ಐದನೇ ಹಂತದ ಮತದಾನ: ಸಂಜೆ 5 ಗಂಟೆವರೆಗೆ ಶೇ 53ರಷ್ಟು ಮತದಾನ

ನವದೆಹಲಿ, ಮೇ. 6 : ಲೋಕಸಭಾ ಚುನಾವಣೆಗೆ ಐದನೇ ಹಂತದ ಮತದಾನ ಇಂದು(ಮೇ.6)ರಂದು ನಡೆಯಲಿದೆ. ದೇಶದ ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಗೃಹ ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಮತ್ತಿತರೆ ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

ಉತ್ತರ ಪ್ರದೇಶದ 14 ಕ್ಷೇತ್ರ, ರಾಜಸ್ತಾನದ 12, ಪಶ್ಚಿಮ ಬಂಗಾಳ, ಮಧ್ಯಪ್ರದೇಶದಲ್ಲಿ ತಲಾ ಏಳು ಹಾಗೂ ಬಿಹಾರದಲ್ಲಿನ ಐದು, ಜಾರ್ಖಂಡ್ ನಲ್ಲಿ 4 ಹಾಗೂ ಲಡಾಖ್‌ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.

Lok sabha elections 2019 phase 5 polling live updates in Kannada

ಉತ್ತರ ಪ್ರದೇಶದ ಅಮೇಥಿಯಲ್ಲಿ ರಾಹುಲ್ ಗಾಂಧಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ರಾಯ್‌ಬರೇಲಿ ಕ್ಷೇತ್ರದಿಂದ ಸೋನಿಯಾಗಾಂಧಿ ಪುನರ್ ಆಯ್ಕೆ ಬಯಸಿದ್ದಾರೆ. ಇಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಮತ್ತಿತರರು ಸೋನಿಯಾಗೆ ಎದುರಾಳಿಗಳಾಗಿದ್ದಾರೆ.

ಬಿಜೆಪಿಯ ರಾಜನಾಥ್ ಸಿಂಗ್ ಲಕ್ನೋಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸುಮಾರು 8.75 ಕೋಟಿ ಮತದಾರರು ಮತಚಲಾಯಿಸಲು ಅರ್ಹತೆ ಹೊಂದಿದ್ದು, 674 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. 96 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

May 06, 2019, 7:10 pm IST

ಐದನೇ ಹಂತದ ಮತದಾನ: ಸಂಜೆ 5 ಗಂಟೆವರೆಗೆ ಶೇ 53ರಷ್ಟು ಮತದಾನ
May 06, 2019, 3:29 pm IST

ಕಾಶ್ಮೀರಿ ಪಂಡಿತರಿಂದ ಮತದಾನ

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಕಾಶ್ಮೀರಿ ಪಂಡಿತರಿಂದ ಮತದಾನ
May 06, 2019, 2:36 pm IST

ಎಂ.ಎಸ್, ಧೋನಿ

ಜಾರ್ಖಂಡ್‌ನ ರಾಂಛಿಯಲ್ಲಿ ಕ್ರಿಕೆಟಿಗ ಎಂ.ಎಸ್, ಧೋನಿ ಮತ ಚಲಾಯಿಸಿದರು.
May 06, 2019, 1:30 pm IST

ಒಟ್ಟು 31.29ರಷ್ಟು ಮತದಾನವಾಗಿದೆ.

ಮಧ್ಯಾಹ್ನ 1 ಗಂಟೆವರೆಗೆ ಮತದಾನ ವಿವರ: ಬಿಹಾರ ಶೇ.24.49, ಜಮ್ಮು ಮತ್ತು ಕಾಶ್ಮೀರ ಶೇ.6.54, ರಾಜಸ್ಥಾನ-ಶೇ.33.82, ಮಧ್ಯಪ್ರದೇಶ-ಶೇ.31.46, ಉತ್ತರ ಪ್ರದೇಶ ಶೇ.26.53, ಪಶ್ಚಿಮ ಬಂಗಾಳ-ಶೇ.39.55 ಹಾಗೂ ಜಾರ್ಖಂಡ್ ಶೇ.37.24 ಒಟ್ಟು 31.29ರಷ್ಟು ಮತದಾನವಾಗಿದೆ.
May 06, 2019, 1:14 pm IST

ಮಧ್ಯಾಹ್ನ 12 ಗಂಟೆಯವರೆಗೆ ಎಷ್ಟು ಮತದಾನ

ಮಧ್ಯಾಹ್ನ 12 ಗಂಟೆಯವರೆಗೆ ಎಷ್ಟು ಮತದಾನ: ಬಿಹಾರದಲ್ಲಿ ಶೇ.20.74, ಜಮ್ಮು ಕಾಶ್ಮೀರದಲ್ಲಿ ಶೇ.6.09, ಮಧ್ಯಪ್ರದೇಶದಲ್ಲಿ ಶೇ.29.71, ರಾಜಸ್ಥಾನದಲ್ಲಿಶೇ.29.39, ಉತ್ತರ ಪ್ರದೇಶದಲ್ಲಿ ಶೇ.22.96, ಪಶ್ಚಿಮ ಬಂಗಾಳದಲ್ಲಿ ಶೇ.33.57, ಜಾರ್ಖಂಡದಲ್ಲಿ ಶೇ.29.49ರಷ್ಟು ಮತದಾನವಾಗಿದೆ.
May 06, 2019, 12:36 pm IST

