ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಗ್ಯಾರಂಟಿ!

|
Google Oneindia Kannada News

Recommended Video

Lok Sabha Elections 2019 : ಬಿಜೆಪಿ - ಜೆಡಿಯು ಮೈತ್ರಿ ಬಹುತೇಕ ಗ್ಯಾರಂಟಿ | Oneindia Kannada

ಪಾಟ್ನಾ, ಜುಲೈ 09: ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಮುರಿದು ಬೀಳುವ ಸೂಚನೆ ಕೆಲವು ದಿನಗಳಿಂದ ದಟ್ಟವಾಗಿತ್ತು. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವಲ್ಲಿ ಒಮ್ಮತ ಮೂಡದ ಕಾರಣ ಬ್ರೇಕ್ ಅಪ್ ಗ್ಯಾರಂಟಿ ಎಂಬ ವದಂತಿಗಳು ಹಬ್ಬಿದ್ದವು.

ಆದರೆ ದೆಹಲಿಯಲ್ಲಿ ಜು.08 ರಂದು ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಲೋಕಸಬಾ ಚುನಾವಣೆಯಲ್ಲಿ ಜೆಡಿಯು ಸಹ ಎನ್ ಡಿಎ ಮೈತ್ರಿಕೂಟದೊಂದಿಗೆ ಗುರುತಿಸಿಕೊಳ್ಳಲಿದೆ.

ಬಿಹಾರದಲ್ಲಿ ಜೆಡಿಯು-ಬಿಜೆಪಿ ಬ್ರೇಕ್ ಅಪ್ ಸೂಚನೆ?!ಬಿಹಾರದಲ್ಲಿ ಜೆಡಿಯು-ಬಿಜೆಪಿ ಬ್ರೇಕ್ ಅಪ್ ಸೂಚನೆ?!

ಜೆಡಿಯುವಿನ ಈ ನಡೆ ವಿಪಕ್ಷಗಳಿಗೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಲೋಕಸಭಾ ಚುನಾವಣೆಯನ್ನು ಜೆಡಿಯು ಎನ್ ಡಿಎ ಜೊತೆ ಎದುರಿಸುವುದಿಲ್ಲ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ಬಿಹಾರದ ಜೆಡಿಯು-ಬಿಜೆಪಿ ಮೈತ್ರಿ ಪಕ್ಷವೂ ಬೀಳಲಿದೆ ಎಂದು ಅಂದಾಜಿಸಲಾಗಿತ್ತು.

40 ಲೋಕಸಭಾ ಕ್ಷೇತ್ರಗಳು

40 ಲೋಕಸಭಾ ಕ್ಷೇತ್ರಗಳು

ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿದ್ದು, ಇವುಗಳಲ್ಲಿ ಬಿಜೆಪಿ ಮತ್ತು ಜೆಡಿಯು ಒಟ್ಟಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಹಾರದ ಮಟ್ಟಿಗೆ ನಿತೀಶ್ ಕುಮಾರ್ ಪ್ರಭಾವೀ ನಾಯಕ. ನಿತೀಶ್ ಅವರ ಬೆಂಬಲವಿಲ್ಲದೆ ಬಿಜೆಪಿ ಸ್ವತಂತ್ರವಾಗಿ ಬಿಹಾರದಿಂದ ಸ್ಪರ್ಧಿಸುವುದು ಸುಲಭದ ವಿಷಯವಲ್ಲ. ಅದು ಬಿಜೆಪಿಗೂ ಗೊತ್ತು. ಆದ್ದರಿದ ಲೋಕಸಭಾ ಚುನಾವಣೆಯಲ್ಲೂ ಮೈತ್ರಿಯನ್ನು ಮುಂದುವರಿಸಲು ಉಭಯ ಪಕ್ಷಗಳು ನಿರ್ಧರಿಸಿವೆ.

