Lok Sabha Election 2024: ಇಂದು 8 ರಾಜ್ಯಗಳ ಟಿಕೆಟ್ ಫೈನಲ್: ಘಟಾನುಘಟಿ ಬಿಜೆಪಿ ನಾಯಕರ ಹೈವೋಲ್ಟೇಜ್ ಸಭೆ!

ಬೆಂಗಳೂರು, ಫೆಬ್ರವರಿ 28: ಲೋಕಸಭೆ ಚುನಾವಣೆ 2024 ದಿನಾಂಕ ಮುಂದಿನ ಮಾರ್ಚ್‌ ಮೊದಲೆರಡು ವಾರದಲ್ಲಿ ಘೋಷಣೆ ಆಗುವ ನಿರೀಕ್ಷೆ ಇದೆ. ಟಿಕೆಟ್ ಫೈನಲ್ ಆಗದ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಇಂದು ಬುಧವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ 8 ರಾಜ್ಯಗಳನ್ನು ಒಳಗೊಂಡ ಕೋರ್ ಗ್ರೂಪ್ ಸಮಿತಿಯ ಮಹತ್ವದ ಸಭೆ ಹಮ್ಮಿಕೊಂಡಿದೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ಇಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಸಭೆಯಲ್ಲಿ, ಸದರಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ. ಇದರಲ್ಲಿ ರಾಜಕೀಯ ಚಾಣಕ್ಯ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಬಿ.ಎಲ್ ಸಂತೋಷ್ ಮತ್ತು ಎಂಟು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Lok Sabha Election 2024: Today BJP Core Group Meeting With 8 States, May be Ticket Final

ಗುಜರಾತ್, ಜಾರ್ಖಂಡ್, ಅಸ್ಸಾಂ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಇತರ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧಿಕಾರಿಗಳು ಬುಧವಾರದ ಸಭೆಯಲ್ಲಿ ಹಾಜರಿರಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಐದು ರಾಜ್ಯಗಳ ಕೋರ್ ಗ್ರೂಪ್ ಸಭೆ

ಮೊನ್ನೆ ಶನಿವಾರವಷ್ಟೇ ಇದೇ ಬಿಜೆಪಿ ದೆಹಲಿಯಲ್ಲಿ ಐದು ರಾಜ್ಯಗಳ ಕೋರ್ ಗ್ರೂಪ್ ಸಭೆಯನ್ನು ನಡೆಸಿತ್ತು. ಆಗಲೂ ಟಿಕೆಟ್ ಯಾರಿಗೆಲ್ಲ ನೀಡಬೇಕು, ಟಿಕೆಟ್ ಹಂಚಿಕೆ ಅಂತಿಮ ಬಗ್ಗೆ ಚರ್ಚಿಸಿತ್ತು. 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕೇಂದ್ರ ಕಚೇರಿಯಲ್ಲಿ 5 ರಾಜ್ಯಗಳ ಕೋರ್ ಗ್ರೂಪ್ ಸಭೆ ನಡೆಸಲಾಗಿತ್ತು.

Lok Sabha Election 2024: Today BJP Core Group Meeting With 8 States, May be Ticket Final

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ಅಲ್ಲಿಯು ಹಲವು ವಿಚಾರಗಳ ಚರ್ಚೆ ನಡೆದಿದ್ದು, ಇಂದಿನ ಸಭೆಯಲ್ಲಿ ಎಲ್ಲವು ಅಂತಿಮಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಚುನಾವಣೆಯ ಟಿಕೆಟ್ ಹಂಚಿಕೆಯ ಸಭೆಗಳು ಈವರೆಗೆ ಹಂತ ಹಂತವಾಗಿ ನಡೆದಿವೆ. ಉತ್ತರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಲೋಕಸಭಾ ಸ್ಥಾನಗಳ ತಯಾರಿ ಕುರಿತು ಸಹ ಚರ್ಚೆಗಳನ್ನು ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+