ಮಧ್ಯಪ್ರದೇಶ

ಮಧ್ಯಪ್ರದೇಶದಲ್ಲಿ ಬಾಲಿವುಡ್ ನಟ ಆಶುತೋಶ್ ರಾಣಾ ಮತ ಚಲಾಯಿಸಿದರು
May 06, 2019, 11:29 am IST

ತಂದೆಯ ಅಂತ್ಯಕ್ರಿಯೆ

ಮಧ್ಯಪ್ರದೇಶದಲ್ಲಿ ತಂದೆಯ ಅಂತ್ಯಕ್ರಿಯೆ ಮುಗಿಸಿ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ ಯುವಕ
May 06, 2019, 11:27 am IST

ಬಿಹಾರದಲ್ಲಿ ಇವಿಎಂ ಯಂತ್ರವನ್ನು ಧ್ವಂಸ

ಬಿಹಾರದಲ್ಲಿ ಇವಿಎಂ ಯಂತ್ರವನ್ನು ಧ್ವಂಸ ಮಾಡಿದ ಹಿನ್ನೆಯಲ್ಲಿ ರಂಜಿತ್ ಪಾಸ್ವಾನ್ ಬಂಧನ
May 06, 2019, 11:21 am IST

ಬೆಳಗ್ಗೆ 10 ಗಂಟೆವರೆಗೆ ಮತದಾನದ ವಿವರ

ಬೆಳಗ್ಗೆ 10 ಗಂಟೆವರೆಗೆ ಮತದಾನದ ವಿವರ: ಬಿಹಾರದಲ್ಲಿ ಶೇ.11.51, ಜಮ್ಮು ಮತ್ತು ಕಾಶ್ಮೀರದಲ್ಲಿಶೇ. 1.36, ಮಧ್ಯಪ್ರದೇಶದಲ್ಲಿ ಶೇ.13.18, ರಾಜಸ್ಥಾನದಲ್ಲಿ ಶೇ.14, ಉತ್ತರಪ್ರದೇಶದಲ್ಲಿ ಶೇ.9.85, ಪಶ್ಚಿಮ ಬಂಗಾಳದಲ್ಲಿ 16.56, ಜಾರ್ಖಂಡ್‌ನಲ್ಲಿ 13.46, ಒಟ್ಟು 12.65ರಷ್ಟು ಮತದಾನವಾಗಿದೆ.
May 06, 2019, 9:22 am IST

ಜಾರ್ಖಂಡ್‌

ಜಾರ್ಖಂಡ್‌ನಲ್ಲಿ ಮತದಾನಕ್ಕೆ 105 ವೃದ್ಧ ತಾಯಿಯನ್ನು ಮತಗಟ್ಟೆಗೆ ಎತ್ತಿಕೊಂಡು ಬಂದ ಪುತ್ರ
May 06, 2019, 9:17 am IST

ಕಾಶ್ಮೀರದ ಮತಗಟ್ಟೆಯ ಮೇಲೆ ಗ್ರೆನೇಡ್ ದಾಳಿ

ಕಾಶ್ಮೀರದ ಮತಗಟ್ಟೆಯ ಮೇಲೆ ಗ್ರೆನೇಡ್ ದಾಳಿ
May 06, 2019, 8:51 am IST

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ
May 06, 2019, 8:48 am IST

ಮಾಯಾವತಿ

ಮಾಯಾವತಿ ಮತಚಲಾಯಿಸಿದ ಬಳಿಕ, ಎಲ್ಲರಿಗೂ ಮತದಾನ ಮಾಡುವಂತೆ ಕರೆ ನೀಡಿದರು
May 06, 2019, 8:23 am IST

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸೋಮವಾರ ಬೆಳಗ್ಗೆ ಮತಚಲಾಯಿಸಿದ್ದಾರೆ, ಲಕ್ನೋದ ಸಿಟಿ ಮೌಂಟೆಸರಿ ಇಂಟರ್ ಕಾಲೇಜಿನಲ್ಲಿ ಮತದಾನ ಮಾಡಿದ್ದಾರೆ. ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್ ಕುಟುಂಬ ಸಮೇತ ಜಯಪುರದಲ್ಲಿ ಮತಹಕ್ಕು ಚಲಾಯಿಸಿದ್ದಾರೆ.
May 06, 2019, 8:00 am IST

