ಮೂವರು ಸುಂದರಿಯರನ್ನು ಮದುವೆಯಾದರೂ ಈ ಐವರು ಬಾಲಿವುಡ್ ನಟಿಯರ ಜೊತೆಗೆ ಅಫೇರ್ ಹೊಂದಿದ್ದ ಇಮ್ರಾನ್ ಖಾನ್!
ಇತ್ತೀಚೆಗೆ ಸಾನಿಯಾ ಮಿರ್ಜಾ & ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಮದುವೆ ವಿಚಾರ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಇಮ್ರಾನ್ ಖಾನ್ ಕಥೆಯನ್ನ ಕೆಲವರು ಈಗ ಮರೆತೇ ಹೋಗಿದ್ದಾರೆ. ಇಮ್ರಾನ್ ಖಾನ್ ಮೂವರು ಸುಂದರಿಯರನ್ನು ಮದುವೆಯಾದರೂ ಈ ಐವರು ಬಾಲಿವುಡ್ ನಟಿಯರ ಜೊತೆಗೆ ಅಫೇರ್ ಹೊಂದಿದ್ದರು. ಆ ಬಾಲಿವುಡ್ ಬ್ಯೂಟಿಸ್ ಯಾರೆಲ್ಲಾ ಗೊತ್ತೆ? ಬನ್ನಿ ತಿಳಿಯೋಣ.
ಕ್ರಿಕೆಟ್ ಲೋಕ ದುಡ್ಡಿನ ಜೊತೆ ಹೆಣ್ಣಿನ ವ್ಯಾಮೋಹ ಕೂಡ ಕಲಿಸುತ್ತದೆ ಎಂಬ ಆರೋಪ ಕೇಳಿಬರುತ್ತದೆ. ಇಂತಹ ಆರೋಪಕ್ಕೆ ಇಮ್ರಾನ್ ಖಾನ್ ಒಂದು ಉದಾಹರಣೆ ಎನ್ನಬಹುದು. ಯಾಕಂದ್ರೆ ಈ ಸ್ಟಾರ್ ಆಟಗಾರ ಇಮ್ರಾನ್ ಖಾನ್ ಮಾಡಿಕೊಂಡಿದ್ದ ಎಡವಟ್ಟು ಒಂದಾ? ಎರಡಾ? ಅದ್ರಲ್ಲೂ ಬಾಲಿವುಡ್ ನಟಿಯರು ಹಾಗೂ ಇಮ್ರಾನ್ ಖಾನ್ ಜೊತೆಗೆ ಸಂಬಂಧ ಇದೆ ಅಂತಾ ಹಲವರ ಹೆಸರು ಉಲ್ಲೇಖ ಆಗಿತ್ತು. ಹಾಗಾದರೆ ಯಾವ ಯಾವ ನಟಿಯರನ್ನ ಇಮ್ರಾನ್ ಖಾನ್ ಜೊತೆ ಹೋಲಿಸಲಾಗಿತ್ತು? ಭಾರತದ ಯಾವ ಯಾವ ನಟಿಯರ ಜೊತೆಗೆ ಇಮ್ರಾನ್ ಖಾನ್‌ಗೆ ಲವ್ ಆಗಿತ್ತು? ಬನ್ನಿ ತಿಳಿಯೋಣ.

ರೇಖಾ ಜೊತೆ ಇಮ್ರಾನ್ ಅಫೇರ್?
