ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Menstrual leave: ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲಿದೆ ಕೇರಳದ ಕೊಚ್ಚಿನ್ ವಿಶ್ವವಿದ್ಯಾಲಯ

|
Google Oneindia Kannada News

ತಿರುವನಂತಪುರಂ, ಜ. 15: ಇದು ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಹಲವು ದಿನಗಳ ಕನಸು ನನಸಾಗಿದೆ. ಕೇರಳದ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲು ನಿರ್ಧರಿಸಿದೆ.

ಕೇರಳದಲ್ಲಿ ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆ ನೀಡುತ್ತಿರುವುದು ಇದೇ ಮೊದಲು.

ಕಳೆದ ತಿಂಗಳು, ಕೇರಳದ ಕೊಟ್ಟಾಯಂ ಮೂಲದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯವು ತಮ್ಮ ತರಗತಿಗಳಲ್ಲಿ ಅಗತ್ಯವಿರುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 60 ದಿನಗಳ ಹೆರಿಗೆ ರಜೆ ನೀಡುವುದಾಗಿ ಘೋಷಿಸಿತ್ತು.

ಕನ್ನಡ ಯುವತಿ ಮೇಲೆ ಕೇರಳ ಯುವತಿ ಹಲ್ಲೆ: ಎಫ್‌ಐಆರ್‌ ದಾಖಲುಕನ್ನಡ ಯುವತಿ ಮೇಲೆ ಕೇರಳ ಯುವತಿ ಹಲ್ಲೆ: ಎಫ್‌ಐಆರ್‌ ದಾಖಲು

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟದ ಬೇಡಿಕೆ ನಂತರ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜನವರಿ 11 ರಂದು ಹೊರಡಿಸಲಾದ ರಜೆ ನೀಡುವ ಆದೇಶದಲ್ಲಿ, ಪ್ರತಿ ಸೆಮಿಸ್ಟರ್‌ನಲ್ಲಿ ಮಹಿಳಾ ವಿದ್ಯಾರ್ಥಿಯು ತನ್ನ ಒಟ್ಟು ಹಾಜರಾತಿಯ ಶೇಕಡಾ 2 ರಷ್ಟನ್ನು ಮುಟ್ಟಿನ ಪ್ರಯೋಜನವಾಗಿ ಪಡೆಯಬಹುದು.

Kerala University grants menstrual leave for female students

ಇತ್ತೀಚೆಗೆ ವಿಶ್ವವಿದ್ಯಾಲಯದ ಸ್ಟೂಡೆಂಟ್ಸ್ ಯೂನಿಯನ್ ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳಿಂದ ಮುಟ್ಟಿನ ರಜೆ ನೀಡುವ ಬಗ್ಗೆ ಔಪಚಾರಿಕವಾಗಿ ಉಪಕುಲಪತಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಅನುಮೋದಿಸಿ ಆದೇಶ ಹೊರಡಿಸಲಾಗಿದೆ.

ವಿಶ್ವವಿದ್ಯಾನಿಲಯದ ನಿಯಮದ ಪ್ರಕಾರ, ಪರೀಕ್ಷೆಗೆ ಕುಳಿತುಕೊಳ್ಳಲು ಪ್ರತಿ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಯು ಕನಿಷ್ಠ 75 ಪ್ರತಿಶತ ಹಾಜರಾತಿಯನ್ನು ಹೊಂದಿರಬೇಕು. ಮುಟ್ಟಿನ ರಜೆಯು ಹಾಜರಾತಿ ಕೊರತೆಗೆ ಶೇಕಡಾ ಎರಡರಷ್ಟು ಮನ್ನಣೆ ನೀಡುವುದರೊಂದಿಗೆ, ವಿದ್ಯಾರ್ಥಿನಿಯರ ಕಡ್ಡಾಯ ಹಾಜರಾತಿಯು ಶೇಕಡಾ 73 ಆಗಿರುತ್ತದೆ.

Kerala University grants menstrual leave for female students

ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯೆ ಡಾ.ಪೂರ್ಣಿಮಾ ನಾರಾಯಣನ್ ಮಾತನಾಡಿ, ವಿದ್ಯಾರ್ಥಿಗಳ ಒಕ್ಕೂಟದ ಪ್ರಾತಿನಿಧ್ಯದ ಮೇರೆಗೆ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸಿದೆ. ವಿಶ್ವವಿದ್ಯಾನಿಲಯಗಳು ಇಂತಹ ನಿರ್ಧಾರಗಳು ತೆಗೆದುಕೊಳ್ಳುವುದು ಮಹಿಳಾ ವಿದ್ಯಾರ್ಥಿಗಳ ದೃಷ್ಟಿಯಿಂದ ಹೆಚ್ಚು ಅಗತ್ಯವಿರುವ ಸೂಚಕವಾಗಿದೆ. ಭವಿಷ್ಯದಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ಪರಿಚಯಿಸುವ ಬಗ್ಗೆ ಶೈಕ್ಷಣಿಕ ಜಗತ್ತು ಚಿಂತನೆ ನಡೆಸಬೇಕಿದೆ" ಎಂದಿದ್ದಾರೆ.

English summary
Cochin University of Science and Technology in Kerala decided to grant menstrual leave for female students. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X