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭ
May 06, 2019, 7:55 am IST

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ಲಕ್ನೋನಲ್ಲಿ ಮತಚಲಾಯಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
May 06, 2019, 7:39 am IST

ಕೇಂದ್ರ ಸಚಿವ ಯಶ್ವಂತ್ ಸಿನ್ಹಾ

ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಹಾಗೂ ಪತ್ನಿ ನೀಲಿಮಾ ಸಿನ್ಹಾ ಜಾರ್ಖಂಡ್‌ನಲ್ಲಿ ಮತಚಲಾಯಿಸಲು ಮತಗಟ್ಟೆಗೆ ಆಗಮಿಸಿದ್ದಾರೆ.
May 06, 2019, 7:32 am IST

ಕೇಂದ್ರ ಸಚಿವ ರಾಜ್ಯವರ್ದನ್ ಸಿಂಗ್ ರಾಥೋಡ್

ಕೇಂದ್ರ ಸಚಿವ ರಾಜ್ಯವರ್ದನ್ ಸಿಂಗ್ ರಾಥೋಡ್ ಹಾಗೂ ಪತ್ನಿ ಗಾಯತ್ರಿ ರಾಥೋಡ್ ಜೈಪುರದ ಮತಗಟ್ಟೆಗೆ ಆಗಮಿಸಿದ್ದು, ಕೆಲವೇ ನಿಮಿಷಗಳಲ್ಲಿ ಮತ ಚಲಾಯಿಸಲಿದ್ದಾರೆ.
May 06, 2019, 7:17 am IST

ವ್ಹೀಲ್‌ಚೇರ್‌ನಲ್ಲಿ ಬಂದ ಹಿರಿಯ ನಾಗರಿಕರು

ಬಿಹಾರದಲ್ಲಿ ಬೆಳ್ಳಂಬೆಳಗ್ಗೆಯೇ ಮತದಾನ ಮಾಡಲು ವ್ಹೀಲ್‌ಚೇರ್‌ನಲ್ಲಿ ಬಂದ ಹಿರಿಯ ನಾಗರಿಕರು
May 06, 2019, 6:59 am IST

ಕೆಲವೇ ಕ್ಷಣಗಳಲ್ಲಿ ಮತದಾನ ಆರಂಭ

ಪಶ್ಚಿಮ ಬಂಗಾಳದಲ್ಲಿ ಮತದಾನ ಮಾಡಲು ಸರತಿಯಲ್ಲಿ ನಿಂತು ಕಾಯುತ್ತಿರುವ ಮತದಾರರು, ಕೆಲವೇ ಕ್ಷಣಗಳಲ್ಲಿ ಮತದಾನ ಆರಂಭ
May 06, 2019, 6:44 am IST

ಚುನಾವಣಾ ಬಹಿಷ್ಕಾರ

ಕೆಲವೇ ಕ್ಷಣಗಳಲ್ಲಿ ಮತದಾನ ಆರಂಭ, ಪಶ್ಚಿಮ ಬಂಗಾಳದ ಬಂದ್ವಾನ್ ಪ್ರದೇಶದಲ್ಲಿ ಚುನಾವಣಾ ಬಹಿಷ್ಕಾರ
May 06, 2019, 3:11 am IST

ರಾಯ್‌ಬರೇಲಿ ಕ್ಷೇತ್ರದಿಂದ ಸೋನಿಯಾಗಾಂಧಿ

ಉತ್ತರ ಪ್ರದೇಶದ ಅಮೇಥಿಯಲ್ಲಿ ರಾಹುಲ್ ಗಾಂಧಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ರಾಯ್‌ಬರೇಲಿ ಕ್ಷೇತ್ರದಿಂದ ಸೋನಿಯಾಗಾಂಧಿ ಪುನರ್ ಆಯ್ಕೆ ಬಯಸಿದ್ದಾರೆ
May 06, 2019, 3:11 am IST

ಚುನಾವಣೆ

ಉತ್ತರ ಪ್ರದೇಶದ 14 ಕ್ಷೇತ್ರ, ರಾಜಸ್ತಾನದ 12, ಪಶ್ಚಿಮ ಬಂಗಾಳ, ಮಧ್ಯಪ್ರದೇಶದಲ್ಲಿ ತಲಾ ಏಳು ಹಾಗೂ ಬಿಹಾರದಲ್ಲಿನ ಐದು, ಜಾರ್ಖಂಡ್ ನಲ್ಲಿ 4 ಹಾಗೂ ಲಡಾಖ್‌ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.
May 06, 2019, 3:10 am IST

ರಾಜಕೀಯ ನಾಯಕರ ಭವಿಷ್ಯ ನಿರ್ಧಾರ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಗೃಹ ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಮತ್ತಿತರೆ ರಾಜಕೀಯ ನಾಯಕರ ಭವಿಷ್ಯ ನಿರ್ಧಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+