Liquor Price Hike: ಮದ್ಯ & ಸಿಗರೇಟ್ ಮೇಲೆ ಶೇ.40% Sin Tax ಸಾಧ್ಯತೆ, ಏನಿದು GST 2.0 ?
Liquor Price Hike: ಕೇಂದ್ರ ಬಿಜೆಪಿ ಸರ್ಕಾರವು ಮದ್ಯ, ಸಿಗರೇಟ್ ಪ್ರಿಯರು ಹಾಗೂ ಗೇಮಿಂಗ್ ಕ್ಷೇತ್ರಕ್ಕೆ ಶಾಕ್ ನೀಡುವುದಕ್ಕೆ ಮುಂದಾಗಿದೆ ಎಂದು ಹೇಳಲಾಗಿದ್ದು ಇದು ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಮದ್ಯ ಹಾಗೂ ಸಿಗರೇಟ್ ಸೇರಿದಂತೆ ವಿವಿಧ ವಸ್ತುಗಳ ಮೇಲೆ ದುಬಾರಿ ತೆರಿಗೆ ಇದೆ. ಅಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಬಾರಿಯೂ ಬಜೆಟ್ ಮಂಡನೆ ಮಾಡುವಾಗ ಸಾಮಾನ್ಯ ಎನ್ನುವಂತೆ ಮದ್ಯ ಮತ್ತು ಸಿಗರೇಟ್‌ನ ಮೇಲೆ ಶುಲ್ಕವನ್ನು (ತೆರಿಗೆ) ವಿಧಿಸಿಕೊಂಡು ಬಂದಿದೆ. ಇದೀಗ ಕೇಂದ್ರ ಸರ್ಕಾರವು GST 2.0 ಭಾಗವಾಗಿ Sin Tax ಎನ್ನುವ ಟ್ಯಾಕ್ಸ್ ಪ್ರಸ್ತಾವನೆಯು ಮದ್ಯ ಪ್ರಿಯರಿಗೆ ಹಾಗೂ ಸಿಗರೇಟ್ ಸೇದುವವರಿಗೆ ಶಾಕ್ ನೀಡುವ ಸಾಧ್ಯತೆ ಇದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಕೇಂದ್ರ ಸರ್ಕಾರವು ಜಿಎಸ್‌ಟಿ ವಿಚಾರದಲ್ಲಿ ಮಹತ್ವದ ಬದಲಾವಣೆಗಳನ್ನು ತರುವುದಕ್ಕೆ ಮುಂದಾಗಿದೆ. ಕಳೆದ 10 ವರ್ಷಗಳಿಂದಲೂ ಜಿಎಸ್‌ಟಿಯಲ್ಲಿ ಹಲವು ಗೊಂದಲಗಳು ಇವೆ. ಜಿಎಸ್‌ಟಿ ಸ್ಲ್ಯಾಬ್ ವಿಚಾರ ಹಾಗೂ ವಿವಿಧ ವಸ್ತುಗಳಿಗೆ ವಿವಿಧ ಮಾದರಿಯ ಜಿಎಸ್‌ಟಿ ವಿಧಿಸುವ ವಿಚಾರವಾಗಿ ಉದ್ಯಮಿಗಳಲ್ಲಿ ಗೊಂದಲ ಮುಂದುವರಿದಿದೆ. ಇದೀಗ ಈ ಎಲ್ಲಾ ಗೊಂದಲಗಳಿಗೂ ಪರಿಹಾರ ಕಂಡುಕೊಳ್ಳುವುದಕ್ಕೆ ಕೇಂದ್ರ ಸರ್ಕಾರವು ಮುಂದಾಗಿದೆ. ಇದೇ ಸಂದರ್ಭದಲ್ಲಿ ಮದ್ಯ ಮತ್ತು ಸಿಗರೇಟ್‌ಗಳ ಬೆಲೆ ದುಬಾರಿಯಾಗುವ ಆತಂಕವೂ ಶುರುವಾಗಿದೆ ಏನಿದು ಚರ್ಚೆ ಎನ್ನುವ ವಿವರ ಮುಂದಿದೆ.

