ಚಿತ್ರಗಳಲ್ಲಿ: ರಾಖಿ, ರಾಹುಲ್, ಮೋದಿ, ಜಯಾ
ಬೆಂಗಳೂರು,
ಏ.2: ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳು ರಂಗು ರಂಗಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮ ಭಾರತ್ ವಿಜಯ್ ಯಾತ್ರೆ ಸಮಾವೇಶಗಳನ್ನು ಮುಂದುವರೆಸಿದ್ದಾರೆ. ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರ ಕಾರ್ಯಕೈಗೊಂಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ] id="toptextpromo"> id='are-slot-1' class='oiad oi-axt oiadv'>ರಾಷ್ಟ್ರೀಯ
ಆಮ್ ಆದ್ಮಿ ಪಕ್ಷ ಸ್ಥಾಪಿಸಿಕೊಂಡಿರುವ ನಟಿ ರಾಖಿ ಸಾವಂತ್ ಅವರು ತಮ್ಮ ಗುರುತು ಹಸಿ ಮೆಣಸಿನಕಾಯಿಗೆ ಮತ ನೀಡಿ ಎಂದು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ದೇಶದೆಲ್ಲೆಡೆಯ ವಿವಿಧ ಪಕ್ಷಗಳ ವಿವಿಧ ರಾಜಕಾರಣಿಗಳ ಚುನಾವಣಾ ಪ್ರಚಾರದ ಚಿತ್ರಗಳು ಇಲ್ಲಿವೆ [ಚಿತ್ರಗಳ ಕೃಪೆ: ಪಿಟಿಐ] id='are-slot-2' class='oiad oi-axt oiadv'>
ರಾಷ್ಟ್ರೀಯ ಆಮ್ ಆದ್ಮಿ ಪಕ್ಷದ ರಾಖಿ
ರಾಷ್ಟ್ರೀಯ ಆಮ್ ಆದ್ಮಿ ಪಕ್ಷ ಸ್ಥಾಪಿಸಿಕೊಂಡಿರುವ ನಟಿ ರಾಖಿ ಸಾವಂತ್ ಅವರು ತಮ್ಮ ಗುರುತು ಹಸಿ ಮೆಣಸಿನಕಾಯಿಗೆ ಮತ ನೀಡಿ ಎಂದು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ

ಕೊಯಮತ್ತೂರಿನಲ್ಲಿ ಜಯಲಲಿತಾ
ಕೊಯಮತ್ತೂರಿನಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ತಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸಿದರು

ಪ್ರಚಾರ ನಿರತ ನಿತೀಶ್ ಕುಮಾರ್
ವಿಕ್ರಮ್ ಗಂಜ್ ನಲ್ಲಿ ಚುನಾವಣಾ ಪ್ರಚಾರ ನಿರತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಮಧ್ಯಪ್ರದೇಶದಲ್ಲಿ ನರೇಂದ್ರ ಮೋದಿ
ಮಧ್ಯಪ್ರದೇಶದ ರೇವಾದಲ್ಲಿ ನಡೆದ ಭಾರತ್ ವಿಜಯ್ ಯಾತ್ರೆ ಸಮಾವೇಶದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

ಬಿಹಾರದಲ್ಲಿ ಲಾಲೂ ಪ್ರಚಾರ ಜೋರು
ಬಿಹಾರದಲ್ಲಿ ಮಾಜಿ ಮುಖ್ಯಮಂತ್ರಿ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪ್ರಚಾರ ಜೋರು..ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ಪ್ರಚಾರ ಕಾರ್ಯದಲ್ಲಿ ಕಪಿಲ್ ಸಿಬಾಲ್
ದೆಹಲಿಯ ಚಾಂದಿನಿ ಚೌಕ್ ನಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಕಪಿಲ್ ಸಿಬಾಲ್

ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಪ್ರಚಾರ
ದೆಹಲಿಯ ಚಾಂದಿನಿ ಚೌಕ್ ನಲ್ಲಿ ಪಕ್ಷದ ಅಭ್ಯರ್ಥಿ ಆಶುತೋಷ್ ಪರ ಅರವಿಂದ್ ಕೇಜ್ರಿವಾಲ್ ಪ್ರಚಾರ

ಔರಂಗಾಬಾದಿನಲ್ಲಿ ರಾಹುಲ್ ಗಾಂಧಿ
ಬಿಹಾರದ ಔರಂಗಾಬಾದಿನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತಯಾಚನೆ

ಜಮ್ಮುವಿನಲ್ಲಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ
ಜಮ್ಮುವಿನಲ್ಲಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಪಕ್ಷದ ಕಾರ್ಯಕರ್ತರಿಂದ ಸನ್ಮಾನ

ಎಕೆ ಎಂಟನಿ ಯುಡಿಎಫ್ ಪರ ಪ್ರಚಾರ
ಕೋಳಿಕ್ಕಾಡ್: ಯುಡಿಎಫ್ ಪರ ಪ್ರಚಾರ ನಿರತ ರಕ್ಷಣಾ ಸಚಿವ ಎಕೆ ಎಂಟನಿ

ಎಎಪಿ ಗುಲ್ ಪನಾಗ್ ಪ್ರಚಾರ
ಚಂದೀಗಢ: ಎಎಪಿ ಅಭ್ಯರ್ಥಿ ನಟಿ ಗುಲ್ ಪನಾಗ್ ಪ್ರಚಾರ

ಸೋನಿಯಾ ನಾಮಪತ್ರ ಸಲ್ಲಿಕೆ
ರಾಯ್ ಬರೇಲಿ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಗೋಪಾಲ್ ಶೆಟ್ಟಿ ನಾಮಪತ್ರ
ಮುಂಬೈನಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ(ಎಡ)

ಜರ್ನೈಲ್ ಸಿಂಗ್ ಜತೆ ಅರವಿಂದ್
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಜರ್ನೇಲ್ ಸಿಂಗ್ ಜತೆ ದೆಹಲಿಯಲ್ಲಿ ಮತಯಾಚನೆ

ಪಿಡಿಪಿ ಮೆಹಬೂಬಾ ಮುಫ್ತಿ ಪ್ರಚಾರ
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಪೀಪಲ್ಸ್ ಡೆಮೋಕ್ರಾಟಿಕ್ ಪಾರ್ಟಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

ಖಡ್ಗಧಾರಿ ಟಿಆರ್ ಎಸ್ ಚಂದ್ರಶೇಖರ್ ರಾವ್
ಖಡ್ಗಧಾರಿ ಟಿಆರ್ ಎಸ್ ಚಂದ್ರಶೇಖರ್ ರಾವ್ ಅವರು ಮೇಡಕ್ ಜಿಲ್ಲೆಯಲ್ಲಿ ಮತಯಾಚನೆ ನಡೆಸಿದರು.

ಭಾರಿ ಜನಸ್ತೋಮದ ನಡುವೆ ಸೋನಿಯಾ
ರಾಯ್ ಬರೇಲಿಯಲ್ಲಿ ಬುಧವಾರ ಭಾರಿ ಜನಸ್ತೋಮದ ನಡುವೆ ಸೋನಿಯಾ ಗಾಂಧಿ ಅವರು ನಾಮಪತ್ರ ಸಲ್ಲಿಸಿದರು.

ಮಹಾರಾಷ್ಟ್ರದಲಿ ಸಂತರಿಗೆ ನಮನ
ಮಹಾರಾಷ್ಟ್ರದ ನಾಸಿಕ್ ನ ದೇಗುಲದ ಬಳಿ ಸಂತರಿಗೆ ನಮನ ಸಲ್ಲಿಸುತ್ತಿರುವ ಲೋಕೋಪಯೋಗಿ ಸಚಿವ ಛಗನ್ ಭುಜ್ ಬಲ್

ಜಾರ್ಖಂಡ್ ನಲ್ಲಿ ಮೋದಿ ಭಾಷಣ
ಜಾರ್ಖಂಡ್ ನಲ್ಲಿ ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ ಭಾಷಣ












Click it and Unblock the Notifications