ಲಕ್ಷದ್ವೀಪ: ಪ್ರತಿ ಶುಕ್ರವಾರ ಶಾಲೆಗಳಿಗೆ ರಜೆ ಪದ್ಧತಿ ಅಂತ್ಯ
ಲಕ್ಷದ್ವೀಪ, ಡಿಸೆಂಬರ್ 21: ಲಕ್ಷದ್ವೀಪದಲ್ಲಿ ಪ್ರತಿ ಶುಕ್ರವಾರ ಶಾಲೆಗಳಿಗೆ ರಜೆ ನೀಡುತ್ತಿದ್ದ ಪದ್ಧತಿ ಅಂತ್ಯಗೊಳಿಸಲು ಆಡಳಿತ ನಿರ್ಧಾರ ಕೈಗೊಂಡಿದೆ. ಮುಸ್ಲಿಂ ಬಹುಳ್ಯವಿರುವ ಲಕ್ಷದ್ವೀಪದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಶುಕ್ರವಾರ ವಾರದ ರಜೆಯಾಗಿರುವುದಿಲ್ಲ.
ಇದು ಏಕಪಕ್ಷೀಯ ನಿರ್ಧಾರವಾಗಿದೆ, ಇದು ಜನತಾ ಆದೇಶದ ಪರಿಧಿಯಲ್ಲಿಲ್ಲ ಎಂದು ಫೈಜಲ್ ತಿಳಿಸಿದ್ದಾರೆ. ಸ್ಥಳೀಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಜಾರಿಗೆ ತಂದರೂ ಜನರೊಂದಿಗೆ ಅದನ್ನು ಚರ್ಚಿಸಬೇಕು ಎಂದು ಹೇಳಿದ್ದಾರೆ.
ದೇಶದ ಇತರೆಡೆಗಳಂತೆಯೇ ಶುಕ್ರವಾರದಂದು ಕಾರ್ಯನಿರ್ವಹಣೆಯ ದಿನವನ್ನಾಗಿ ಹಾಗೂ ಭಾನುವಾರಗಳನ್ನು ರಜೆಯ ದಿನವನ್ನಾಗಿ ಲಕ್ಷದ್ವೀಪ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಶುಕ್ರವಾರಗಳಂದು ವಿದ್ಯಾರ್ಥಿಗಳಿಗೆ ರಜೆ ನೀಡಲಾಗುತ್ತಿತ್ತು.

ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ದ್ವೀಪದಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪ್ರಾರಂಭಿಸಿದಾಗಿನಿಂದಲೂ ಶುಕ್ರವಾರದಂದು ರಜೆ ನೀಡಲಾಗುತ್ತಿತ್ತು ಹಾಗೂ ಶನಿವಾರದಂದು ಅರ್ಧ ದಿನ ಕಾರ್ಯನಿರ್ವಹಣೆ ಮಾಡಲಾಗುತ್ತಿತ್ತು. ಶಾಲೆಗಳ ಯಾವುದೇ ಆಡಳಿತ ವಿಭಾಗಗಳೊಂದಿಗೆ, ಜನಪ್ರತಿನಿಧಿಗಳೊಂದಿಗೆ ಚರ್ಚಿಸದೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೊಹಮ್ಮದ್ ಫೈಜಲ್ ಹೇಳಿದ್ದಾರೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸಂಪನ್ಮೂಲಗಳ ಅತ್ಯುತ್ತಮ ಬಳಕೆ, ಕಲಿಯುವವರ ಸರಿಯಾದ ತೊಡಗಿಸಿಕೊಳ್ಳುವಿಕೆ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಯ ಅಗತ್ಯ ಯೋಜನೆಗಾಗಿ ಆಡಳಿತ ಶಾಲೆಗಳ ಸಮಯವನ್ನು ಹಾಗೂ ನಿಯಮಿತ ಶಾಲಾ ಚಟುವಟಿಕೆಗಳಲ್ಲಿ ಮಾರ್ಪಡಿಸಲಾಗಿದೆ.
ಲಕ್ಷದ್ವೀಪ ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷ ಪಿಪಿ ಅಬ್ಬಾಸ್ ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಮುಸ್ಲಿಂ ಪ್ರಾಬಲ್ಯವಿರುವ ಲಕ್ಷದ್ವೀಪದಲ್ಲಿ ಇನ್ನು ಮುಂದೆ ಶುಕ್ರವಾರದಂದು ಶಾಲಾ ವಿದ್ಯಾರ್ಥಿಗಳಿಗೆ ವಾರದ ರಜೆ ಇರುವುದಿಲ್ಲ. ಲಕ್ಷದ್ವೀಪ ಶಿಕ್ಷಣ ಇಲಾಖೆಯು ಶುಕ್ರವಾರದ ಕೆಲಸದ ದಿನಗಳನ್ನು ಘೋಷಿಸುವ ಹೊಸ ಕ್ಯಾಲೆಂಡರ್ ಅನ್ನು ಹೊರತಂದಿದೆ ಮತ್ತು ದ್ವೀಪಗಳಲ್ಲಿನ ಶಾಲೆಗಳಿಗೆ ಭಾನುವಾರಗಳಂದೇ ವಾರದ ರಜಾದಿನ ಘೋಷಿಸಿದೆ.
