Breaking: ಭಾರತದಲ್ಲಿ ಆಧಾರ್-ವೋಟರ್ ಐಡಿ ಲಿಂಕ್ ಕಡ್ಡಾಯವಲ್ಲ ಎಂದ ಆಯೋಗ
ನವದೆಹಲಿ, ಆಗಸ್ಟ್ 22: ಆಧಾರ್ ಕಾರ್ಡ್ ಸಲ್ಲಿಸಿಲ್ಲ ಎಂಬ ಕಾರಣವನ್ನು ಇಟ್ಟುಕೊಂಡು ಮತದಾರರ ಪಟ್ಟಿಯಲ್ಲಿನ ಹೆಸರನ್ನು ಅಳಿಸುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸೋಮವಾರ ಹೇಳಿದೆ. ಈ ವಿಷಯದ ಸುತ್ತ ಕೆಲವು ಮಾಧ್ಯಮ ವರದಿಗಳಿಗೆ ಆಯೋಗ ಸ್ಪಷ್ಟನೆ ಕೊಟ್ಟಿದೆ.
"ಮಾಧ್ಯಮಗಳಲ್ಲಿ ವರದಿಯಾದ ಸುದ್ದಿಗಳನ್ನು ಉಲ್ಲೇಖಿಸಿದ್ದು, ನಮೂನೆ-6Bಯಲ್ಲಿ ಆಧಾರ್ ಸಲ್ಲಿಕೆ ಸ್ವಯಂಪ್ರೇರಿತವಾಗಿದೆ. ಆಧಾರ್ ಸಲ್ಲಿಸದ ಕಾರಣ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದನ್ನು ಅಳಿಸಲಾಗುವುದಿಲ್ಲ," ಎಂದು ಚುನಾವಣಾ ಸಮಿತಿ ಹೇಳಿದೆ.
ಕಳೆದ ಜುಲೈ 4ರಂದು ಎಲ್ಲಾ ರಾಜ್ಯಗಳಿಗೆ ಮುಖ್ಯ ಚುನಾವಣಾ ಅಧಿಕಾರಿಗಳು ನೀಡಿರುವ ನೋಟಿಸ್ ನಲ್ಲಿರುವ ಅಂಶವನ್ನು ಆಯೋಗ ಉಲ್ಲೇಖಿಸಿದೆ. ಅದರ ಪ್ರಕಾರ, ಮತದಾರರ ಗುರುತಿನ ಚೀಟಿ ಜೊತೆಗೆ ಆಧಾರ್ ಜೋಡಣೆ ಮಾಡುವುದು ಸ್ವಯಂಪ್ರೇರಿತ ಪ್ರಕ್ರಿಯೆ ಆಗಿರುತ್ತದೆ. ಆಧಾರ್ ಮತ್ತು ವೋಟರ್ ಐಡಿ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಿಲ್ಲ ಎಂದು ಆಯೋಗವು ಸ್ಪಷ್ಟವಾಗಿ ಹೇಳಿದೆ.

ವೋಟರ್ ಐಡಿ ಮತ್ತು ಆಧಾರ್ ಜೋಡಣೆಗೆ ಹೊಸ ಪದ್ಧತಿ
ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದಕ್ಕಾಗಿ ವಿವರಗಳನ್ನು ಪಡೆಯಲು ಮಾರ್ಪಡಿಸಿದ ನೋಂದಣಿ ನಮೂನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ಮತದಾರರ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಹೊಸ ನಮೂನೆ 6B ಅನ್ನು ಪರಿಚಯಿಸಲಾಗಿದೆ.

ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಲಿಂಕ್ ಏಕೆ?
"ಪರಿಚ್ಛೇದ 23ರಲ್ಲಿನ ತಿದ್ದುಪಡಿಯು ಮತದಾರರ ಗುರುತನ್ನು ಸ್ಥಾಪಿಸುವುದು. ಮತದಾರರ ಪಟ್ಟಿಯಲ್ಲಿನ ನಮೂದುಗಳ ದೃಢೀಕರಣ ಮಾಡುವುದು. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಒಂದೇ ವ್ಯಕ್ತಿಯ ಹೆಸರು ನೋಂದಾಯಿಸುವುದನ್ನು ನಿಯಂತ್ರಿಸುವುದಕ್ಕಾಗಿ ಈ ಆಧಾರ್ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂಬುದನ್ನು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಜೋಡಣೆ ಮಾಡುವುದು ವ್ಯಕ್ತಿಗಳಿಗೆ ಬಿಟ್ಟಿರುತ್ತದೆಯೇ ವಿನಃ ಕಡ್ಡಾಯವಾಗಿ ಇರುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಮಾಡುವುದೇನು?
ಮತದಾರರು ಆಧಾರ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ ಮತ್ತು ಆ ಮೂಲಕ ಅವರ ಆಧಾರ್ ಸಂಖ್ಯೆಯನ್ನು ನೀಡಲು ಸಾಧ್ಯವಾಗದಿದ್ದರೆ, 6ಬಿ ನಮೂನೆಯಲ್ಲಿ ನಮೂದಿಸಲಾದ ಹನ್ನೊಂದು ಪರ್ಯಾಯ ದಾಖಲೆಗಳ ಪ್ರತಿಯನ್ನು ಸಲ್ಲಿಸಲು ಕೋರಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ವೋಟರ್ ಐಡಿ-ಆಧಾರ್ ಲಿಂಕ್ ಮಾಡುವುದೇಗೆ?
ಎಲ್ಲಾ ಮತದಾರರು ತಮ್ಮ ಕುಟುಂಬದ ಎಲ್ಲಾ ಮತದಾರರ ಗುರುತಿನ ಚೀಟಿಗೆ App ಮುಖಾಂತರ ಮನೆಯಲ್ಲಿ ಕುಳಿತುಕೊಂಡು ಮತದಾರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ನಂಬರ್‍ಗೆ ಲಿಂಕ್ ಮಾಡಬಹುದು.
1. play storeಗೆ ಹೋಗಿ voter help line appನ್ನು Install ಮಾಡಿಕೊಳ್ಳಬೇಕು.
2. appನ್ನು Install ಮಾಡುವಾಗ permission ಎಲ್ಲವೂ allow ಎಂದು ಮಾಡಬೇಕು.
3. appನ್ನು Install ಮಾಡಿಕೊಂಡು app ಕೆಳಗಡೆ ಎಡಬದಿಯಲ್ಲಿರುವ Explore option ಮೇಲೆ ಕ್ಲಿಕ್ ಮಾಡಬೇಕು.
4. Electoral Authentication Form 16B select ಮಾಡಿಕೊಳ್ಳಬೇಕು.
5. ಮೊಬೈಲ್ ನಂಬರ್ ಅನ್ನು ಹಾಕಬೇಕು.
6. ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಬರುತ್ತದೆ. ಆ ನಂಬರ್ ಎಂಟ್ರಿಮಾಡಬೇಕು, ವೆರಿಫೈ ಅಂತ ಮಾಡಬೇಕು.
7. ನಿಮ್ಮ ಎಪಿಕ್ ನಂಬರ್ ಹಾಕಬೇಕು( ಚುನಾವಣಾ ಗುರುತಿನ ಚೀಟಿ ನಂಬರ್) ಮತ್ತು ಸ್ಟೇಟ್ ಸೆಲೆಕ್ಟ್ ಮಾಡಬೇಕು.
8. ನಿಮ್ಮ ಆಧಾರ್ ನಂಬರ್ ನಮೂದಿಸಬೇಕು.
9. ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.
10. EMail Id ನಮೂದು ಇರದಿದ್ದರೆ ಹಾಗಯೇ ಖಾಲಿ ಬಿಡಿ.
11. ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ.
12. Proceed option ಒತ್ತಿ.
13. Confirm button ಒತ್ತಿ.
14. Successfully ಅಂತ ಒಂದು ref Number ಬರುತ್ತದೆ.












Click it and Unblock the Notifications