ಚುನಾವಣೆ 2014: ಈ ಅಂಕಿ ಅಂಶಗಳನ್ನು ನೆನಪಿಟ್ಕೊಳ್ಳಿ

ಬೆಂಗಳೂರು, ಮಾ.6: ಲೋಕಸಭಾ ಚುನಾವಣೆ 2014 ಏಪ್ರಿಲ್ 7 ರಿಂದ ಆರಂಭವಾಗಿ 9 ಹಂತಗಳಲ್ಲಿ ನಡೆಯಲಿದ್ದು ಮೇ 12ಕ್ಕೆ ಮುಗಿಯಲಿದೆ. ಮತ ಎಣಿಕೆ, ಫಲಿತಾಂಶ ಮೇ 16ರಂದು ಪ್ರಕಟವಾಗಲಿದೆ. ಮಾ.5ರಿಂದಲೇ ಚುನಾವಣಾ ನೀತಿ ಸಂಹಿತೆಯು ಜಾರಿ ಬಂದಿದ್ದು, ಚುನಾವಣೆಗಳು ಮುಗಿಯುವವರೆಗೂ ನೀತಿಸಂಹಿತೆ ಜಾರಿಯಲ್ಲಿರುತ್ತದೆ.

ಈ ಬಾರಿಯ ಲೋಕಸಭೆ ಚುನಾವಣೆ ಕುರಿತ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ:

Lok Sabha polls: Interesting points to note

* 9 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏ.17-ಮೇ.12 ರ ತನಕ ನಡೆಯುತ್ತಿದ್ದು, ಪ್ರಥಮ ಬಾರಿಗೆ ಇಷ್ಟು ದೀರ್ಘ ಅವಧಿ ಚುನಾವಣೆ ಇದಾಗಿದೆ. 2009ರಲ್ಲಿ 5 ಹಂತದಲ್ಲಿ ನಡೆದಿತ್ತು.
* ಸುಮಾರು 81.4 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 9.71 ಕೋಟಿ(ಶೇ 10 ರಷ್ಟು ಮಂದಿ) ಮೊದಲ ಬಾರಿಗೆ ಮತದಾನ ಮಾಡುವ ಉತ್ಸಾಹದಲ್ಲಿದ್ದಾರೆ.
* ಸುಮಾರು 1.1 ಕೋಟಿ ಚುನಾವಣಾ ಸಿಬ್ಬಂದಿಗಳು, ಅದರ ಅರ್ಧದಷ್ಟು ಸುರಕ್ಷತಾ ಸಿಬ್ಬಂದಿಗಳು ಪಾರದರ್ಶಕ ಮತದಾನ ಪ್ರಕ್ರಿಯೆಗಾಗಿ ಶ್ರಮಿಸಲಿದ್ದಾರೆ. 55 ಲಕ್ಷ ಮಂದಿ ಸ್ವಯಂ ಸೇವಕ ಸಿಬ್ಬಂದಿಗಳನ್ನು ಕೂಡಾ ಮತದಾನ ಪ್ರಕ್ರಿಯೆ ಸಂಬರ್ಧದಲ್ಲಿ ಆಯೋಗ ಬಳಸಿಕೊಳ್ಳಲಿದೆ.
* ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ 49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ "None of the Above"(NOTA) ಎಂದು ಮತದಾನ ಮಾಡಬಹುದು ಎಂದು ಇದು ಮತದಾರರಿಗೆ ಮೊಟ್ಟ ಮೊದಲ ಬಾರಿಗೆ ನೀಡಿರುವ ವ್ಯವಸ್ಥೆಯಾಗಿದ್ದು, ವಿದ್ಯುನ್ಮಾನ ಮತಯಂತ್ರ(ಇವಿಎಂ) ಗಳಲ್ಲಿ ಪ್ರತ್ಯೇಕ ಬಟನ್ ಒದಗಿಸಲಾಗುತ್ತದೆ [ವಿವರ ಇಲ್ಲಿ ಓದಿ]
* ದೇಶದಲ್ಲಿ ಸುಮಾರು 800,000 ಮತಗಟ್ಟೆಗಳ ಸ್ಥಾಪನೆಯಾಗಲಿದೆ. ಸುಮಾರು 12 ಲಕ್ಷ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್(ಇವಿಎಂ)ಗಳನ್ನು ಬಳಸಲಾಗುತ್ತದೆ.
* ಪ್ರತಿ ಮತದಾರ ತನ್ನ ಮತ ಖಾತ್ರಿಗಾಗಿ ದೃಢೀಕರಣ ರಸೀದಿಯನ್ನು ಪಡೆದುಕೊಳ್ಳುವ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ.
* ಏ.17ರಂದು ಕರ್ನಾಟಕ ಸೇರಿದಂತೆ ಅತಿ ಹೆಚ್ಚು ಕ್ಷೇತ್ರಗಳು(ಸುಮಾರು 142 ಲೋಕಸಭಾ ಕ್ಷೇತ್ರಗಳಲ್ಲಿ) 5ನೇ ಹಂತದಲ್ಲಿ ಮತದಾನ ನಡೆಯಲಿದೆ.
* 6ನೇ ಹಂತದಲ್ಲಿ ಹೆಚ್ಚು ಕ್ಷೇತ್ರಗಳಿರುವ ರಾಜ್ಯಗಳಲ್ಲಿ ಮತದಾನ ಬಿಹಾರದ 40 ಉತ್ತರಪ್ರದೇಶ 80 ಕ್ಷೇತ್ರಗಳು
* ಏ.7ರಂದು ಆರಂಭಿಕ ಹಂತದಲ್ಲಿ ಗರಿಷ್ಠ 7 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
* 3ನೇ ಹಂತದಲ್ಲಿ 14 ರಾಜ್ಯಗಳ 92 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. [ವಿವರಗಳು ಇಲ್ಲಿವೆ]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+