ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸ್ಲೀಪರ್‌ ಕೋಚ್‌ ಸಂಚಾರ ಯಾವಾಗ, ಮಾಹಿತಿ ವಿವರ ತಿಳಿಯಿರಿ

ಬೆಂಗಳೂರು, ಅಕ್ಟೋಬರ್‌ 02: ಬಹುನಿರೀಕ್ಷಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸ್ಲೀಪರ್‌ ಕೋಚ್‌ ಉದ್ಘಾಟನೆಗೆ ಕೊನೆಗೂ ದಿನಾಂಕ ನಿಗದಿಯಾದಂತೆ ಕಂಡು ಬಂದಿದೆ. ವರದಿಗಳ ಪ್ರಕಾರ ಈ ಆಧುನಿಕ ರೈಲುಗಳ ಲೋಕಾರ್ಪಣೆಯು ಮುಂದಿನ 2024ರ ಮಾರ್ಚ್‌ ವೇಳೆಗೆ ಆಗುವ ನೀರಿಕ್ಷೆ ಇದೆ.

ವಂದೇ ಭಾರತ್ ಸ್ಲೀಪರ್ ಕೋಚ್‌ ರೈಲುಗಳು ಭಾರತೀಯ ರೈಲ್ವೇ ಇಲಾಖೆಗೆ ಮಹತ್ವದ ರೈಲುಗಳಾಗಿ ಸೇರುತ್ತಿವೆ. ಪ್ರಯಾಣಿಕರು ಈ ರೈಲುಗಳಲ್ಲಿ ರಾತ್ರಿಯಿಡೀ ಈ ಹೈಸ್ಪೀಡ್ ರೈಲುಗಳಲ್ಲಿ ಪ್ರಯಾಣಿಸಲು ಹಳೆಯ ರೈಲುಗಳಲ್ಲಂತಲ್ಲದೆ ಉತ್ತಮ ಅನುಭವ ನೀಡಲಿವೆ.

Know Vande Bharat Express sleeper coach schedule, information details

ಪ್ರಗತಿಪರ ಮತ್ತು ಸ್ವಾವಲಂಬಿ ಭಾರತದ ಸಂಕೇತವಾಗಿ ಕಾಣುವ ಸೆಮಿ ಹೈಸ್ಪೀಡ್‌ ರೈಲು ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ವಿಶಿಷ್ಟ ಲಕ್ಷಣಗಳಾಗಿವೆ ಎಂದು ಇಲಾಖೆ ತಿಳಿಸಿದೆ.

ವಿಶ್ವದರ್ಜೆಯ ವೈಶಿಷ್ಟ್ಯಗಳೊಂದಿಗೆ ಸಿದ್ಧಗೊಳ್ಳುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ನವದೆಹಲಿ ಮತ್ತು ವಾರಣಾಸಿ ನಡುವಿನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 15, 2019 ರಂದು ಚಾಲನೆ ನೀಡಿದ್ದರು.

ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್‌) ನಲ್ಲಿ ತಯಾರಿಸಲಾದ ಈ ರೈಲು ಕೋಚ್‌ಗಳು 'ಮೇಕ್-ಇನ್-ಇಂಡಿಯಾ' ಉಪಕ್ರಮದ ಸಂಕೇತವಾಗಿ ನಿಂತಿದೆ. ಅಲ್ಲದೆ ಭಾರತದ ಎಂಜಿನಿಯರಿಂಗ್ ಕೌಶಲ್ಯತೆಯನ್ನು ಪ್ರದರ್ಶಿಸುತ್ತದೆ. ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೆಮಿ ಹೈಸ್ಪೀಡ್‌ ರೈಲು ಕೋಚ್‌ಗಳನ್ನು ತಯಾರಿಸುವ ಯೋಜನೆಯು 2017 ರಿಂದಲೇ ಪ್ರಾರಂಭವಾಗಿದ್ದು, 18 ತಿಂಗಳೊಳಗೆ ಚೆನ್ನೈನ ಐಸಿಎಫ್‌ ಫ್ಯಾಕ್ಟರಿಯು ರೈಲು-18 ಅನ್ನು ಸಿದ್ದಪಡಿಸಿದೆ.

ದೇಶದ ಮೊದಲ ಸೆಮಿ ಹೈ ಸ್ಪೀಡ್ ರೈಲಿಗೆ ಜನವರಿ 2019 ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಯಿತು. ಈ ರೈಲು ಕೋಟಾ-ಸವಾಯಿ ಮಾಧೋಪುರ್ ವಿಭಾಗದಲ್ಲಿ ಗಂಟೆಗೆ 180 ಕಿಮೀ ಗರಿಷ್ಠ ಪ್ರಯೋಗಿಕ ವೇಗದಲ್ಲಿ ಸಂಚಾರ ಮಾಡಿತು. ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ 11 ರಾಜ್ಯಗಳನ್ನು ಸಂಪರ್ಕಿಸುವ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದರು.

ಭಾರತೀಯ ರೈಲ್ವೆ ಒಂದೇ ಬಾರಿಗೆ ಒಂಬತ್ತು ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಿದ್ದು ಇದೇ ಮೊದಲು. ಈ ರೈಲು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಮಾಡುತ್ತಿವೆ. ದೇಶಾದ್ಯಂತ ವಂದೇ ಭಾರತ್ ರೈಲುಗಳ ಸಂಖ್ಯೆ 34 ಕ್ಕೆ ತಲುಪಿದೆ.

ಸೆಮಿ ಹೈಸ್ಪೀಡ್ ರೈಲುಗಳು ಪ್ರಾರಂಭವಾದಾಗಿನಿಂದ, ಒಟ್ಟು 1.11 ಕೋಟಿ ಪ್ರಯಾಣಿಕರು ಅದರಲ್ಲಿ ಪ್ರಯಾಣಿಸಿದ್ದಾರೆ. ಸೆಪ್ಟೆಂಬರ್ 24ರಂದು ಚಾಲನೆಗೊಂಡ 9 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಲ್ಲಿ ಹೈದರಾಬಾದ್ (ಕಾಚಿಗುಡ)-ಬೆಂಗಳೂರು (ಯಶವಂತಪುರ), ಚೆನ್ನೈ-ತಿರುನೆಲ್ವೇಲಿ, ವಿಜಯವಾಡ-ಚೆನ್ನೈ, ಪಾಟ್ನಾ-ಹೌರಾ, ರೂರ್ಕೆಲಾ-ಪುರಿ, ಕಾಸರಗೋಡು-ಆಲಪ್ಪುಳ-ತಿರುವನಂತಪುರ, ಜೈಪುರ-ಉದಯಪುರ, ರಾಂಚಿ-ಟಾಟಾನಗರ-ಕೋಲ್ಕತ್ತಾ, ಜಾಮ್‌ನಗರ-ರಾಜ್‌ಕೋಟ್-ಅಹಮದಾಬಾದ್ ನಡುವೆ ಸಂಚಾರ ಮಾಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+