ಕೇಂದ್ರ ಸರ್ಕಾರವು ಹೊಸ GST 2.0 ಪ್ಲ್ಯಾನ್‌ನಲ್ಲಿ ಶೇ 40% Sin Tax ವಿಧಿಸುವುದಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೇ ಮದ್ಯ, ಸಿಗರೇಟ್ ಹಾಗೂ ಗೇಮಿಂಗ್ ಕಂಪನಿಗಳ ಷೇರುಗಳು 4.5% ರಷ್ಟು ಕುಸಿತ ಕಂಡಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾವರು ಜಿಎಸ್‌ಟಿ 2.0ರಲ್ಲಿ ಎರಡು ಪ್ರಮುಖ ಸ್ಲ್ಯಾಬ್‌ಗಳನ್ನು ರಚಿಸುವ ಪ್ರಸ್ತಾವನೆಯನ್ನು ಸಲ್ಲಿಸಿದೆ. ಅದರಲ್ಲಿ ಅಗತ್ಯ ವಸ್ತುಗಳಿಗೆ 5% ಹಾಗೂ ಹೆಚ್ಚಿನ ಸರಕುಗಳಿಗೆ ಶೇ. 18% ಮದ್ಯ, ತಂಬಾಕು ಹಾಗೂ ಸಂಬಂಧಿತ ಐಷಾರಾಮಿ ಹಾಗೂ ಹಾನಿ ಅಥವಾ ಅಪಾಯಕಾರಿ ಉತ್ಪನ್ನಗಳಿಗೆ ವಿಶೇಷ 40% ದರ ವಿಧಿಸುವ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಈ ರೀತಿ ಜಿಎಸ್‌ಟಿ ವಿಧಿಸಿದರೆ ಮುಂದಿನ ದಿನಗಳಲ್ಲಿ ಮದ್ಯ ಹಾಗೂ ಸಿಗರೇಟ್ ಸೇರಿದಂತೆ ವಿವಿಧ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.
Sin Tax ಎನ್ನುವುದು ಖರೀದಿಯ ಸಮಯದಲ್ಲಿ ಕೆಲವು ಸರಕುಗಳ ಮೇಲೆ ವಿಧಿಸಲಾಗುವ ಅಬಕಾರಿ ತೆರಿಗೆ. ಈ ತೆರಿಗೆಗೆ ಒಳಪಡುವ ವಸ್ತುಗಳು ಸಮಾಜಕ್ಕೆ ಹಾನಿಕಾರಕ ಅಥವಾ ದುಬಾರಿ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಇದರಲ್ಲಿ ಸಿಗರೇಟ್, ಮದ್ಯ, ಜೂಜು ಹಾಗೂ ವೇಪಿಂಗ್ (ಹುಕ್ಕಾ) ಸೇರಿವೆ ಎಂದು ಹೇಳಲಾಗಿದೆ.
ಇದೀಗ ತಂಬಾಕಿನ ಮೇಲಿನ ಒಟ್ಟು ತೆರಿಗೆ ಪ್ರಮಾಣವು 88% ರಷ್ಟಿದೆ, ಅಂದರೆ GST ಸ್ಲ್ಯಾಬ್‌ಗಳನ್ನು ಮರುಜೋಡಿಸಿದ ನಂತರವೂ ತಂಬಾಕು ಉತ್ಪನ್ನಗಳ ಮೇಲಿನ ಒಟ್ಟಾರೆ ಪರಿಣಾಮಕಾರಿ ತೆರಿಗೆ ಹೊರೆ ಇನ್ನೂ 88% ಆಗಿರುತ್ತದೆ (GST ಹಾಗೂ ಸೆಸ್) ಸೇರಿಸಿದರೆ ಎಂದು ಹೇಳಲಾಗಿದೆ. ಇನ್ನು ಆಹಾರ, ಔಷಧಗಳು, ವೈದ್ಯಕೀಯ ಸಾಧನಗಳು, ಸ್ಟೇಷನರಿ, ಶೈಕ್ಷಣಿಕ ವಸ್ತುಗಳು ಹಾಗೂ ಟೂತ್ ಬ್ರಷ್‌ಗಳು, ಹೇರ್ ಆಯಿಲ್ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳು ತೆರಿಗೆ ವ್ಯಾಪ್ತಿಗೆ ಸೇರುವ ಸಾಧ್ಯತೆ ಕಡಿಮೆ ಅಥವಾ 5% ಸ್ಲ್ಯಾಬ್ ವ್ಯಾಪ್ತಿಗೆ ಒಳಪಡಲಿವೆ ಎಂದು ಹೇಳಲಾಗಿದೆ. ಹವಾನಿಯಂತ್ರಣಗಳು, ರೆಫ್ರಿಜರೇಟರ್‌ಗಳು ಹಾಗೂ ಟೆಲಿವಿಷನ್ ಸೇರಿದಂತೆ ಮಧ್ಯಮ ವರ್ಗದವರು ಬಳಸುವ ವಸ್ತುಗಳಿಗೆ ಶೇ 18% ತೆರಿಗೆ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.












Click it and Unblock the Notifications