Get Updates
Get notified of breaking news, exclusive insights, and must-see stories!

LS Election 2024 LIVE: 5ನೇ ಹಂತದಲ್ಲಿ ಶೇ 57.47ರಷ್ಟು ಮತದಾನ

ಸೋಮವಾರ ಐದನೇ ಹಂತದ ಮತದಾನ ನಡೆದಿದೆ. 8 ರಾಜ್ಯಗಳ ಒಟ್ಟು 49 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಖ್ಯಾತ ನಾಮರು ಮತಗಟ್ಟೆಯ ಕಡೆ ತೆರಳಿದ್ದಾರೆ. ಬೆಳಗ್ಗೆ ಹಲವು ಪ್ರದೇಶದಲ್ಲಿ ಮತದಾನ ಚುರುಕುಗೊಂಡಿದೆ.

ಈಗೀನ ಮಾಹಿತಿಯ ಪ್ರಕಾರ ಬಿಹಾರದಲ್ಲಿ 45.33%, ಜಮ್ಮು ಮತ್ತು ಕಾಶ್ಮೀರದಲ್ಲಿ 44.9%, ಜಾರ್ಖಂಡ್‌ದಲ್ಲಿ 53.9%, ಲಡಾಖ್‌ದಲ್ಲಿ 61.26%, ಮಹಾರಾಷ್ಟ್ರದಲ್ಲಿ 38.77%, ಒಡಿಶಾದಲ್ಲಿ 48.95%, ಉತ್ತರ ಪ್ರದೇಶದಲ್ಲಿ47.55%, ಪಶ್ಚಿಮ ಬಂಗಾಳದಲ್ಲಿ 62.72% ಮತದಾನವಾಗಿದೆ.

lok-sabha-election-2024-phase-5-polli Lok Sabha Election 2024 Phase 5 Polling LIVE News  Highlights and Voter Turnout in Kannadang-live-news-highlights-voter-turnout-in-kannada

ಐದನೇ ಹಂತದ ಮತದಾನ ನಡೆದ ರಾಜ್ಯಗಳಲ್ಲಿ ಈ ವರೆಗಿನ ಲೆಕ್ಕಚಾರವನ್ನು ಗಮನಸಿದರೆ, ಪಶ್ಮಿಮ ಬಂಗಾಳದಲ್ಲಿ ಅತಿ ಹೆಚ್ಚು ಶೇಕಡಾ 63 ರಷ್ಟು ಮತದಾನ ವಾದ ಬಗ್ಗೆ ವರದಿಯಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಇನ್ನು ಮತದಾನ ಚುರುಕು ಗೊಂಡಿಲ್ಲ.

ಐದನೇ ಹಂತದ ಮತದಾನದಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ ಏಳು, ಬೀಹಾರದ ಐದು, ಓಡಿಶಾದ ಐದು, ಜಾರ್ಖಂಡ್‌ದ ಮೂರು, ಜಮ್ಮು ಮತ್ತು ಕಾಶ್ಮೀರ್‌ ಹಾಗೂ ಲಡಾಕ್‌ ತಲಾ ಒಂದು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಒಟ್ಟು ಏಳು ಹಂತದಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿದ್ದು, ಈಗಾಗಲೇ ನಾಲ್ಕು ಹಂತದ ಮತದಾನ ಮುಕ್ತಾಯವಾಗಿದೆ. ಸೋಮವಾರ ಐದನೇ ಹಂತದ ಮತದಾನ ನಡೆಯಲಿದ್ದು, ಮೇ 25 ರಂದು ಆರನೇ ಹಂತದ ಮತದಾನ ಹಾಗೂ ಜೂನ್‌ 1ರಂದು ಏಳನೇ ಹಂತದ ಮತದಾನ ನಡೆಯಲಿದೆ. ಮತ ಏಣಿಕೆ ಕಾರ್ಯ ಜೂನ್‌ 4 ರಂದು ನಡೆಯಲಿದೆ.

May 20, 2024, 8:10 pm IST
ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದ ಬರಾಮುಲ್ಲಾದಲ್ಲಿ ಸೋಮವಾರ ಲೋಕಸಭೆ ಚುನಾವಣೆ ಮತದಾನ ನಡೆಯಿತು. ಜನರು ಉತ್ಸಾಹದಿಂದಲೇ ಮತದಾನ ಮಾಡಿದ್ದು, ಸಂಜೆ 5 ಗಂಟೆಯ ತನಕ ಶೇ 54.21ರಷ್ಟು ಮತದಾನವಾಗಿದೆ. ಇದು ದಾಖಲೆಯ ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.
May 20, 2024, 6:51 pm IST