ಮೊದಲನೆಯದಾಗಿ ಬಾಲಿವುಡ್ ನಟಿ ರೇಖಾ ಜೊತೆಗೆ ಇಮ್ರಾನ್ ಖಾನ್‌ಗೆ ಸಂಬಂಧ ಇದ್ದು ಮದುವೆ ಆಗುತ್ತಾರೆ ಎಂಬ ಸುದ್ದಿ ಓಡಾಡಿತ್ತು. ಇಬ್ಬರೂ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಒಂದು ಕಾಲಕ್ಕೆ ಹೀಗೆ ಪಾಕಿಸ್ತಾನ ಕ್ರಿಕೆಟಿಗ ಇಮ್ರಾನ್ ಖಾನ್ & ರೇಖಾ ನಡುವಿನ ಸಂಬಂಧದ ವದಂತಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ಅದ್ರಲ್ಲೂ 1985ರಲ್ಲಿ ಭಾರತದ ನಟಿ ರೇಖಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಇಮ್ರಾನ್ ಖಾನ್ ಮದುವೆ ಆಗೋದು ಫಿಕ್ಸ್ ಎಂದು ವರದಿಗಳು ಕೂಡ ಪ್ರಕಟ ಆಗಿದ್ದವು. ಹೀಗಿದ್ದಾಗ ರೇಖಾ & ಇಮ್ರಾನ್ ಒಟ್ಟೊಟ್ಟಿಗೆ ಕೈಕೈಹಿಡಿದು ಮುಂಬೈನಲ್ಲಿ ಕಾಣಿಸಿಬಿಟ್ಟರು. ಆದರೆ ಮದುವೆ ಮಾತ್ರ ನಡೆಯಲೇ ಇಲ್ಲ.
ಜೀನತ್ ಅಮಾನ್ + ಇಮ್ರಾನ್ ಖಾನ್?
ಬಾಲಿವುಡ್ ನಟಿ ರೇಖಾ ರೀತಿಯೇ ಖ್ಯಾತ ಬಾಲಿವುಡ್ ನಟಿ ಜೀನತ್ ಅಮಾನ್ & ಇಮ್ರಾನ್ ಖಾನ್ ಪ್ರಣಯದಲ್ಲಿ ತೊಡಗಿದ್ದಾರೆ. ಅವರು ಮದುವೆ ಆಗೋದು ಫಿಕ್ಸ್ ಎನ್ನಲಾಗಿತ್ತು. ಈ ವದಂತಿ ವ್ಯಾಪಕವಾಗಿ ಹರಡಿತ್ತು. 1979 ರ ನವೆಂಬರ್‌ನಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಭೇಟಿ ನೀಡಿದ ವೇಳೆ ಈ ಊಹಾಪೋಹ ಮೊದಲು ಹುಟ್ಟಿಕೊಂಡಿತು ಅವರ ಸಂಬಂಧದ ಮಾತುಗಳು ಮೊದಲು ಸ್ಫೋಟವಾಗಿದ್ದವು. ಅಲ್ಲದೆ ಮತ್ತೊಂದು ವಿಚಾರ ಕೂಡ ಸಖತ್ ಸದ್ದು ಮಾಡಿತ್ತು.

ಹುಟ್ಟುಹಬ್ಬದಲ್ಲಿ ಬಾಲಿವುಡ್ ಬ್ಯೂಟಿ?
ಹೀಗೆ ಇಮ್ರಾನ್ ಅವರ 27 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಬೆಂಗಳೂರಿನ ಚಿನ್ನಸ್ವಾಮಿಗೆ ಮ್ಯಾಚ್‌ಗಾಗಿ ಬಂದಿದ್ದರು. ಆಗ ಕ್ರಿಕೆಟ್ ಸ್ಟೇಡಿಯಂನ ಡ್ರೆಸ್ಸಿಂಗ್ ರೂಂನಲ್ಲಿಯೇ ಪಾಕ್‌ನ ಸಹ ಆಟಗಾರರ ಜೊತೆ ಹುಟ್ಟುಹಬ್ಬ ಆಚರಿಸಿದ್ದರು ಇಮ್ರಾನ್ ಖಾನ್. ಹೀಗಿದ್ದರೂ ಇದೇ ವೇಳೆ ಕೆಲ ಪತ್ರಿಕೆಗಳು ಇಮ್ರಾನ್ ತನ್ನ ಹುಟ್ಟುಹಬ್ಬವನ್ನು ಬಾಲಿವುಡ್ ಬ್ಯೂಟಿ, ಜೀನತ್ ಅಮಾನ್ ಜೊತೆ ಆಚರಿಸಿದ್ದಾರೆ ಎಂದು ಬರೆದವು. ಮಾಧ್ಯಮ ವರದಿ ಹೊರತಾಗಿಯೂ ಇಮ್ರಾನ್ ಅಥವಾ ಜೀನತ್ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಲೇ ಇಲ್ಲ.