ಇದರಿಂದ ಧರ್ಮದ ಆಧಾರದ ಮೇಲೆ ದ್ವೀಪಗಳಲ್ಲಿ ಶುಕ್ರವಾರವನ್ನು ರಜಾದಿನಗಳಾಗಿ ಹೊಂದುವ ವಿದ್ಯಾರ್ಥಿಗಳ ದಶಕಗಳ ಹಿಂದಿನ ಸವಲತ್ತು ಕೊನೆಗೊಂಡಿದೆ. ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಮಾತನಾಡಿ, ಆರು ದಶಕಗಳ ಹಿಂದೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ದ್ವೀಪಗಳಲ್ಲಿ ಶಾಲೆಗಳನ್ನು ತೆರೆದಾಗಿನಿಂದ ಶುಕ್ರವಾರ ರಜೆ ಮತ್ತು ಶನಿವಾರ ಅರ್ಧ ದಿನ ಕೆಲಸದ ದಿನವಾಗಿತ್ತು. ಯಾವುದೇ ಶಾಲೆಗಳು, ಜಿಲ್ಲಾ ಪಂಚಾಯತ ಅಥವಾ ಸ್ಥಳೀಯ ಸಂಸದರೊಂದಿಗೆ ಚರ್ಚಿಸದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಇಂತಹ ನಿರ್ಧಾರ ಜನಾದೇಶಕ್ಕೆ ಒಳಪಟ್ಟಿಲ್ಲ, ಇದು ಆಡಳಿತದ ಏಕಪಕ್ಷೀಯ ನಿರ್ಧಾರವಾಗಿದೆ ಎಂದು ಫೈಜಲ್ ತಿಳಿಸಿದ್ದಾರೆ, ಸ್ಥಳೀಯ ವ್ಯವಸ್ಥೆಯಲ್ಲಿ ಬದಲಾವಣೆ ತರುವಾಗ ಜನರೊಂದಿಗೆ ಚರ್ಚಿಸಬೇಕು ಎಂದರು.
ಸಂಪನ್ಮೂಲಗಳ ಅತ್ಯುತ್ತಮ ಬಳಕೆ, ಕಲಿಯುವವರ ಸರಿಯಾದ ತೊಡಗಿಸಿಕೊಳ್ಳುವಿಕೆ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಯ ಅಗತ್ಯ ಯೋಜನೆ" ಖಚಿತಪಡಿಸಿಕೊಳ್ಳಲು ಆಡಳಿತವು ಶಾಲಾ ಸಮಯ ಮತ್ತು ನಿಯಮಿತ ಶಾಲಾ ಚಟುವಟಿಕೆಗಳನ್ನು ಮಾರ್ಪಡಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಕ್ಷದ್ವೀಪ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಕಮ್ ಕೌನ್ಸಿಲರ್ ಪಿಪಿ ಅಬ್ಬಾಸ್ ಅವರು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರಿಗೆ, ಸಲಹೆಗಾರರಿಗೆ ಪತ್ರ ಬರೆದು ಶಿಕ್ಷಣ ಇಲಾಖೆಯ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿದ್ದಾರೆ.
ಅವರು ತಮ್ಮ ಪತ್ರದಲ್ಲಿ, ಲಕ್ಷದ್ವೀಪದ ಮುಸ್ಲಿಮರು ಮತ್ತು ಅವರ ನಂಬಿಕೆಗೆ ಶುಕ್ರವಾರ ರಜಾದಿನವಾಗಿದೆ ಮತ್ತು ಶುಕ್ರವಾರದಂದು ಜುಮಾ ನಮಾಜ್ ಅನ್ನು ಅನಿವಾರ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಚರ್ಚಿಸಲು ಚುನಾಯಿತ ಪ್ರತಿನಿಧಿಗಳು ಮತ್ತು ಇತರ ಮಧ್ಯಸ್ಥಗಾರರ ಸಭೆಯನ್ನು ಕರೆಯುವಂತೆ ಅವರು ಆಡಳಿತವನ್ನು ಕೋರಿದ್ದಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications