Aadhaar Card: ಆಧಾರ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಅಪ್ಡೇಟ್
Aadhaar Card: ಯಾವುದೇ ಅರ್ಜಿ ಸಲ್ಲಿಸಬೇಕೆಂದರೂ ಆಧಾರ್ ಕಾರ್ಡ್ ಬೇಕೇ ಬೇಕಾಗುತ್ತದೆ. ಇದು ಇಲ್ಲ ಅಂದ್ರೆ ಯಾವುದೇ ಆನ್‌ಲೈನ್ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎನ್ನುವಂತಾಗಿದೆ. ಹೀಗೆ ಭಾರತದಲ್ಲಿ ಆಧಾರ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಇದರಲ್ಲಿ ಆಗಾಗ ಬದಲಾವಣೆಗಳು ಕೂಡ ಆಗುತ್ತಲೇ ಇರುತ್ತದೆ. ಇದೀಗ ಈ ಸೇವೆಯ ಬಗ್ಗೆ ಮಹತ್ವದ ಅಪ್ಡೇಟ್‌ವೊಂದು ಹೊರಬಿದ್ದಿದೆ.
ಇದು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಗುರುತಿಗೆ ಕಡ್ಡಾಯ ಗುರುತಿನ ಪತ್ರವಾಗಿದೆ. ಸರ್ಕಾರದ ಯೋಜನೆಗಳು ಹಣಕಾಸಿನ ಸೇವೆಗಳು ಇವೆಲ್ಲವೂ ನಮ್ಮನ್ನು ತಲುಪಲು ಇದರ ಸಂಖ್ಯೆ ಅತ್ಯಗತ್ಯವಾಗಿದೆ. ಆದ್ದರಿಂದ ಜನರಿಗೆ ಅನುಕೂಲ ಆಗುವಂತೆ ಸರ್ಕಾರವು ಕೂಡ ಆಧಾರ್‌ನಲ್ಲಿ ಆಗಾಗ ಬದಲಾವಣೆಗಳನ್ನು ತರುತ್ತಲೇ ಇರುತ್ತದೆ.

ಆದರಂತೆಯೇ ಕೇಂದ್ರ ಸರ್ಕಾರ ಆಧಾರ್ ಕಾಯ್ದೆಗೆ ಹೋಸ ತಿದ್ದುಪಡಿ ತಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳು ಕೂಡ ಸೇವೆಗಳನ್ನು ಒದಗಿಸಲು ಹಾಗೂ ಗ್ರಾಹಕರ ಆಧಾರ್ ಕಾರ್ಡ್‌ಗಳನ್ನ ಪರಿಶೀಲನೆ ಮಾಡಲು ಅಥವಾ ದೃಢೀಕರಿಸಲು ಸಾಧ್ಯ ಆಗುತ್ತದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರವು ಉತ್ತಮ ಆಡಳಿತಕ್ಕಾಗಿ ಆಧಾರ್ ದೃಢೀಕರಣ ತಿದ್ದುಪಡಿ ನಿಯಮಗಳು, 2025 ಅನ್ನು ಘೋಷಿಸಿದೆ. ಇದರಿಂದ ಖಾಸಗಿ ಸಂಸ್ಥೆಗಳು ಕೂಡ ಆಧಾರ್ ಪರಿಶೀಲಿಸುವ ಅಧಿಕಾರ ಪಡೆಯಬುದಾಗಿದೆ. ಆದರೆ, ಖಾಸಗಿಯವರ ಪ್ರಸ್ತಾವಿತ ಯೋಜನೆಗೆ ಸರ್ಕಾರದಿಂದ ಅನುಮೋದನೆ ಇರಬೇಕೆಂದು ಸೂಚನೆ ನೀಡಿದೆ.