ಮಹೀಂದ್ರಾ ಮತ್ತು ಮಹೀಂದ್ರಾ ಮುಖ್ಯಸ್ಥ ಆನಂದ್ ಮಹೀಂದ್ರಾ ಮುಂಬೈನಲ್ಲಿ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಅನಿಶ್ಚಿತತೆ, ಭಯೋತ್ಪಾದನೆ ಮತ್ತು ಯುದ್ಧವಿದೆ. ನಾವು ಸ್ಥಿರ ಪ್ರಜಾಪ್ರಭುತ್ವದ ಮಧ್ಯದಲ್ಲಿದ್ದೇವೆ, ನಾವು ಶಾಂತಿಯುತವಾಗಿ ಮತ ಚಲಾಯಿಸಲು ಮತ್ತು ನಮಗೆ ಯಾವ ರೀತಿಯ ಸರ್ಕಾರ ಬೇಕು ಎಂದು ನಿರ್ಧರಿಸಲು ಅವಕಾಶ ಇದೆ, ಎಂದು ಹೇಳಿದ್ದಾರೆ.
May 20, 2024, 6:16 pm IST

5 ಗಂಟೆ ವೇಳೆಗೆ 56.68% ಮತದಾನ

ಐದನೇ ಹಂತದ ಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ 56.68% ಮತದಾನವಾಗಿದೆ. ಬಿಹಾರ 52.35%, ಜಮ್ಮು ಮತ್ತು ಕಾಶ್ಮೀರ 54.21%, ಜಾರ್ಖಂಡ್ 61.90%, ಲಡಾಖ್ 67.15%, ಮಹಾರಾಷ್ಟ್ರ 48.66%, ಒಡಿಶಾ 60.55%, ಉತ್ತರ ಪ್ರದೇಶ 55.80, ಪಶ್ಚಿಮ ಬಂಗಾಳ 73.00% ರಷ್ಟು ಮತದಾನವಾಗಿದೆ.
May 20, 2024, 5:33 pm IST

ರಿಲಯಿನ್ಸ್‌ ಕಂಪನಿಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಹಾಗೂ ನಿತಾ ಅಂಬಾನಿ ಅವರು ಐದನೇ ಹಂತದ ಚುನಾವಣೆಯಲ್ಲಿ ತಮ್ಮ ಕರ್ತವ್ಯವನ್ನು ಪಾಲನೆ ಮಾಡಿದ್ದಾರೆ. ಅಲ್ಲದೆ ಎಲ್ಲರೂ ಮತ ಹಬ್ಬದ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.
May 20, 2024, 5:30 pm IST

ಖ್ಯಾತ ನಟಿ ಮಾಧುರಿ ದಿಕ್ಷಿತ ಅವರು ಸಂಜೆ ಮತಗಟ್ಟೆಯ ಕಡೆ ಬಂದು, ತಮ್ಮ ಮತ ಚಲಾಯಿಸಿದರು.
May 20, 2024, 4:54 pm IST
ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದ ಬರಮುಲ್ಲಾ ಕ್ಷೇತ್ರದಲ್ಲಿ ಮತದಾನ ಮಾಡಲು ಜನರು ಉತ್ಸಾಹದಿಂದ ಸಾಲುಗಟ್ಟಿ ನಿಂತಿದ್ದಾರೆ.
May 20, 2024, 4:20 pm IST

ಈಗೀನ ಮಾಹಿತಿಯ ಪ್ರಕಾರ ಬಿಹಾರದಲ್ಲಿ 45.33%, ಜಮ್ಮು ಮತ್ತು ಕಾಶ್ಮೀರದಲ್ಲಿ 44.9%, ಜಾರ್ಖಂಡ್‌ದಲ್ಲಿ 53.9%, ಲಡಾಖ್‌ದಲ್ಲಿ 61.26%, ಮಹಾರಾಷ್ಟ್ರದಲ್ಲಿ 38.77%, ಒಡಿಶಾದಲ್ಲಿ 48.95%, ಉತ್ತರ ಪ್ರದೇಶದಲ್ಲಿ47.55%, ಪಶ್ಚಿಮ ಬಂಗಾಳದಲ್ಲಿ 62.72% ಮತದಾನವಾಗಿದೆ.
May 20, 2024, 3:17 pm IST

ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಹುಲ್ ಗಾಂಧಿ ಮತಗಟ್ಟೆಗೆ ಭೇಟಿ ನೀಡಿದರು.
May 20, 2024, 2:43 pm IST

ನಟಿ ಆಥಿಯಾ ಶೆಟ್ಟಿ ತಮ್ಮ ಕುಟುಂಬಸ್ಥರೊಂದಿಗೆ ಬಂದು ಐದನೇ ಹಂತದ ಮತದಾನದಲ್ಲಿ ಭಾಗವಹಿಸಿದರು.
May 20, 2024, 2:22 pm IST

