• search

ಅಡ್ವಾಣಿಗೆ ತೊಂಬತ್ತು: ಶುಭಕೋರಿದ ಪ್ರಧಾನಿ ಮೋದಿ

By Trupti Hegde
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ನವೆಂಬರ್ 08: 2002 ರಿಂದ 2004ರವರೆಗೆ ಉಪ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿಯವರ ಜನ್ಮದಿನ ಇಂದು. 1927 ನವೆಂಬರ್ 8 ರಂದು ಜನಿಸಿದ ಅಡ್ವಾಣಿಯವರು ಪ್ರಖರ ಹಿಂದುತ್ವವಾದಿಯಾಗಿ ಗುರುತಿಸಿಕೊಂಡವರು.

  ಭಾರತೀಯ ಜನತಾ ಪಕ್ಷ ಇಂದು ಕೇಂದ್ರದಲ್ಲಿ ಸ್ವತಂತ್ರವಾಗಿ ಆಡಳಿತ ನಡೆಸುತ್ತಿದ್ದರೆ ಅದರಲ್ಲಿ ಅಡ್ವಾಣಿಯವರ ಕೊಡುಗೆ ಅಪಾರವಿದೆ. ಅಪನಗದೀಕರಣದ ಸುದ್ದಿಯ ಸದ್ದಿನಲ್ಲೂ ಅಡ್ವಾಣಿಯವರ ಜನ್ಮದಿನದ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

  ಕರಾಚಿಯ ವ್ಯಾಪಾರಿ ಕಿಶನ್ ಚಂದ್ ಅಡ್ವಾಣಿ ಮತ್ತು ಗ್ಯಾನಿ ದೇವಿ ಅವರ ಪುತ್ರನಾಗಿ ಜನಿಸಿದ ಅಡ್ವಾಣಿಯವರಿಗೆ ಈಗ 90ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಚಿಕ್ಕ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಅಡ್ವಾಣಿಯವರ ಹೆಸರು ಬಾಂಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಕೇಳಿಬಂದಿತ್ತು.

  ಮತ್ತೊಂದು ಅವಧಿಗೆ ಅಧ್ಯಕ್ಷರಾದ ಲಾಲ್ ಕೃಷ್ಣ ಅಡ್ವಾಣಿ

  "ದೇಶದ ಸೇವೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟ ರಾಜಕೀಯ ಅಗ್ರಗಣ್ಯರಾದ ಎಲ್.ಕೆ.ಅಡ್ವಾಣಿಯವರಿಗೆ ಜನ್ಮದಿನದ ಶುಭಾಶಯಗಳು" ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

  ಜೊತೆಗೆ ದೇಶದ ಹಲವು ಗಣ್ಯರು ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ಅಡ್ವಾಣಿಯವರಿಗೆ ಜನ್ಮದಿನದ ಶುಭ ಕೋರಿದ್ದಾರೆ.

  ನರೇಂದ್ರ ಮೋದಿ

  ಲಾಲ್ ಕೃಷ್ಣ ಅಡ್ವಾಣಿಯವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೇವರು ಆಯುರಾರೋಗ್ಯ ನೀಡಲಿ ಎಂದು ನಾನು ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

  ಆದರಣೀಯ ಅಡ್ವಾಣಿಜೀ ಅವರಿಗೆ ಶುಭಕಾಮನೆಗಳು

  ಆದರಣೀಯ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ನಾನು ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಿಂದಿಯಲ್ಲಿಯೇ ಟ್ವೀಟ್ ಮಾಡಿದ್ದಾರೆ.

  ನಮ್ಮ ಮಹಾನಾಯಕನಿಗೆ ಶುಭಾಶಯಗಳು

  ಉಪಪ್ರಧಾನಿಯಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಜನ್ಮದಿನದ ಶುಭಾಶಯಗಳು. ಅವರು ನಮ್ಮೆಲ್ಲರ ಮಹಾನಾಯಕ. ಅವರಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ದಯಪಾಲಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.

  ಅವರು ನಮಗೆ ತಂದೆಯ ಸಮಾನ

  ಲಾಲ್ ಕೃಷ್ಣ ಅಡ್ವಾಣಿಯವರ 90 ನೇ ಹುಟ್ಟುಹಬ್ಬಕ್ಕೆ ಶುಭ ಕೋರಲು ಅವರ ಮನೆಗೆ ತೆರಳಿದ್ದೆ. ಅವರು ನಮಗೆ ತಂದೆ ಸಮಾನರು ಮತ್ತು ಮಹಾನ್ ನಾಯಕರು. ಅವರಿಗೆ ಆರೋಗ್ಯಪೂರ್ಣ ಜೀವನ ಸಿಗಲಿ ಎಂದು ಹಾರೈಸುತ್ತೇನೆ ಎಂದು ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  RSS and BJP leader, former president of BJP, former deputy prime minister of India, Lal Krishna Advani is celebrating his 90th birthday on Nov.8th. Prime minister Narendra Modi wishes him on twitter.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more