ಆದರೆ, ಯಾವುದೇ ಖಾಸಗಿ ಸಂಸ್ಥೆಯು ಆಧಾರ್ ದೃಢೀಕರಣ ಕಾರ್ಯವನ್ನು ಸ್ವಂತವಾಗಿ ನಿರ್ವಹಿಸಲಾಗುವುದಿಲ್ಲ. ಇದಕ್ಕೆ ಕೆಲವು ನಿಯಮಗಳನ್ನು ಖಾಸಗಿಯವರು ಪಾಲನೆ ಮಾಡಬೇಕಾಗುತ್ತದೆ. ಒಂದು ಸಂಸ್ಥೆಯು ಆಧಾರ್ ಅನ್ನು ಪರಿಶೀಲಿಸಬೇಕೆಂದರೆ, ಅದರ ಉದ್ದೇಶವು ಸರ್ಕಾರದ ನಿರ್ದಿಷ್ಟ ನಿಯಮಗಳ ವ್ಯಾಪ್ತಿಗೆ ಬರುತ್ತದೆ ಮತ್ತು ದೇಶದ ಹಿತಾಸಕ್ತಿಗಾಗಿ ಮಾಡಲಾಗುತ್ತಿದೆ ಎಂದು ದೃಢಪಡಿಸಬೇಕು.
ಬಳಿಕ ಆ ಪ್ರಸ್ತಾವನೆಯನ್ನ ಸಂಬಂಧಿತ ಕಚೇರಿಗೆ ಸಲ್ಲಿಕೆ ಮಡಬೇಕಾಗುತ್ತದೆ. ಸಚಿವಾಲಯವು ನಿಜವಾಗಿಯೂ ದೇಶದ ಹಿತಾಸಕ್ತಿಗೆ ಅನುಗುಣ ಆಗಿದೆ ಎಂದು ಭಾವಿಸಿದರೆ, ಅದನ್ನು ಶಿಫಾರಸುಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಬಳಿಕ ಯುಐಡಿಎಐ ಮತ್ತು ಐಟಿ ಸಚಿವಾಲಯವು ಅರ್ಜಿಯನ್ನು ಪರಿಶೀಲನೇ ಮಾಡುತ್ತದೆ. ನಂತರ ಯುಐಡಿಎಐ ಖಾಸಗಿ ಕಂಪನಿಗಳ ಅರ್ಜಿಗಳನ್ನು ಪರಿಶೀಲಿಸುತ್ತದೆ. ಕೊನೆಯದಾದಿ ಯುಐಡಿಎಐ ಶಿಫಾರಸುಗಳ ಪ್ರಕಾರ, ಸಚಿವಾಲಯವು ಅವುಗಳನ್ನು ಅನುಮೋದಿಸುತ್ತದೆ.
ಅಂತಿಮ ಅನುಮೋದನೆ ಪಡೆದ ನಂತರ, ಸಂಸ್ಥೆಗೆ ಆಧಾರ್ ಪರಿಶೀಲನೆಯನ್ನು ಮಾಡಲು ಅನುಮತಿ ನೀಡಲಾಗುತ್ತದೆ. ನಂತರ ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆಯು ಅನುಮತಿ ನೀಡುತ್ತದೆ. ಇದರಡಿ ಖಾಸಗಿ ಸಂಸ್ಥೆಗಳು ಕೆಲವು ಕ್ಷೇತ್ರಗಳಲ್ಲಿ ಆಧಾರ್ ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲು ಸಾಧ್ಯ ಆಗುತ್ತದೆ.
ಇದರಿಂದ ಡಿಜಿಟಲ್ ವೇದಿಕೆಗಳ ಮೂಲಕ ಸೇವೆಗಳನ್ನು ಒದಗಿಸಲು, ಹೊಸದನ್ನು ಮತ್ತು ಜ್ಞಾನವನ್ನು ಉತ್ತೇಜಿಸಲು ಮತ್ತು ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ದುರುಪಯೋಗವನ್ನು ತಡೆಯಲು ಖಾಸಗಿ ಸಂಸ್ಥೆಗಳು ಆಧಾರ್ ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇನ್ನು ಸರ್ಕಾರದ ಪ್ರಕಾರ ಈ ಹೊಸ ತಿದ್ದುಪಡಿಯು ಇ-ಕಾಮರ್ಸ್, ಪ್ರಯಾಣ, ಪ್ರವಾಸೋದ್ಯಮ, ಹೋಟೆಲ್‌ಗಳು, ಆರೋಗ್ಯ ರಕ್ಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಸೇವೆಗಳನ್ನು ಪಡೆಯುವುದನ್ನು ಹೆಚ್ಚು ಸುಲಭ ಆಗಿಸುತ್ತದೆ.












Click it and Unblock the Notifications