ ನಡೆಯಲಿದೆ. ಮೇ 7 ರಂದು ಲೋಕಸಭಾ ಚುನಾವಣೆ 3ನೇ ಹಂತದ ಮತದಾನ ನಡೆಯಲಿದೆ.

ಯಾವ ರಾಜ್ಯಗಳಲ್ಲಿ ಎಷ್ಟು ಮತದಾನ?

ಕರ್ನಾಟಕ : 69.23%

ಅಸ್ಸಾಂ: 71.04%

ಬಿಹಾರ: 55.08%

ಛತ್ತೀಸ್‌ಗಢ: 73.29%

ಜಮ್ಮು ಮತ್ತು ಕಾಶ್ಮೀರ: 71.91%

ಕೇರಳ: 65.51%

ಮಧ್ಯಪ್ರದೇಶ: 57.62%

ಮಹಾರಾಷ್ಟ್ರ: 54.58%

ಮಣಿಪುರ: 77.18%

ರಾಜಸ್ಥಾನ: 64.07%

ತ್ರಿಪುರ: 78.97%

ಉತ್ತರ ಪ್ರದೇಶ: 54.83%

ಪಶ್ಚಿಮ ಬಂಗಾಳ: 71.84%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+