ನಾಳೆ ಕೊನೆಯ ಹಂತದ ಮತದಾನ, ಮೋದಿ ಸೇರಿ ಹಲವು ಖ್ಯಾತನಾಮರು ಕಣದಲ್ಲಿ

ನವದೆಹಲಿ, ಮೇ 18: ಸುದೀರ್ಘವಾಗಿ ನಡೆದಿರುವ ಲೋಕಸಭೆ ಚುನಾವಣೆ 2019 ಅಂತಿಮ ಹಂತಕ್ಕೆ ತಲುಪಿದ್ದು, ನಾಳೆ (ಮೇ 19) ರಂದು ಕೊನೆಯ ಹಂತನ ಮತದಾನ ನಡೆಯಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 11 ರಿಂದ ಪ್ರಾರಂಭವಾದ ಮತದಾನ ಪ್ರಕ್ರಿಯೆಯ ಏಳನೇಯ ಮತ್ತು ಕೊನೆಯ ಹಂತದ ಮತದಾನ ನಾಳೆ ಏಳು ರಾಜ್ಯ ಒಂದು ಕೇಂದ್ರಾಡಳಿತ ಪ್ರದೇಶದ 59 ಕ್ಷೇತ್ರಗಳಲ್ಲಿ ನಡೆಯಲಿದೆ. ಜೊತೆಗೆ ಆಂಧ್ರದ ಕೆಲವು ಕ್ಷೇತ್ರದಲ್ಲಿ ಮರುಮತದಾನವೂ ನಡೆಯಲಿದೆ.

ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಾಗೂ ಚಂಡೀಘಡ ಕೇಂದ್ರಾಡಳಿತ ಪ್ರದೇಶದಲ್ಲಿ ನಾಳೆ ಕೊನೆಯ ಹಂತದ ಮತದಾನ ನಡೆಯಲಿದೆ.

ನಾಲ್ಕು ಜನ ಪ್ರಸ್ತುತ ಕೇಂದ್ರ ಮಂತ್ರಿಗಳು, ಹಾಗೂ ಪ್ರಧಾನ ಮಂತ್ರಿ ಸೇರಿದಂತೆ ಒಟ್ಟು 157 ಮಂದಿ ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. 1.52 ಕೋಟಿಗೂ ಹೆಚ್ಚು ಮತದಾರರು ನಾಳಿನ ಮತದಾನದಲ್ಲಿ ಮತಚಲಾವಣೆ ಮಾಡಲು ಅರ್ಹರಿದ್ದಾರೆ.

ಮೋದಿ ಕ್ಷೇತ್ರದಲ್ಲಿ ಮತದಾನ

ಮೋದಿ ಕ್ಷೇತ್ರದಲ್ಲಿ ಮತದಾನ

ಉತ್ತರ ಪ್ರದೇಶದಲ್ಲಿ 13 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ಅದರಲ್ಲಿ ಪ್ರಧಾನಿ ಮೋದಿ ಅವರು ಸ್ಪರ್ಧಿಸಿರುವ ವಾರಣಾಸಿ ಕ್ಷೇತ್ರವೂ ಒಂದಾಗಿದೆ. ಜೊತೆಗೆ ಯೋಗಿ ಆದಿತ್ಯನಾಥ ಅವರು ಸ್ಪರ್ಧಿಸುತ್ತಿದ್ದ ಗೋರಖ್‌ಪುರ ಕ್ಷೇತ್ರಕ್ಕೂ ನಾಳೆಯೇ ಮತದಾನ ನಡೆಯಲಿದೆ.

ಪಂಜಾಬ್‌ನ ಏಳು ಕ್ಷೇತ್ರದಲ್ಲಿ ಮತದಾನ

ಪಂಜಾಬ್‌ನ ಏಳು ಕ್ಷೇತ್ರದಲ್ಲಿ ಮತದಾನ

ಪಂಜಾಬ್‌ ರಾಜ್ಯದಲ್ಲಿ ಏಳು ಲೋಕಸಭೆ ಕ್ಷೇತ್ರಗಳಿದ್ದು, ಎಲ್ಲಾ ಕ್ಷೇತ್ರಗಳಿಗೂ ಒಮ್ಮೆಲೆ ಚುನಾವಣೆ ನಡೆಯಲಿದೆ. ನಟ ಸನ್ನಿ ಡಿಯೋಲ್ ಗುರುದಾಸ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಪಶ್ಚಿಮ ಬಂಗಾಳದ ಒಂಬತ್ತು ಕ್ಷೇತ್ರಕ್ಕೆ ಮತದಾನ