ಇಮ್ರಾನ್ ಖಾನ್‌ದು ಬರೀ ಇಂತವೆಯ!
ಹೀಗೆ ಇಮ್ರಾನ್ ಖಾನ್ ತನ್ನ ಕ್ರಿಕೆಟ್ ಆಟಕ್ಕಿಂತಲೂ ಹೆಚ್ಚಾಗಿ ಬರೀ ಲವ್ ಅಫೇರ್ ಮೂಲಕವೇ ಸದ್ದು ಮಾಡಿದ್ದರು. ಅದರಲ್ಲೂ ಹೀಗೆ ರೇಖಾ ಹಾಗೂ ಜೀನತ್ ಅಮಾನ್ ಜೊತೆಗೆ ಪಾಕ್ ಕ್ರಿಕೆಟರ್ ಇಮ್ರಾನ್ ಖಾನ್ ಹಾಗೂ ಶಭಾನಾ ಅಝ್ಮಿ ನಡುವೆ ಲವ್ವಿಡವ್ವಿ ಇದೆ ಎನ್ನುತ್ತಿತ್ತು ಕ್ರಿಕೆಟ್ ಜಗತ್ತು. ಹಾಗೇ ಬಾಲಿವುಡ್ ಅಂಗಳದಲ್ಲೂ ಇಬ್ಬರ ಲವ್ ಮ್ಯಾಟರ್ ಬರೋಬ್ಬರಿ ಹರಡಿಕೊಂಡಿತ್ತು. ಆದರೆ ಎಂದಿಗೂ ಈ ಬಗ್ಗೆ ಇಮ್ರಾನ್ ಖಾನ್ ಅಥವಾ ಶಭಾನಾ ಅಝ್ಮಿ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಈ ಸುದ್ದಿ ಕೂಡ ಗಾಳಿ ಸುದ್ದಿ ಆಗೋಯಿತು.

ವಿಶ್ವಕಪ್ ಗೆದ್ದಾಗ ಭರ್ಜರಿ ಹವಾ!
ಪಾಕಿಸ್ತಾನ ಕಂಡ ಗ್ರೇಟೆಸ್ಟ್ ಕ್ರಿಕೆಟರ್ ಎಂಬ ಖ್ಯಾತಿ ಪಡೆದಿದ್ದ ಇಮ್ರಾನ್ ಖಾನ್ ಲವ್ವಿಡವ್ವಿ ವಿಚಾರವಾಗಿ ಸಖತ್ ಸದ್ದು ಮಾಡುತ್ತಿದ್ದರು. ಇದು ಭಾರತದ ಮಾಧ್ಯಮಗಳಲ್ಲಿ ಮಾತ್ರವೇ ಅಲ್ಲದೆ ಪಾಕಿಸ್ತಾನದ ಮಾಧ್ಯಗಳಲ್ಲಿ ಕೂಡ ದೊಡ್ಡ ಸೌಂಡ್ ಮಾಡುತ್ತಿತ್ತು. ಅದ್ರಲ್ಲೂ ಈ ಆಟಗಾರ ವಿಶ್ವಕಪ್ ಗೆದ್ದುಕೊಟ್ಟ ನಂತರ ಆತನ ಹಿಂದೆ ನಟಿಯರ ದಂಡೇ ಬೀಳುತ್ತಿತ್ತು ಎಂಬ ಗಾಳಿ ಸುದ್ದಿ ಬಲು ಜೋರಾಗಿತ್ತು. ಹೀಗೆ ಶಭಾನಾ ಅಝ್ಮಿ ವಿಚಾರ ಕೂಡ ಸದ್ದನ್ನ ಮಾಡಿತ್ತು. ಹಾಗೇ ಇನ್ನೊಬ್ಬರು ಬಾಲಿವುಡ್ + ಬೆಂಗಾಲಿ ಬ್ಯೂಟಿ ಕೂಡ ಇಮ್ರಾನ್ ಹಿಂದೆ ಬಿದ್ದಿದ್ದರು ಎಂಬ ಸುದ್ದಿ ಹರಡಿತ್ತು. ಅದು ಯಾರು ಗೊತ್ತೆ? ಮುಂದೆ ಓದಿ.