'ಬಿಹಾರದಲ್ಲಿ ನಿತೀಶ್‌ಗೆ ಶಾಶ್ಚತವಾಗಿ ಮುಚ್ಚಿದ ಮೈತ್ರಿ ಬಾಗಿಲು''ಬಿಹಾರದಲ್ಲಿ ನಿತೀಶ್‌ಗೆ ಶಾಶ್ಚತವಾಗಿ ಮುಚ್ಚಿದ ಮೈತ್ರಿ ಬಾಗಿಲು'

ಜೆಡಿಯುಗೂ ಲಾಭ

ಜೆಡಿಯುಗೂ ಲಾಭ

ಕೆಲವು ದಿನಗಳ ಹಿಂದಷ್ಟೇ, 'ಬಿಜೆಪಿ ಬೇಕಿದ್ದರೆ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿ. ಬಿಹಾರದಲ್ಲಿ ಜೆಡಿಯು ಬೆಂಬಲವಿಲ್ಲದೆ ಬಿಜೆಪಿ ಅಸ್ತಿತ್ವ ಕಂಡುಕೊಳ್ಳುವುದು ಕಷ್ಟ' ಎಂದು ಜೆಡಿಯು ನಾಯಕರೇ ಹೇಳಿದ್ದರು. ಇದಾದ ನಂತರ ವಿಧಾನಸಭೆಯಲ್ಲಿ ಜೆಡಿಯು ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳಲು ತಾನು ಸಿದ್ಧವಿಲ್ಲ(ಬಿಜೆಪಿ ಜೆಡಿಯು ಮೈತ್ರಿ ಸರ್ಕಾರಕ್ಕೂ ಮುನ್ನ ಬಿಹಾರದಲ್ಲಿ ಆರ್ ಜೆಡಿ-ಜೆಡಿಯು ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು) ಎಂದು ಆರ್ ಜೆಡಿ ಸ್ಪಷ್ಟ ಪಡಿಸುತ್ತಿದ್ದಂತೆಯೇ ಜೆಡಿಯು ಯೂಟರ್ನ್ ತೆಗೆದುಕೊಂಡಿದೆ.

ವಿಪಕ್ಷಗಳಿಗೆ ಭಾರೀ ಹಿನ್ನಡೆ

ವಿಪಕ್ಷಗಳಿಗೆ ಭಾರೀ ಹಿನ್ನಡೆ

ಲೋಕಸಭಾ ಚುನಾವಣೆಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಬಿರುಕು ಮೂಡಿ ಮೈತ್ರಿ ಕಳಚಿದ್ದರೆ ಅತ್ಯಂತ ಹೆಚ್ಚು ಲಾಭವಾಗುತ್ತಿದ್ದುದು ವಿಪಕ್ಷಗಳಿಗೆ. ಹಾಗಾದಲ್ಲಿ ಬಿಹಾರದಲ್ಲಿರುವ 40 ಕ್ಷೇತ್ರಗಳಲ್ಲಿ ಬಹುಪಾಲನ್ನು ನಿರಾಯಾಸವಾಗಿ ವಿಪಕ್ಷಗಳು ಗೆಲ್ಲಬಹುದು. ಇದು ಬಿಜೆಪಿಗೂ ಗೊತ್ತು. ಆದ್ದರಿಂದಲೇ ಸ್ವತಂತ್ರ್ವಾಗಿ ಸ್ಪರ್ಧಿಸುವ ತನ್ನ ನಿಲುವನ್ನು ಬಿಜೆಪಿಯೂ ಸಡಿಲ ಮಾಡಿಕೊಂಡಂತಿದೆ.

ಬಿಜೆಪಿ-ಜೆಡಿಯು ಮೈತ್ರಿ

ಬಿಜೆಪಿ-ಜೆಡಿಯು ಮೈತ್ರಿ

2015 ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 243 ಕ್ಷೇತ್ರಗಳಲ್ಲಿ ಆರ್ ಜೆಡಿ 80, ಜೆಡಿಯು 71 ಮತ್ತು ಬಿಜೆಪಿ 53, ಇತರರು 39 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಗೂ ಮುನ್ನವೇ ಆರ್ ಜೆಡಿ-ಜೆಡಿಯು ಮೈತ್ರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಕಳೆದ ಜುಲೈನಲ್ಲಿ ಈ ಮೈತ್ರಿ ಸರ್ಕಾರದಲ್ಲಿ ಬಿರುಕುಂಟಾಗಿ, ಬಿಜೆಪಿ ಬೆಂಬಲದೊಂದಿಗೆ ಜೆಡಿಯು ಮತ್ತೆ ಸರ್ಕಾರ ರಚಿಸಿತ್ತು.

English summary
Lok Sabha elections 2019: Janata Dal(United) says it will continue its alliance with BJP in Bihar. But, it will contest some seats by itself in the upcoming Assembly polls in Mizoram, Rajasthan, Madhya Pradesh and Chhattisgarh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X