ಲಾಕ್ಡೌನ್ 5.0 ಹೇಗಿರಬಹುದು? 11 ನಗರಗಳ ಮೇಲ್ಯಾಕೆ ಕಣ್ಣು?

ನವದೆಹಲಿ, ಮೇ 27: ಮೇ 31ರ ನಂತರ ಕೇಂದ್ರ ಸರ್ಕಾರವು ಲಾಕ್ಡೌನ್ 5.0 ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Recommended Video

      ಏನ್ರೀ ಇದು ಹೀಗಾ ನಾಗರಹಾವು ಹಿಡಿಯೋದು ಭಯನೇ ಇಲ್ವಲ್ರೀ ಈ ಮಹಿಳೆಗೆ | Oneindia Kannada

      ಸದ್ಯ ಜಾರಿಯಲ್ಲಿರುವ ಲಾಕ್ಡೌನ್ ಮುಗಿದ ಬಳಿಕ ಇನ್ನೂ ಎರಡು ವಾರಗಳ ಕಾಲ ಲಾಕ್ಡೌನ್ ಮುಂದುವರೆಸುವ ಸಾಧ್ಯತೆಯಿದೆ. ಈ ಬಾರಿ ಹೆಚ್ಚಿನ ಮಟ್ಟದ ವಿನಾಯತಿ ನೀಡಲಾಗುತ್ತದೆ. ದೇಶದಲ್ಲಿ ಕೊರೊನಾವೈರಸ್ ಪೀಡಿತ 11 ನಗರಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂಬ ಸುದ್ದಿಯಿದೆ. ಲಾಕ್ಡೌನ್ 5.0ರಲ್ಲೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ.

      ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 1.5 ಲಕ್ಷ ದಾಟಿದ್ದು, ಕಳೆದ 14 ದಿನಗಳಲ್ಲಿ ಸಂಖ್ಯೆ ದ್ವಿಗುಣಗೊಂಡಿದೆ. ಮೃತಪಟ್ಟವರ ಸಂಖ್ಯೆ 4,337ಕ್ಕೇರಿದೆ.

       ಯಾವ ನಗರಗಳ ಮೇಲೆ ನಿಗಾ

      ಯಾವ ನಗರಗಳ ಮೇಲೆ ನಿಗಾ

      ಯಾವ ನಗರಗಳ ಮೇಲೆ ನಿಗಾ: ಮುಂದಿನ ಹಂತದ ಲಾಕ್ಡೌನ್ ಅವಧಿಯಲ್ಲಿ 11 ನಗರಗಳಲ್ಲಿ ಹೆಚ್ಚಿನ ಕಡಿವಾಣ ಇರಲಿದೆ. ಈ ನಗರಗಳು ದೇಶದ ಶೇ 70ರಷ್ಟು ಕೊವಿಡ್ 19 ಪ್ರಕರಣಗಳಿಗೆ ಕಾರಣವಾಗಿವೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಅಹಮದಾಬಾದ್, ಕೋಲ್ಕತಾ ಅಲ್ಲದೆ ಪುಣೆ, ಥಾಣೆ, ಜೈಪುರ, ಸೂರತ್ ಹಾಗೂ ಇಂದೋರ್ ಮೇಲೆ ಹೆಚ್ಚಿನ ಕಣ್ಗಾವಲು ಇರಿಸಲಾಗುತ್ತದೆ.

       ಸೋಂಕು ಹರಡುವ ಪ್ರಮಾಣ ತಗ್ಗಿಲ್ಲ

      ಸೋಂಕು ಹರಡುವ ಪ್ರಮಾಣ ತಗ್ಗಿಲ್ಲ

      ಸೋಂಕು ಪ್ರಕರಣಗಳು ಕಡಿಮೆಯಾದರೂ ಸೋಂಕು ಹರಡುವ ಪ್ರಮಾಣವನ್ನು ಸಮತಟ್ಟುಗೊಳಿಸಲು ಸಾಧ್ಯವಾಗಿಲ್ಲ. ನಾಲ್ಕನೇ ಲಾಕ್ಡೌನ್ ನಲ್ಲಿ ಕಂಟೈನ್ಮೆಂಟ್ ಜೋನ್ ಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿತ್ತು. ಮಾರುಕಟ್ಟೆ, ಕಚೇರಿ, ಕೈಗಾರಿಕೆ, ಬಸ್, ವಿಮಾನ, ರೈಲು ಸಂಚಾರ ಪುನರ್ ಆರಂಭಿಸಲಾಯಿತು.

      ಲಾಕ್ಡೌನ್ 5.0ರಲ್ಲಿ ಏನು ನಿರೀಕ್ಷಿಸಬಹುದು

      ಲಾಕ್ಡೌನ್ 5.0ರಲ್ಲಿ ಏನು ನಿರೀಕ್ಷಿಸಬಹುದು

      ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಆದರೆ, ಜಾತ್ರೆ, ಉರುಸ್ ನಡೆಸಲು ಅನುಮತಿ ಇರುವುದಿಲ್ಲ. ಜಿಮ್ನಾಜಿಸ್ಟ್ ಕೇಂದ್ರಗಳು, ಕ್ರೀಡಾ ಚಟುವಟಿಕೆ ಕೇಂದ್ರಗಳು ಪುನರ್ ಆರಂಭಿಸಬಹುದು. ಸರ್ಕಾರಿ, ಖಾಸಗಿ ಕಚೇರಿ, ಐಟಿ ಬಿಟಿ ಜೊತೆಗೆ ಕೈಗಾರಿಕಾ ಘಟಕ, ಲಾಜಿಸಿಕ್ಟ್ ಕ್ಷೇತ್ರದ ಚಟುವಟಿಕೆಗೆ ಅನುಮತಿ ಸಿಗಬಹುದು.

       ಶಾಪಿಂಗ್ ಮಾಲ್, ಚಿತ್ರಮಂದಿರ ಓಪನ್ ಆಗಲ್ಲ

      ಶಾಪಿಂಗ್ ಮಾಲ್, ಚಿತ್ರಮಂದಿರ ಓಪನ್ ಆಗಲ್ಲ

      ಆದರೆ, ಶಾಪಿಂಗ್ ಮಾಲ್, ಚಿತ್ರಮಂದಿರ, ರಂಗ ಮಂದಿರ, ಶಾಲೆ, ಶಿಕ್ಷಣ ಕೇಂದ್ರ ಮುಂತಾದ ಹೆಚ್ಚು ಜನ ಸೇರುವ ಕೇಂದ್ರಗಳನ್ನು ಆರಂಭಿಸಲು ಅನುಮತಿ ನೀಡುವುದಿಲ್ಲ. ಕೆಲವು ರಾಜ್ಯಗಳಿಂದ ಶಾಲೆ ಆರಂಭಿಸಲು ಮನವಿ ಬಂದಿದೆಯಾದ್ರೂ, ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಪರೀಕ್ಷೆ ನಡೆಸಲು ಮಾತ್ರ ಅನುಮತಿ ಸಿಕ್ಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+