ಬೆಂಗಾಲಿ ನಟಿಯ ಜೊತೆಗೂ ಅಫೇರ್?
ಈಗ ಪಾಕಿಸ್ತಾನ ಜೈಲಲ್ಲಿ ಕಂಬಿ ಎಣಿಸುತ್ತಿರುವ, ಮಾಜಿ ಕ್ರಿಕೆಟರ್ ಕಂ ರಾಜಕಾರಣಿಯಾದ ಇಮ್ರಾನ್ ಖಾನ್ ಮತ್ತೊಬ್ಬ ಭಾರತದ ನಟಿ ಜೊತೆ ಅಫೇರ್ ಇಟ್ಟುಕೊಂಡಿದ್ದರು ಎನ್ನುವ ಸುದ್ದಿ ಹರಡಿತ್ತು. ಅಷ್ಟಕ್ಕೂ ಇಮ್ರಾನ್ ಖಾನ್ ಮತ್ತು ಬೆಂಗಾಲಿ ನಟಿ ಮೂನ್ ಮೂನ್ ಸೇನ್ ನಡುವಿನ ಸಂಬಂಧದ ಸುತ್ತ ಸಾಕಷ್ಟು ಹಲ್‌ಚಲ್ ಎದ್ದಿತ್ತು. ಹೀಗೆ ಇಮ್ರಾನ್ ಹಾಗೂ ಸೇನ್ ನಡುವಿನ ಆತ್ಮೀಯತೆ ಬಗ್ಗೆಯೂ ಚರ್ಚೆಯಾಗಿತ್ತು. ಇಷ್ಟಾದರೂ ಈ ಸುದ್ದಿ ಕೂಡ ಗಾಳಿಗೆ ತೇಲಿ ಹೋಗಿತ್ತು.

3 ಹೆಂಡತಿಯರ ಮುದ್ದಿನ ಗಂಡ!
ಬೆಂಗಾಲಿ ನಟಿ ಮೂನ್ ಮೂನ್ ಸೇನ್ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಹೀಗೆ ಅವರ ಹೆಸರು ಇಮ್ರಾನ್ ಖಾನ್ ಜೊತೆಗೆ ಅಂಟಿಕೊಂಡ ನಂತರ ಸಿನಿ ರಂಗದಲ್ಲಿ ಈ ಬಗ್ಗೆ ಚರ್ಚೆ ಬಲು ಜೋರಾಗಿತ್ತು. ಆದರೆ ಈ ಯಾವುದೇ ಸುದ್ದಿಗಳು ಕೂಡ ಇಮ್ರಾನ್‌ಗೆ ಮದುವೆಯನ್ನ ಮಾಡಿಸಲೇ ಇಲ್ಲ. ಕೊನೆಗೆ ಇಮ್ರಾನ್ 3 ಹೆಂಡತಿಯರನ್ನ ಪಡೆದರೂ ಹೊರಗೆ ಹಲವಾರು ಜನರ ಜೊತೆಗೆ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇಷ್ಟೆಲ್ಲಾ ಆಟ ಆಡಿದ್ದ ಇಮ್ರಾನ್ ಖಾನ್ ಈಗ ನೋಡಿದರೆ ಪಾಕಿಸ್ತಾನದ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಆದ್ರೆ ತನ್ನ ಕ್ರಿಕೆಟ್ ಉತ್ತುಂಗದ ಸಮಯದಲ್ಲಿ ಇಮ್ರಾನ್ ಇಂತಹ ಹಲವು ಸುದ್ದಿಗೆ ಆಹಾರ ಆಗಿದ್ದರು. ಈಗ ಪಾಕ್‌ನ ರಾಜಕಾರಣಿಗಳಿಗೆ ಟಾರ್ಗೆಟ್ ಆಗಿರುವ ಇಮ್ರಾನ್ ಖಾನ್, ಪಾಕಿಸ್ತಾನದ ಸೇನೆಯ ಕೆಂಗಣ್ಣಿಗೂ ಗುರಿಯಾಗಿ ಜೈಲು ಸೇರಿದ್ದಾರೆ.












Click it and Unblock the Notifications