ಗೀತರಚನೆಕಾರ ಜಾವೇದ್ ಅಖ್ತರ್ ಮತ್ತು ನಟಿ ಶಬಾನಾ ಐದನೇ ಹಂತದ ಮತದಾನದಲ್ಲಿ ಭಾಗವಹಿಸಿ, ತಮ್ಮ ಮತ ಚಲಾಯಿಸಿದರು.
May 20, 2024, 2:17 pm IST

ಐದನೇ ಹಂತದ ಮತದಾನದಲ್ಲಿ ಮುಂಬೈ ಸೋಮವಾರ ನಡೆದ ಐದನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆದಿದ್ದು ನಟರಾದ ರಾಕೇಶ್ ರೋಷನ್ ಮತ್ತು ಹೃತಿಕ್ ರೋಷನ್ ಮತ ಚಾಲಾಯಿಸಿದ್ದನ್ನು ತೋರಿಸುತ್ತಿರುವುದು.
May 20, 2024, 2:11 pm IST

ಬಿಹಾರದಲ್ಲಿ 34.62%, ಜಮ್ಮು ಮತ್ತು ಕಾಶ್ಮೀರದಲ್ಲಿ 34.79%, ಜಾರ್ಖಂಡ್‌ದಲ್ಲಿ 41.89%, ಲಡಾಖ್‌ದಲ್ಲಿ 52.01%, ಮಹಾರಾಷ್ಟ್ರದಲ್ಲಿ 27.78%, ಒಡಿಶಾದಲ್ಲಿ 35.31%, ಉತ್ತರ ಪ್ರದೇಶದಲ್ಲಿ 39.55%, ಪಶ್ಚಿಮ ಬಂಗಾಳದಲ್ಲಿ 48.41% ಮತದಾನವಾಗಿದೆ.
May 20, 2024, 1:15 pm IST

ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್‌ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮುಂಬೈನಲ್ಲಿ ಐದನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿ ಖುಷಿ ಪಟ್ಟರು. ಇದೇ ವೇಳೆ ಇವರೊಂದಿಗೆ ಅವರ ಕುಟುಂಬಸ್ಥರು ಸಹ ಹಾಜರಿದ್ದರು.
May 20, 2024, 12:52 pm IST

ಟೀಮ್ ಇಂಡಿಯಾದ ಸ್ಟಾರ್‌ ಆಟಗಾರ ಸೂರ್ಯಕುಮಾರ್ ಯಾದವ್ ಐದನೇ ಹಂತದ ಮತದಾನದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.
May 20, 2024, 12:46 pm IST

ಮತ ಹಬ್ಬದಲ್ಲಿ ಬಾಲಿವುಡ್ ನಟ ಮನೋಜ್‌ ಬಾಜಪೇಯ ಮತ ಚಲಾಯಿಸಿ, ಎಲ್ಲರೂ ಮತದಾನ ಮಾಡಬೇಕು. ಅಲ್ಲದೆ ಮತದಾನ ಮಾಡದೇ ಇದ್ದರೆ ಪ್ರಶ್ನೆ ಮಾಡುವ ಅಧಿಕಾರ ಇರುವುದಿಲ್ಲ ಎಂದು ತಿಳಿಸಿದ್ದಾರೆ.
May 20, 2024, 12:45 pm IST

ಬಾಲಿವುಡ್‌ನ ಖ್ಯಾತ ನಟ ಸುನಿಲ್ ಶೆಟ್ಟಿ ತಮ್ಮ ಅತ್ಯ ಅಮೂಲ್ಯವಾದ ಮತವನ್ನು ಚಲಾಯಿಸಿ, ಫೋಟೋಗೆ ಪೋಸ್ ನೀಡಿದರು.
May 20, 2024, 12:38 pm IST

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಪತ್ನಿ ರಶ್ಮಿ ಠಾಕ್ರೆ ಮತ್ತು ಪುತ್ರರಾದ ಆದಿತ್ಯ ಠಾಕ್ರೆ ಮತ್ತು ತೇಜಸ್ ಠಾಕ್ರೆ ಐದನೇ ಹಂತದ ಮತದಾನದಲ್ಲಿ ಭಾಗಿಯಾದರು.
May 20, 2024, 12:17 pm IST

ಭಾರತ ಕ್ರಿಕೆಟ್‌ ತಂಡದ ಆಟಗಾರ ಅಜಿಂಕ್ಯ ರಹಾನೆ ಮುಂಬೈನಲ್ಲಿ ತಮ್ಮ ಹಕ್ಕು ಚಲಾಯಿಸಿ, ಫೋಟೋ ಕ್ಲಿಕಿಸಿಕೊಂಡರು.
May 20, 2024, 12:13 pm IST

ಈಗೀನ ಮಾಹಿತಿಯ ಪ್ರಕಾರ ಉತ್ತರ ಪ್ರದೇಶದಲ್ಲಿ ಶೇ. 12.89%, ಮಹಾರಾಷ್ಟ್ರದಲ್ಲಿ ಶೇ. 6.33%, ಓಡಿಶಾದಲ್ಲಿ ಶೇ. 6.87%, ಜಾರ್ಖಂಡದಲ್ಲಿ ಶೇ. 11.68%, ಪಶ್ಚಿಮ ಬಂಗಾಳದಲ್ಲಿ ಶೇ. 15.35%, ಜಮ್ಮು-ಕಾಶ್ಮೀರದಲ್ಲಿ ಶೇ. 7.63%, ಲಡಾಕ್‌ದಲ್ಲಿ ಶೇ. 10.53%, ಬೀಹಾರದಲ್ಲಿ ಶೇ. 8.86% ಮತದಾನವಾಗಿದೆ.
May 20, 2024, 11:36 am IST

ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ 'ಮನೆ ಮತ' ಚಲಾಯಿಸಿದರು.
May 20, 2024, 11:28 am IST

ದೇಶದ ಮತದಾರರಲ್ಲಿ ಕೇಳಿಕೊಳ್ಳುವುದು ಎಂದರೆ, ನೀವು ಬಂದು ಮತವನ್ನು ಚಲಾಯಿಸಿ ಎಂದು ನಟಿ ಇಶಾ ಡಿಯೋಲ್ ಹೇಳಿದ್ದಾರೆ.
May 20, 2024, 11:07 am IST

ಬಾಲಿವುಡ್‌ ನಟ ರಣದೀಪ್ ಹೂಡಾ ತಮ್ಮ ಮತವನ್ನು ಚಲಾಯಿಸಿದರು.
May 20, 2024, 10:35 am IST

ಉತ್ತರ ಪ್ರದೇಶದ ಲಖ್ನೋ ಲೋಕ ಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಮತ ಚಲಾಯಿಸಿ, ಫೋಟೋಗೆ ಪೋಸ್ ನೀಡಿದರು.
May 20, 2024, 10:16 am IST

ಬಾಲಿವುಡ್ ನಟ ಹಾಗೂ ಶಿವಸೇನಾ ಮುಖಂಡ ಗೋವಿಂದಾ ಅವರು ಮತ ಹಬ್ಬದಲ್ಲಿ ಭಾಗಿಯಾದರು.
May 20, 2024, 10:13 am IST

ಮಹಾರಾಷ್ಟ್ರ ಸಿಎಂ ಮುಂಬೈನಲ್ಲಿ ಏಕ್ನಾಥ್ ಶಿಂಧೆ ಮತದಾನ ಮಾಡಿದರು.
May 20, 2024, 9:55 am IST

ಪಶ್ಚಿಮ ಬಂಗಾಳದ ಬರಾಕ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಮತ್ತು ಟಿಎಂಸಿ ಕಾರ್ಯಕರ್ತನ ನಡುವೆ ವಾಗ್ವಾದ ನಡೆದಿದೆ.
May 20, 2024, 9:52 am IST

9 ಗಂಟೆಯ ವರೆಗೆ ಮತದಾನದ ವಿವರ

9 ಗಂಟೆಯ ವರೆಗೆ ಮತದಾನದ ವಿವರ
ಉತ್ತರ ಪ್ರದೇಶ 12.89% ಮಹಾರಾಷ್ಟ್ರ 6.33% ಓಡಿಶಾ 6.87% ಜಾರ್ಖಂಡ 11.68% ಪಶ್ಚಿಮ ಬಂಗಾಳ 15.35% ಜಮ್ಮು-ಕಾಶ್ಮೀರ 7.63% ಲಡಾಕ್‌ 10.53% ಬೀಹಾರ 8.86%
May 20, 2024, 9:33 am IST

ಲಡಾಕ್‌ನ ಒಂದು ಕ್ಷೇತ್ರಕ್ಕೆ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದೆ.
May 20, 2024, 9:31 am IST
ಉತ್ತರ ಪ್ರದೇಶ

ಕೇಂದ್ರ ಸಚಿವೆ ಹಾಗೂ ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ತಮ್ಮ ಹಕ್ಕನ್ನು ಚಲಾಯಿಸಲು, ಮತಗಟ್ಟೆಯತ್ತ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
May 20, 2024, 9:26 am IST

ದೇಶದಲ್ಲಿ ಐದನೇ ಹಂತದ ಮತದಾನ ಚುರುಕು ಪಡೆದಿದೆ. ಮುಂಬೈನ ಮತಗಟ್ಟೆಯಲ್ಲಿ ಬಾಲಿವುಡ್ ನಟ ಪರೇಶ್ ರಾವಲ್ ಮತಚಲಾಯಿಸಿದರು.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+