ವಡೋದರಾ: ಮತದಾನಕ್ಕೆ ಸಿಸಿಟಿವಿ ಹದ್ದಿನಕಣ್ಣು

ವಡೋದರಾ, ಏ.29- ಇಡೀ ವಿಶ್ವದ ಕಣ್ಣು ವಡೋದರಾ ಮತ್ತು ವಾರಣಾಸಿ ಲೋಕಸಭಾ ಚುನಾವಣೆಗಳ ಮೇಲೆ ನೆಟ್ಟಿದೆ. ಭಾರತದ ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗಿರುವ ನರೆಂದ್ರ ಮೋದಿ ಈ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಬಯಸಿರುವುದರಿಂದ ಇದಕ್ಕೆ ವಿಶೇಷ ಮಹತ್ವ ಬಂದಿದೆ.

ಹಾಗಾಗಿ ಚುನಾವಣೆ ಸಂಪೂರ್ಣ ಪಾರದರ್ಶಕವಾಗಿರಲಿ ಮತ್ತು ಯಾವುದೇ ಲೋಪ ಕಾಣಬರದಿರಲಿ ಎಂದು ಚುನಾವಣಾ ಆಯೋಗವೂ ಸಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜತೆಗೆ, ಇದೇ ಮೊದಲ ಬಾರಿಗೆ ವಿನೂತನ ಪ್ರಯೋಗವೊಂದಕ್ಕೂ ಕೈ ಹಾಕಿದೆ. ಆಯೋಗವು ಗುಜರಾತಿನ ವಡೋದರ ಲೋಕಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಿಗೂ ಸಿಸಿಟಿವಿ (CCTV surveillance) ಅಳವಡಿಸಿದೆ ಎಂದು ವಡೋದರಾ ಜಿಲ್ಲಾ ಚುನಾವಣಾ ಅಧಿಕಾರಿ ವಿನೋದ್ ರಾವ್ ವಿವರಿಸಿದ್ದಾರೆ.

Lok Sabha polls 2014 betting - CCTV to surveillance polling in Vadodara

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಎದುರಿಗೆ ಕಾಂಗ್ರೆಸ್ (ಮಧುಸೂದನ ಮಿಸ್ತ್ರಿ), ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ಕಣದಲ್ಲಿ ರಣಕಹಳೆ ಮೊಳಗಿದ್ದಾರೆ. ಏಪ್ರಿಲ್ 30ರಂದು ಗುಜರಾತಿನ ಎಲ್ಲ 26 ಲೋಕಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. (ಚಾಲೆಂಜ್! ಈ ಮೂರೂ ಗ್ರಾಮಗಳಲ್ಲಿ ಮೋದಿಗೇ ಮತ)

To be on safer side:
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಒಟ್ಟಾರೆ 1,591 ಮತಗಟ್ಟೆಗಳಿಗೂ ಚುನಾವಣಾ ಆಯೋಗ ಈ ಬಾರಿ CCTV ಕ್ಯಾಮರಾಗಳನ್ನು ಅಳವಡಿಸಿದೆ. ಇಲ್ಲಿನ ಮತಗಟ್ಟೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯ ಪ್ರತಿಯೊಂದೂ ದೃಶ್ಯದ ಸಕಲವನ್ನೂ ಸಿಸಿಟಿವಿ ಕ್ಯಾಮೆರಾ ಕಣ್ಣುಗಳು ಯಥಾವತ್ತಾಗಿ ಸೆರೆ ಹಿಡಿಯಲಿ. ಮುಂದೆ ತಕರಾರು ಎದುರಾದರೆ ಅವರೆದುರು ಕ್ಯಾಮರಾ ತೋರಿಸಿದರಾಯಿತು ಎಂಬುದು ಆಯೋಗದ ಉದ್ದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+