ಬರ್ತ್‌ಡೇ ದಿನವೇ ಕಂಪನಿ ಕೊಟ್ಟಿತ್ತು ಶಾಕ್! ಮುಂಬೈ ಟೆಕ್ಕಿಯ ನೋವಿನ ಕತೆ ವೈರಲ್
ಇದೀಗ ಎಲ್ಲಾ ಕಂಪನಿಗಳಲ್ಲೂ ಲೇ ಆಫ್‌ನದ್ದೇ ಮಾತು. ಬೆಳಿಗ್ಗೆ ಕೆಲಸಕ್ಕೆ ಹೋದವರ ಬಳಿ ಸಂಜೆ ಹೊತ್ತಿಗೆ ಕೆಲಸ ಇರುವುದಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ಕೆಲಸದಿಂದ ತೆಗೆದು ಹಾಕುವುದು ಎಲ್ಲಾ ಕಡೆ ಕಾಮನ್ ಆಗಿದೆ. ಅದರಲ್ಲಿಯೂ ಐಟಿ ಫೀಲ್ಡ್‌ನಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚೇ ಇದೆ.
ಬರ್ತ್ ಡೇ ವಿಶ್ ಬದಲು ಸಿಕ್ಕಿದ್ದು ಶಾಕ್
ಇದೀಗ ಮುಂಬಯಿನ ಟೆಕ್ಕಿಯೊಬ್ಬರು ತನ್ನ ಸಮಸ್ಯೆಯನ್ನು ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇವರನ್ನು ಹುಟ್ಟುಹಬ್ಬದ ದಿನದಂದೇ ಕೆಲಸದಿಂದ ತೆಗೆದು ಹಾಕಲಾಗಿದೆ. ಬರ್ತ್ ಡೇ ಅಂದ್ರೆ ಸಾಮಾನ್ಯವಾಗಿ ಬೆಳಗ್ಗೆಯೇ ಹೆಚ್‌ಆರ್‌ನಿಂದ ವಿಶ್ ಬರುವುದು ಸಾಮಾನ್ಯ. ಆದ್ರೆ ಇಲ್ಲಿ ಬರ್ತ್‌ಡೇ ವಿಶ್ ಬದಲು ಇವತ್ತು ಈ ಆಫೀಸಿನಲ್ಲಿ ನಿಮ್ಮದು ಕೊನೆಯ ದಿನ ಎನ್ನುವ ಮೇಲ್ ಬಂದಿದೆ. ಕಂಪನಿ ಭಾರತೀಯ ಟೆಕ್ ಟೀಂ ಮೇಲೆ ಅವಲಂಬನೆ ಕಡಿಮೆ ಮಾಡುತ್ತಿದೆ ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದೆ ಅಂತ ಹೇಳಿದೆ.

ಕಾರಣವೇ ತಿಳಿಯುತ್ತಿಲ್ಲವಂತೆ
ಇವರಿಗೆ ಈ ಫೀಲ್ಡ್‌ನಲ್ಲಿ ಐದು ವರ್ಷಗಳ ಅನುಭವವಿದೆ. ಒಟ್ಟು ಕಂಪನಿ ಎಂಟು ಜನರನ್ನು ಕೆಲಸದಿಂದ ತೆಗೆದಉ ಹಾಕಿದೆ. ಆ ಎಂಟು ಜನರಲ್ಲಿ ಇವರೂ ಒಬ್ಬರು. ಆದರೆ ತನ್ನನ್ನು ಯಾಕೆ ಕೆಲಸದಿಂದ ತೆಗೆದುಹಾಕಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲವಂತೆ. ಅವರು ಬಹು ಮುಖ್ಯ ಪ್ರಾಜೆಕ್ಟ್ ಮೇಲೆ ಕೆಲಸ ಮಾಡ್ತಾ ಇದ್ದರಂತೆ. ಅಲ್ಲದೆ, ಈ ಪ್ರಾಜೆಕ್ಟ್ ತನ್ನ ಮೇಲೆಯೆ ಡಿಪೆಂಡ್ ಆಗಿದೆ ಎನ್ನುವ ಯೋಚನೆ ಅವರದ್ದು. ಹಾಗಾಗಿ ತನ್ನನ್ನು ಕೆಲಸ ಬಿಡಿಸಿರುವುದನ್ನು ಇವರಿಗೆ ಅರಗಿಸಿ ಕೊಳ್ಳಲು ಆಗುತ್ತಿಲ್ಲ.
ಸದ್ಯಕ್ಕೆ ಅವರು ಸಂದರ್ಶನಗಳಿಗೆ ತಯಾರಿ ನಡೆಸುತ್ತಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಪರ್ಸನಲ್ ಪ್ರಾಜೆಕ್ಟ್‌ನಲ್ಲೂ ಕೆಲಸ ಮಾಡ್ತಾ ಇದ್ದಾರೆ ಎಂದು ಬರೆದುಕೊಂಡಿದ್ದಾರೆ. ಇನ್ನು ಅವರು ತನ್ನ ಸ್ಕಿಲ್ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಲ್ಲದೆ ಅವರು ಇಲ್ಲಿಯವರೆಗೆ ಯಾವೆಲ್ಲಾ ಮುಖ್ಯ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ ಎನ್ನುವುದನ್ನು ಕೂಡಾ ಹೇಳಿದ್ಧಾರೆ.
