ಸಹೋದರಿಯರ ಒಡವೆ ಬಿಚ್ಚಿಸಿ, ವಶಪಡಿಸಿಕೊಂಡಿದ್ದೇವೆ ಎಂದು ತೋರಿಸಿದ್ದಾರೆ: ಇಡಿ ವಿರುದ್ಧ ತೇಜಸ್ವಿ ಆರೋಪ
600 ಕೋಟಿ ರೂಪಾಯಿಗಳ ಅಕ್ರಮ ಆದಾಯವನ್ನು ಪತ್ತೆಹಚ್ಚುವ ಇಡಿ ಹೇಳಿಕೆಯನ್ನು ತೇಜಸ್ವಿ ಯಾದವ್ ತಳ್ಳಿಹಾಕಿದ್ದಾರೆ.
ಪಾಟ್ನಾ, ಮಾರ್ಚ್ 13: ಜಾರಿ ನಿರ್ದೇಶನಾಲಯವು ಕಳೆದ ವಾರ ತನ್ನ ದೆಹಲಿಯ ಮನೆ ಮೇಲೆ ಅರ್ಧ ಗಂಟೆಯಲ್ಲಿ ತನ್ನ ದಾಳಿಯನ್ನು ಮುಗಿಸಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೋಮವಾರ ಆರೋಪಿಸಿದ್ದಾರೆ. ಆದರೆ ಇಡಿ ಅಧಿಕಾರಿಗಳು ಮೇಲಿನಿಂದ ಆದೇಶ ಬರುವುದನ್ನು ಕಾಯುತ್ತಿದ್ದರು ಎಂದು ಆರೋಪಿಸಿದ್ದಾರೆ.
ರಾಜ್ಯ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, 600 ಕೋಟಿ ರೂಪಾಯಿಗಳ ಅಕ್ರಮ ಆದಾಯವನ್ನು ಪತ್ತೆಹಚ್ಚುವ ಇಡಿ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಅವರ ವಿವಾಹಿತ ಸಹೋದರಿಯರು ಮತ್ತು ಅವರ ಅಳಿಯಂದಿರ ಬಳಸಿದ ಆಭರಣಗಳನ್ನು ಫೋಟೋ ತೆಗೆಯಲಾಗಿದೆ ಮತ್ತು ಅದನ್ನೇ ತಾವು ವಶಪಡಿಸಿಕೊಂಡಿರುವ ಆಭರಣಗಳು ಎಂದು ತೋರಿಸಲಾಗಿದೆ ಎಂದು ಗಂಭೀರ ಆರೋಪಮಾಡಿದ್ದಾರೆ.

"ನಾವು ಬಿಜೆಪಿ - ಆರ್‌ಎಸ್‌ಎಸ್‌ನಂತೆ ಸಂಪೂರ್ಣ ರಾಜಕೀಯ ವಿಜ್ಞಾನದ ವಿದ್ಯಾರ್ಥಿಗಳಲ್ಲ. ನಾವು ನೈಜ ರಾಜಕೀಯದ ಅಭ್ಯಾಸ ಮಾಡುವವರಾಗಿದ್ದೇವೆ. ಅವರನ್ನು ಎದುರಿಸಲು ನಾವು ಸಾರ್ವಜನಿಕ ಬೆಂಬಲವನ್ನು ಹೊಂದಿದ್ದೇವೆ. ಆದರೆ ಅವರು ನಿಜವಾದ ರಾಜಕೀಯ ರಣರಂಗದಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಾರೆ" ಎಂದು ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದಾರೆ.
ಕಳೆದ ವಾರ, ಜಾರಿ ನಿರ್ದೇಶನಾಲಯದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ ಒಂದು ಕೋಟಿ ರೂಪಾಯಿಯ "ಲೆಕ್ಕ ರಹಿತ ನಗದು" ಮತ್ತು " 600 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆದಾಯವನ್ನು ಪತ್ತೆಹಚ್ಚಲಾಗಿದೆ" ಎಂದು ಹೇಳಿಕೊಂಡಿದೆ. ಇದಕ್ಕೆ ಪಂಚನಾಮೆ ಬಗ್ಗೆ ಇ.ಡಿ ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸಬೇಕು. ಇಲ್ಲವೇ ನಾನೇ ಅದರ ಮಾಹಿತಿ ಬಿಡುಗಡೆ ಮಾಡುತ್ತೇನೆ ಎಂದು ತೇಜಸ್ವಿ ಯಾದವ್ ಸವಾಲು ಹಾಕಿದ್ದಾರೆ.

ಇಡಿ ಹೊರತುಪಡಿಸಿ ಸಿಬಿಐ ಕೂಡ ಮಾರ್ಚ್ 4 ರಂದು ಯಾದವ್ ಅವರಿಗೆ ಸಮನ್ಸ್ ನೀಡಿದ್ದರೂ ಅವರು ಹಾಜರಾಗಿರಲಿಲ್ಲ. ಸಿಬಿಐ ಈಗಾಗಲೇ ಅವರ ತಾಯಿ ಮತ್ತು ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಅವರನ್ನು ಅವರ ಪಾಟ್ನಾ ನಿವಾಸದಲ್ಲಿ ವಿಚಾರಣೆ ಮಾಡಿದೆ. ಅವರ ತಂದೆ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ದೆಹಲಿಯ ಅವರ ಸಹೋದರಿ, ಸಂಸದೆ ಮಿಸಾ ಭಾರ್ತಿ ಅವರ ಮನೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಇದಲ್ಲದೆ ಆರ್‌ಜೆಡಿಯ ಇತರ ಸದಸ್ಯರನ್ನೂ ವಿಚಾರಣೆಗೊಳಪಡಿಸಲಾಗಿದೆ ಮತ್ತು ಅವರ ಆಸ್ತಿಗಳನ್ನು ಶೋಧಿಸಲಾಗಿದೆ.












Click it and Unblock the Notifications