ಒಂದೇ ದಿನದಂದು 55 ಮಹಿಳೆಯರನ್ನು ಮೋದಿ ಖಾತೆ ಹಿಂಬಾಲಿಸಿದ್ದೇಕೆ?

Recommended Video

      ಸೋಶಿಯಲ್ ಮೀಡಿಯಾದಲ್ಲಿ ಒಂದೇ ದಿನ 55 ಮಹಿಳೆಯರನ್ನ ಫಾಲೋ ಮಾಡಿದ ಮೋದಿ

      ನವದೆಹಲಿ ಆಗಸ್ಟ್ 28: ರಕ್ಷಾ ಬಂಧನದ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ರ್ಖಾತೆಯಿಂದ 55 ಮಹಿಳೆಯರನ್ನು ಹಿಂಬಾಲಿಸಿರುವುದು ಈಗಾಗಲೇ ಗೊತ್ತಾಗಿರಬಹುದು. ಆದರೆ, ಈ 55 ಮಹಿಳೆಯರನ್ನೇ ಏಕೆ ಆಯ್ಕೆ ಮಾಡಲಾಯಿತು ಎಂಬುದರ ಬಗ್ಗೆ ಕುತೂಹಲ ಮೂಡಿದೆ.

      55 ಮಹಿಳೆಯರಲ್ಲಿ 14 ಮಂದಿ ಪತ್ರಕರ್ತೆಯರು ಇದ್ದಾರೆ. 9 ಮಂದಿ ಕ್ರೀಡಾಲೋಕದವರಾಗಿದ್ದಾರೆ. 32 ಮಹಿಳೆಯರು ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದು, ಪಶ್ಚಿಮ ಬಂಗಾಲ ಹಾಗೂ ಒಡಿಶಾದಂಥ ರಾಜ್ಯಗಳಿಗೆ ಸೇರಿದವರಾಗಿರುವುದು ವಿಶೇಷ. ಲೋಕಸಭೆ ಚುನಾವಣೆ 2019ಕ್ಕೆ ಅಣಿಯಾಗುತ್ತಿರುವ ಬಿಜೆಪಿ ಎಚ್ಚರಿಕೆಯಿಂದ ತನ್ನ ಜಾಲ ವಿಸ್ತರಿಸಿಕೊಳ್ಳುತ್ತಿದೆ.

      Know Why PM Modi followed 55 women on social media in a day

      ಕ್ರೀಡಾಪಟುಗಳ ಬಗ್ಗೆ ವಿಶೇಷವಾಗಿ ಗೌರವ ಹೊಂದಿರುವ ಮೋದಿ ಅವರು, ಪ್ರತಿ ಕ್ರೀಡಾಕೂಟದ ಬೆಳವಣಿಗೆಯನ್ನು ಗಮನಿಸುತ್ತಿರುತ್ತಾರೆ. ಕ್ರೀಡಾಪಟುಗಳ ಪೈಕಿ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಕರ್ಮಾನ್ ಕೌರ್ ಥಂಡಿ,
      ಕ್ರೀಡಾಪಟು ಪಿ.ಟಿ. ಉಷಾ,ವೇಯ್ಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಸೇರಿದ್ದಾರೆ.

      ಮಾಜಿ ಮಿಸ್ ಇಂಡಿಯಾ ಸ್ವರೂಪ್, ನಟಿ ಕೋಯಿನಾ ಮಿತ್ರ, ಹಾಗೂ ಕೆಲ ಬಿಜೆಪಿ ಸದಸ್ಯರು ಹಾಗೂ ರಾಜ್ಯ ಸಚಿವೆಯರನ್ನೂ ಸಹ ಮೋದಿ ಫಾಲೋ ಮಾಡಿದ್ದಾರೆ.

      ಪತ್ರಕರ್ತೆಯರ ಪೈಕಿ ಟೈಮ್ಸ್ ನೌನ ಮೇಘಾ ಪ್ರಸಾದ್, ರಿಪಬ್ಲಿಕ್ ಟಿವಿಯ ದೀಪ್ತಿ ಸಚದೇವ, ಜೀ ನ್ಯೂಸ್ ನ ರೂಬಿಕಾ ಲಿಯಾಖತ್, ಎಬಿಪಿ ನ್ಯೂಸ್ ನ ಚಿತ್ರ ತ್ರಿಪಾಠಿ, ನೇಹಾ ಪಂತ್, ರೊಮಾನಾ ಇಸಾರ್ ಖಾನ್, ಆಜ್ ತಕ್ ನ ಶ್ವೇತಾ ಸಿಂಗ್, ಇಂಡಿಯಾ ಟುಡೇನ ಪದ್ಮಜಾ ಜೋಶಿ, ದೂರದರ್ಶನ್ ನ ಶ್ರೇಯಾ ಉಪಾಧ್ಯಾಯ್ ಅವರನ್ನು ಹಿಂಬಾಲಿಸುತ್ತಿದ್ದಾರೆ.

      ಇವರಲ್ಲದೆ ಮಾಧ್ಯಮ ಲೋಕದ ರೇಣುಕಾ ಪುರಿ(ದಿ ಇಂಡಿಯನ್ ಎಕ್ಸ್ ಪ್ರೆಸ್), ಫ್ರೀ ಲ್ಯಾನ್ಸರ್ ಗಳಾದ ಶಾಲಿನಿ ಸಿಂಗ್, ತವ್ಲೀನ್ ಸಿಂಗ್ ಅರೂರ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+