ಬಹಳ ಜನರಿಗಾಗಿದೆ ಈ ಅನುಭವ
ಇವರ ಪೋಸ್ಟ್ ಓದಿ ತುಂಬಾ ಜನ ಕಾಮೆಂಟ್ ಮಾಡ್ತಾ ಇದ್ದಾರೆ. ಅನೇಕ ಮಂದಿ ತಮಗೂ ಇದೇ ರೀತಿಯ ಅನುಭವ ಆಗಿದೆ ಎಂದು ಬರೆದಿದ್ದಾರೆ. ಒಬ್ಬರಂತೂ ನಿಮ್ಮ ಕತೆ ಓದುವಾಗ ನನ್ನದೇ ಸ್ಥಿತಿ ನೆನಪಾಗುತ್ತಿದೆ ಎಂದು ಬರೆದಿದ್ದಾರೆ. ನನ್ನನ್ನು ಕೂಡಾ ನನ್ನ ಬರ್ತ್ ಡೇ ದಿನವೇ ಓರಾಕಲ್ ಕೆಲಸದಿಂದ ತೆಗೆದು ಹಾಕಿದೆ. ನಾನು ಬರ್ತ್ ಡೇ ವಿಶ್ ನಿರೀಕ್ಷೆ ಮಾಡ್ತಾ ಇದ್ದೆ ಆದರೆ ಕಂಪನಿ ಕೆಲಸದಿಂದ ತೆಗೆದು ಹಾಕುವ ಮೇಲ್ ಹಾಕಿ ದೊಡ್ಡ ಸರ್‌ಪ್ರೈಸ್ ಕೊಟ್ಟಿದೆ ಅಂತ ಬರೆದಿದ್ಧಾರೆ. ನನಗೆ ಕೇಕ್ ಕಟ್ ಮಾಡುವುದಕ್ಕೂ ಮನಸ್ಸಾಗಲಿಲ್ಲ. ನನ್ನನ್ನು ಕೆಲಸದಿಂದ ತೆಗೆಯುವುದಕ್ಕೆ ಬಲವಾದ ಕಾರಣ ಇರಲಿಲ್ಲ. ನನ್ನ ಹತ್ತಿರ ತುಂಬಾ ಪ್ರಾಜೆಕ್ಟ್ ಕೂಡಾ ಇತ್ತು. ಹಾಗಾಗಿ ನಿಮ್ಮ ಸ್ಥಿತಿ ನನಗೆ ಅರ್ಥವಾಗುತ್ತಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷ ನಾವು ನಮ್ಮ ಬರ್ತ್‌ಡೇಯನ್ನು ಒಳ್ಳೆಯ ಕಂಪನಿಯಲ್ಲಿ ಕೈತುಂಬಾ ಸಂಬಳದ ಜೊತೆ ಸೆಲೆಬ್ರೇಟ್ ಮಾಡೋಣ ಎಂದು ಸಮಾಧಾನ ಮಾಡಿದ್ದಾರೆ.
ಸಹಾಯದ ಭರವಸೆ
ಇನ್ನೊಬ್ಬರು ನಾನು ನಿಮಗೆ ರೆಫರಲ್‌ಗಳಲ್ಲಿ ಸಹಾಯ ಮಾಡಬಹುದು. ಸದ್ಯಕ್ಕೆ ನಮ್ಮ ಕಂಪನಿಯ ಹೆಚ್ಚಿನವರು ಬೆಂಗಳೂರು ಮತ್ತು ಪುಣೆಯಲ್ಲಿದ್ದಾರೆ. ಇಲ್ಲಿ ಹೋಗಿ ಕೆಲಸ ಮಾಡುವುದಕ್ಕೆ ಅಭ್ಯಂತರ ಇಲ್ಲ ಎಂದಾದರೆ ನನಗೆ DM ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬರ್ತ್ ಡೇ ವಿಶ್ ಮಾಡ್ತಾ ಸ್ವಲ್ಪ ಸಮಯ ತಗೋಳಿ. ಸ್ಕಿಲ್ ಡೆವಲಪ್ ಮಾಡಿಕೊಳ್ಳಿ. ಸ್ಟ್ರಾಂಗ್ ಆಗಿ ವಾಪಾಸಾಗಿ ಅಂದಿದ್ದಾರೆ.
ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಟ್ರಿಪ್‌ಗೆ ಹೋಗಿ, ಬ್ರೇಕ್ ತಗೋಳಿ. ನಾನು ನಿಮನ್ನು ನ್ಯಾಟ್‌ವೆಸ್ಟ್ ಯುಕೆ ಬ್ಯಾಂಕ್‌ನಲ್ಲಿ ರೆಫರ್ ಮಾಡಬಹುದು ಅಂತ ಮತ್ತೊಬ್ಬರು ಹೇಳಿದ್ಧಾರೆ. ನನ್ನ ಗಂಡನ ಜೊತೆ ಕೂಡಾ ಹೀಗೆಯೇ ಆಗಿತ್ತು.ಆದರೆ ಆಗಿದ್ದೆಲ್ಲಾ ಒಳ್ಳೆಯದೇ ಆಯಿತು ಎಂದನಿಸಿತು ಎಂದು ಬರೆದಿದ್ದಾರೆ.


Click it and Unblock the Notifications
