BJP Candidate 1st List: ಯಾವ ರಾಜ್ಯದಿಂದ ಎಷ್ಟು ಸೀಟುಗಳು ಘೋಷಣೆ? ಕರ್ನಾಟಕದ ಕಥೆ ಏನು?
ನವದೆಹಲಿ, ಮಾರ್ಚ್ 02: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಶನಿವಾರ) ಬಿಡುಗಡೆ ಮಾಡಿದೆ. ಸಂಜೆ 6.15ಕ್ಕೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಇನ್ನೂ ಮೊದಲ ಪಟ್ಟಿಯಲ್ಲಿ ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಈ ಬಾರಿ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದೇವೆ. ಕೇಂದ್ರದಲ್ಲಿ 3ನೇ ಬಾರಿ ಮೋದಿ ನೇತೃತ್ವದಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ತಾವ್ಡೆ ಹೇಳಿದ್ದಾರೆ. ಅಲ್ಲದೇ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ.

ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ?
ಉತ್ತರಪ್ರದೇಶ- 51 ಕ್ಷೇತ್ರಗಳು
ಪಶ್ಚಿಮ ಬಂಗಾಳ- 20
ಪಶ್ಚಿಮ ಬಂಗಾಳ -20
ಗುಜರಾತ್- 15
ರಾಜಸ್ಥಾನ- 15
ಕೇರಳ- 12
ತೆಲಂಗಾಣ -9
ಅಸ್ಸಾಂ -11
ಜಾರ್ಖಂಡ್ -11
ಛತ್ತೀಸಗಡ್- 11
ದೆಹಲಿ -5
ಉತ್ತರಖಂಡ್- 3
ಗೋವಾ- 1
ತ್ರಿಪುರ -1
ಅಂಡಮಾನ್ ನಿಕೋಬರ್- 1
ಕರ್ನಾಟಕದ ಕಥೆ ಏನು?
ಬಿಜೆಪಿ ಹೈಕಮಾಂಡ್ 195 ಕ್ಷೇತ್ರದ ಅಭ್ಯರ್ಥಿಗಳನ್ನ ಘೋಷಿಸಿದೆ. ಹಲವು ರಾಜ್ಯದಲ್ಲಿ ಟಿಕೆಟ್ ಘೋಷಿಸಿದ್ದು, ಕರ್ನಾಟಕ ರಾಜ್ಯದ ಟಿಕೆಟ್ ಮಾತ್ರ ಘೋಷಣೆಯಾಗಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ಕ್ಷೇತ್ರ ಹಂಚಿಕೆ ಇನ್ನೂ ಅಂತಿಮವಾಗದೇ ಹಿನ್ನಲೆ ರಾಜ್ಯದ ಟಿಕೆಟ್ ಪ್ರಕಟಿಸಿಲ್ಲ. 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಹಾಗೂ ಜೆಡಿಎಸ್ ಗೆ ಮೂರು ಕ್ಷೇತ್ರಗಳ ಲೆಕ್ಕಾಚಾರವನ್ನ ಹೈಕಮಾಂಡ್ ಹಾಕಿದೆ.
ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಸೂತ್ರವನ್ನು ಹೆಣೆದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ನಾಲ್ಕು ಕ್ಷೇತ್ರಗಳು ಜೆಡಿಎಸ್ ಗೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಕ್ಷೇತ್ರ ಹಂಚಿಕೆ ಕುರಿತು ಎರಡು ಪಕ್ಷಗಳ ನಡುವೆ ನಡೆಯುತ್ತಿದ್ದ ಮಾತುಕತೆ ಬಹುತೇಕ ಅಂತಿಮವಾಗಿಲ್ಲ. ಈಗಾಗಲೇ ಮಂಡ್ಯ ಕ್ಷೇತ್ರಕ್ಕಾಗಿ ಜೆಡಿಎಸ್ ನಾಯಕರು ಹಾಗೂ ಸುಮಲತಾ ಬೇಡಿಕೆ ಇಟ್ಟಿದ್ದು, ಬಿಜೆಪಿ ಹೈಕಮಾಂಡ್ ನಾಯಕರಿಗೆ ಮಂಡ್ಯ ಕ್ಷೇತ್ರವೇ ದೊಡ್ಡ ತಲೆನೋವಾಗಿದೆ.
ಬಿಜೆಪಿ ಹೈಕಮಾಂಡ್ ಬಳಿ ಜೆಡಿಎಸ್ ನಾಯಕರು ಆರು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಮಂಡ್ಯ, ಹಾಸನ, ಚಿಕ್ಕಬಳ್ಲಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ಪಟ್ಟು ಹಿಡಿದಿತ್ತು. ಆದರೆ, ಈ ಬಗ್ಗೆ ಬಿಜೆಪಿ ಹೈಕಮಾಂಡ್ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನ ಬಿಟ್ಟುಕೊಡಲು ನಿರ್ಧರಿಸಿದೆ ಎನ್ನಲಾಗಿದೆ.
ಬಿಜೆಪಿಗೆ ಸಿಗಲಿರುವ ಕ್ಷೇತ್ರಗಳು?
ಬೆಂಗಳೂರು ಕೇಂದ್ರ
ತುಮಕೂರು
ಬೆಂಗಳೂರು ದಕ್ಷಿಣ
ಬೆಂಗಳೂರು ಉತ್ತರ
ಬೆಂಗಳೂರು ಗ್ರಾಮಾಂತರ
ಮೈಸೂರು
ಚಾಮರಾಜನಗರ
ಚಿಕ್ಕಮಗಳೂರು
ದಾವಣಗೆರೆ
ಶಿವಮೊಗ್ಗ
ಹಾವೇರಿ
ಉತ್ತರ ಕನ್ನಡ
ದಕ್ಷಿಣ ಕನ್ನಡ
ಹುಬ್ಬಳ್ಳಿ-ಧಾರವಾಡ
ಚಿತ್ರದುರ್ಗ
ಬಾಗಲಕೋಟೆ
ಬಳ್ಳಾರಿ
ಕೊಪ್ಪಳ
ವಿಜಯಪುರ
ಕಲಬುರ್ಗಿ
ಬೆಳಗಾವಿ
ಬೀದರ್
ಚಿಕ್ಕೋಡಿ
ರಾಯಚೂರು
ಜೆಡಿಎಸ್ ಗೆ ಸಿಗಲಿರುವ ಕ್ಷೇತ್ರಗಳು?
ಹಾಸನ
ಮಂಡ್ಯ
ಕೋಲಾರ
ಚಿಕ್ಕಬಳ್ಳಾಪುರ












Click it and Unblock the Notifications