ಕೇರಳ ಪಟಾಕಿ ದುರಂತ, 5 ಜನರ ಬಂಧನ
ತಿರುವನಂತಪುರಂ, ಏಪ್ರಿಲ್ 11 : ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್‌ನ ದೇವಾಲಯದಲ್ಲಿ ನಡೆದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಅಗ್ನಿ ದುರಂತದಲ್ಲಿ 100ಕ್ಕೂ ಅಧಿಕ ಭಕ್ತರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. [ಕೇರಳ ದುರಂತದ ಚಿತ್ರಗಳು]
ಭಾನುವಾರ ಮುಂಜಾನೆ 3.30ರ ಸುಮಾರಿಗೆ ನಡೆದ ಅಗ್ನಿ ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರು, ಪಟಾಕಿ ತಂದಿದ್ದ ಐವರನ್ನು ಬಂಧಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿಯ ಇತರ ಕೆಲವು ಸದಸ್ಯರಿಗಾಗಿ ಹುಡುಕಾಟ ಮುಂದುವರೆದಿದೆ. [ಪಟಾಕಿ ಸಿಡಿದು ಭಾರೀ ಅಗ್ನಿ ದುರಂತ, 105 ಸಾವು]

ಪಂಕಜಾಕ್ಷಿ ಅವರು ನೀಡಿದ ದೂರಿನ ಅನ್ವಯ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿತ್ತು. ಆದರೆ, ರಾತ್ರೋರಾತ್ರಿ ನಿಷೇಧವನ್ನು ವಾಪಸ್ ಪಡೆಯಲಾಗಿತ್ತು. ನಿಷೇಧ ವಾಪಸ್ ಪಡೆದ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಂಕಜಾಕ್ಷಿ ಅವರ ಮನೆಗೂ ದುರಂತದಲ್ಲಿ ಹಾನಿಯಾಗಿದೆ. [ದೇವರ ನಾಡು ಕೇರಳದ ಮೇಲೆ ಮೂಕಾಂಬಿಕೆಯ ಮುನಿಸು!]
ದೇವಾಲಯದಿಂದ ಸುಮಾರು 50 ಮೀಟರ್ ದೂರದಲ್ಲಿ ವಾಸವಾಗಿರುವ 80 ವರ್ಷದ ಪಂಕಜಾಕ್ಷಿ ಅವರು ಕಳೆದ 4 ವರ್ಷಗಳಿಂದ ಪಟಾಕಿ ಸಿಡಿಸಬಾರದು ಎಂದು ದೂರು ನೀಡುತ್ತಲೇ ಇದ್ದಾರೆ. ಈ ಬಾರಿಯು ಅವರು ದೂರು ಕೊಟ್ಟಿದ್ದರು. ಆಗ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿತ್ತು. [ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು]
ಆದರೆ, ಅಗ್ನಿ ಅವಘಡ ಸಂಭವಿಸಿದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧಿಕಾರಿಗಳು ಹೇಳಿದ ಬಳಿಕ ನಿಷೇಧವನ್ನು ತೆರೆವುಗೊಳಿಸಲಾಗಿತ್ತು. ಪಟಾಕಿ ಸಿಡಿಸಲೆಂದೇ ಐದಕ್ಕೂ ಹೆಚ್ಚು ಜನರು ಆಗಮಿಸಿದ್ದರು.












Click it and Unblock the Notifications