ಪಶ್ಚಿಮ ಬಂಗಾಳದ ಒಂಬತ್ತು ಕ್ಷೇತ್ರಕ್ಕೆ ಮತದಾನ

ಪಶ್ಚಿಮ ಬಂಗಾಳದ ರಾಜ್ಯದ ಒಂಬತ್ತು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಇತ್ತೀಚೆಗಷ್ಟೆ ಉಂಟಾದ ಗಲಭೆ ಮತ್ತು ಚುನಾವಣಾ ಆಯೋಗ ತೆಗೆದುಕೊಂಡ ನಿರ್ಣಯದಿಂದ ಈ ಮತದಾನವು ಹೆಚ್ಚು ಗಮನ ಸೆಳೆದಿದೆ.

ಪ್ರಧಾನಿ ಮತ್ತು ನಾಲ್ಕು ಸಚಿವರ ಭವಿಷ್ಯ ನಿರ್ಣಯ

ಪ್ರಧಾನಿ ಮತ್ತು ನಾಲ್ಕು ಸಚಿವರ ಭವಿಷ್ಯ ನಿರ್ಣಯ

ಮಧ್ಯ ಪ್ರದೇಶದ ಎಂಟು ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಬಿಹಾರದ ಎಂಟು ಕ್ಷೇತ್ರಗಳಿಗೆ, ಹಿಮಾಚಲ ಪ್ರದೇಶದ ನಾಲ್ಕು ಕ್ಷೇತ್ರದಲ್ಲಿ, ಜಾರ್ಖಂಡ್‌ನ ಮೂರು ಕ್ಷೇತ್ರಗಳಿಗೆ ಮತದಾನ ನಾಳೆ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶವಾದ ಚಂಡೀಘಡದ ಒಂದು ಕ್ಷೇತ್ರಕ್ಕೆ ಮತದಾನ ನಡೆಯಲಿದೆ.

ಕೆಲವು ಕಡೆ ಬೇಗ ಮತದಾನ ಅಂತ್ಯ

ಕೆಲವು ಕಡೆ ಬೇಗ ಮತದಾನ ಅಂತ್ಯ

ಆಂಧ್ರ ಪ್ರದೇಶದ ಎಂಟು ಕ್ಷೇತ್ರಗಳು ಮತ್ತು ಇನ್ನೂ ಕೆಲವು ರಾಜ್ಯಗಳ ಕೆಲವು ಕ್ಷೇತ್ರಗಳಲ್ಲಿ ಮರುಮತದಾನವು ನಾಳೆ ನಡೆಯಲಿದೆ. ಮತದಾನವು ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ ನಡೆಯಲಿದೆ. ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸಂಜೆ 4 ಕ್ಕೆ ಮತದಾನ ಅಂತ್ಯವಾಗಲಿದೆ.

ಸುದೀರ್ಘ ಮತದಾನ ಪ್ರಕ್ರಿಯೆ ನಾಳೆ ಅಂತ್ಯ

ಸುದೀರ್ಘ ಮತದಾನ ಪ್ರಕ್ರಿಯೆ ನಾಳೆ ಅಂತ್ಯ

ನಾಳೆಗೆ ಲೋಕಸಭೆ ಚುನಾವಣೆ 2019 ರ ಮತದಾನ ಪ್ರಕ್ರಿಯೆ ಅಂತ್ಯವಾಗಲಿದ್ದು, ಮೇ 23 ಕ್ಕೆ ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 11 ರಂದು ಲೋಕಸಭೆ ಚುನಾವಣೆ 2019 ರ ಮೊದಲ ಹಂತದ ಮತದಾನ ನಡೆದಿತ್ತು, ಮಾರ್ಚ್‌ 10 ರಂದು ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಬಹುದೀರ್ಘವಾದ ಚುನಾವಣಾ ಪ್ರಕ್ರಿಯೆ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+