ಮೇ 3ರ ನಂತರ ಹೇಗೆ? ಪ್ರಧಾನಿ ಮೋದಿಯನ್ನು ಈಗಲೇ ಎಚ್ಚರಿಸಿದ ಸೋನಿಯಾ ಗಾಂಧಿ

ನವದೆಹಲಿ, ಏಪ್ರಿಲ್ 23: ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಹಲವು ಎಚ್ಚರಿಕೆಯನ್ನು ರಾಹುಲ್ ಗಾಂಧಿ, ಮೋದಿ ಸರಕಾರಕ್ಕೆ ನೀಡಿದ್ದರು. ಈಗ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ, ಕೇಂದ್ರ ಸರಕಾರಕ್ಕೆ ಮುನ್ನೆಚ್ಚರಿಕೆ ವಹಿಸಿಕೊಳ್ಳಿ ಎಂದಿದ್ದಾರೆ.

Recommended Video

      ಆರ್ನುಬ್ ಗೋಸ್ವಾಮಿ ಮೇಲೆ ಹಲ್ಲೆ ನಡೆಸಿದವರ ಬಂಧನ | Arnub Gosvami

      "ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಚಾರದಲ್ಲಿ ಕಾಂಗ್ರೆಸ್ ಈಗಾಗಲೇ ಕೇಂದ್ರ ಸರಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದೆ. ಆದರೆ, ಲಾಕ್ ಡೌನ್ ಈಗ ಸಾಗುತ್ತಿರುವ ಹಾಗೇ ಮುಂದಿನ ದಿನಗಳಲ್ಲೂ ಸಾಗಿದರೆ ಮತ್ತು ಮೇ ಮೂರರ ನಂತರ ಲಾಕ್ ಡೌನ್ ಹಿಂದಕ್ಕೆ ಪಡೆದುಕೊಂಡರೆ, ಪರಿಸ್ಥಿತಿ ಗಂಭೀರವಾಗಲಿದೆ" ಎಂದು ಸೋನಿಯಾ ಗಾಂಧಿ ಎಚ್ಚರಿಕೆಯನ್ನು ನೀಡಿದ್ದಾರೆ.

      ಲಾಕ್ ಡೌನ್ ಜಾರಿಯಾದ ನಂತರ ಎರಡನೇ ಬಾರಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ಮಾತನಾಡುತ್ತಿದ್ದ ಸೋನಿಯಾ, "ಕೊರೊನಾ ಹರುಡುತ್ತಿರುವುದು ಮತ್ತು ದೇಶಾದ್ಯಂತ ಸೋಂಕು ಹೆಚ್ಚಾಗುತ್ತಿರುವುದು ಗಂಭೀರ ವಿಚಾರ" ಎಂದಿದ್ದಾರೆ.

      Lock Down At Present Nature, After May 3rd Would Be Even More Devasting, Sonia Gandhi

      "ಲಾಕ್ ಡೌನ್ ಜಾರಿಯಾದ ನಂತರ, ಪ್ರಮುಖವಾಗಿ ರೈತರು, ವಲಸೆ ಕಾರ್ಮಿಕರು, ಕಟ್ಟಡ ಕೆಲಸಗಾರರು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ" ಎಂದು ಸೋನಿಯಾ ಸಭೆಯಲ್ಲಿ ಹೇಳಿದರು.

      "ಅಸಂಘಟಿತ ವಲಯ, ಕೈಗಾರಿಕೆ, ವಾಣಿಜ್ಯೋದ್ಯಮ ಸ್ಥಗಿತಗೊಂಡಿರುವುದರಿಂದ ಎಲ್ಲರ ಜೀವನ ದುಸ್ಥರವಾಗಿದೆ"ಎಂದು ವರ್ಕಿಂಗ್ ಕಮಿಟಿ ಸಭೆಯಲ್ಲಿ ಸೋನಿಯಾ ವಿಷಾದ ವ್ಯಕ್ತಪಡಿಸಿದರು.

      "ಮೇ ಮೂರರ ನಂತರ, ದೇಶದಲ್ಲಿ ಪರಿಸ್ಥಿತಿಯನ್ನು ಯಾವರೀತಿ ನಿಭಾಯಿಸಬೇಕು ಎನ್ನುವ ಸ್ಪಷ್ಟ ಮಾರ್ಗಸೂಚಿ ಕೇಂದ್ರ ಸರಕಾರ ಇನ್ನೂ ರೂಪಿಸಿದಂತೆ ಇಲ್ಲ" ಎಂದು ಸೋನಿಯಾ ಗಾಂಧಿ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+