Khushboo: ತಮಿಳುನಾಡಿನ ಮುಂದಿನ ಸಿಎಂ ಪರ ನಟಿ - ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಬ್ಯಾಟಿಂಗ್, ಯಾರೆಲ್ಲ ಬೆಂಬಲ ?
Khushboo: ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ವಿಜಯ್ ಅವರ ಪರ ನಟಿ - ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ ವಿಜಯ್ ಪರವಾಗಿ ವಿವಿಧ ಪಕ್ಷದ ನಾಯಕರು ಹಾಗೂ ನಟಿ - ನಟಿಯರು ಸಹ ಮಾತನಾಡಿದ್ದಾರೆ. ವಿಜಯ್ ಅವರ ತಮಿಗ ವೆಟ್ರಿ ಕಳಗಂ ಪಕ್ಷವು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ.
ಮೊದಲ ಪ್ರಯತ್ನದಲ್ಲೇ ನಟ ವಿಜಯ್ ಅವರ ಪಕ್ಷವು 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಬಹುಮತ ಇಲ್ಲದೆ ಇರುವುದು ವಿಜಯ್ಗೆ ಸಂಕಷ್ಟವನ್ನು ತಂದೊಡ್ಡಿದೆ. ಆದರೆ ವಿಜಯ್ ಅವರಿಗೆ ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡುವುದಕ್ಕೆ ಇನ್ನೂ 10 ಶಾಸಕರ ಬೆಂಬಲ ಅವಶ್ಯವಿದೆ. ಈ ನಡುವೆ ಹಲವರು ಬೆಂಬಲ ಸೂಚಿಸಿದ್ದಾರೆ.

ತಮಿಳುನಾಡಿನ ರಾಜಕೀಯ ಹಾಗೂ ವಿಜಯ್ ಅವರ ಪರ ನಟಿ ಮತ್ತು ಬಿಜೆಪಿಯ ಮುಖಂಡರು ಆಗಿರುವ ಖುಷ್ಬೂ ಸುಂದರ್ ಅವರು ಬ್ಯಾಟಿಂಗ್ ಮಾಡಿದ್ದಾರೆ. ತಮಿಳುನಾಡು ರಾಜ್ಯದ ಪ್ರಜೆಯಾಗಿ, ಜನರು ತಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದಾಗ, ಅವರೇ ಅದನ್ನು ಮುನ್ನಡೆಸಬೇಕು ಎಂದು ಖುಷ್ಬೂ ಸುಂದರ್ ಅವರು ಹೇಳಿದ್ದಾರೆ. ಇದರೊಂದಿಗೆ ವಿಜಯ್ ಹಾಗೂ ಟಿವಿಕೆ ಪಕ್ಷವನ್ನು ಅವರು ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ - ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು, ರಾಜ್ಯಪಾಲರ ಈ ನಡವಳಿಕೆ ಅಸಹ್ಯಕರ.. ಸ್ವೀಕಾರಾರ್ಹವಲ್ಲ ಮತ್ತು ಸಂವಿಧಾನಬಾಹಿರ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು... ಆದರೆ ವಿಜಯ್ ಅವರಿಗೆ ಜನಾದೇಶ ಸಿಕ್ಕಿದೆ. ಅವರಿಗೆ ಸದನದ ಮಹಡಿಯಲ್ಲಿ ತಮ್ಮ ಹಕ್ಕನ್ನು ಪಡೆಯಲು ಅವಕಾಶ ನೀಡಬೇಕು. #justasking ಎಂದು ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು ನಟ ಕಿಶೋರ್ ಕುಮಾರ್ ಅವರು, ತಮಿಳುನಾಡಿನ ಚಡ್ಡಿ ರಾಜ್ಯಪಾಲರು ಬಿಜೆಪಿಯ ಏಕೈಕ ಶಾಸಕರಾದ ಶ್ರೀ ಭೋಜ ರಾಜನ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರಂತೆ. ಮತ್ತು 2031 ರ ವೇಳೆಗೆ ವಿಧಾನಸಭೆಯಲ್ಲಿ ಬಲವನ್ನು ಸಾಬೀತುಪಡಿಸಲು ಅವರಿಗೆ ಅನುಮತಿ ನೀಡಲಾಗಿದೆಯಂತೆ ಎಂದು ಆಕ್ರೋಶ ಭರಿತ ವ್ಯಂಗ್ಯದೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು, ಟಿವಿಕೆ ವಿಜಯ್ಗೆ ಅವಕಾಶವಾದಿ ಕಾಂಗ್ರೆಸ್ ಮಾತ್ರ ಬೆಂಬಲ ನೀಡಿದಂತಿದೆ- ಇದರಲ್ಲಿ ಆಶ್ಚರ್ಯವೇ ಇಲ್ಲ. ವಿಜಯ್ಗೆ ಜನರಿಂದ ಭಾರೀ ಬೆಂಬಲ ಸಿಕ್ಕಿದ್ದರೂ, ತಮಿಳುನಾಡಿನ ರಾಜಕೀಯ ನಾಯಕರು ಅವರನ್ನು ಆ ಜನರ ವಿಶ್ವಾಸಕ್ಕೆ ಅರ್ಹನಾಗಿ ಪರಿಗಣಿಸುತ್ತಿಲ್ಲ ಕಾಂಗ್ರೆಸ್ ಎಂದಿನಂತೆ ನಂಬಿಕೆಗೆ ಯೋಗ್ಯವಲ್ಲ ವಿಜಯ್ ಗೆದ್ದವನು ನಿಜ - ಆದರೆ ನಾಯಕನಲ್ಲ ಎಂದಿದ್ದಾರೆ.












Click it and Unblock the Notifications