ಕೊಲ್ಲಂ ದೇವಾಲಯದ ಬಳಿ ಪಟಾಕಿ ತುಂಬಿದ 3 ಕಾರು ಪತ್ತೆ

By: ವಿಕಾಸ್ ನಂಜಪ್ಪ
Subscribe to Oneindia Kannada

ತಿರುವನಂತಪುರಂ, ಏಪ್ರಿಲ್ 11 : ಪಟಾಕಿಗಳು ತುಂಬಿದ್ದ ಮೂರು ಕಾರುಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲ್ಲಂ ಜಿಲ್ಲೆಯ ಪುತ್ತಿಂಗಲ್ ಮೂಕಾಂಬಿಕ ದೇವಸ್ಥಾನದ ಬಳಿ ಈ ಕಾರುಗಳು ಪತ್ತೆಯಾಗಿವೆ.

ಸೋಮವಾರ ಮಧ್ಯಾಹ್ನ ದೇವಾಲಯದ ಸಮೀಪ ಕಾರುಗಳಲ್ಲಿ ಪಟಾಕಿ ಪತ್ತೆಯಾಗಿದೆ. ಮೂರು ಕಾರುಗಳಲ್ಲಿ ಪಟಾಕಿಗಳಿದ್ದು, ಈ ಕಾರುಗಳು ಯಾರಿಗೆ ಸೇರಿದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ. [ಪಟಾಕಿ ಹೊಡೆಯಬೇಡಿ ಎಂಬ ಅಜ್ಜಿ ಮಾತು ಕೇಳಲಿಲ್ಲ]

fire accident

ದೇವಾಲಯದ ಸುತ್ತ-ಮುತ್ತಲಿನ ಜನರು ಕಾರ್ಯಾಚರಣೆ ಮುಗಿಯುವ ತನಕ ದೂರದ ಸ್ಥಳಗಳಿಗೆ ತೆರಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಎಲ್ಲಾ ಪಟಾಕಿಗಳನ್ನು ನಿಷ್ಕ್ರೀಯಗೊಳಿಸಿ ಸ್ಥಳ ಸುರಕ್ಷಿತವಾಗಿದೆ ಎಂದು ಘೋಷಣೆ ಮಾಡುವ ತನಕ ಜನರು ಕಾರುಗಳ ಹತ್ತಿರ ಬರಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. [ಕೇರಳ ಪಟಾಕಿ ದುರಂತ, 5 ಜನರ ಬಂಧನ]

ಮತ್ತೊಂದು ಕಡೆ ಭಾನುವಾರ ಮುಂಜಾನೆ ಮೂಕಾಂಬಿಕ ದೇವಸ್ಥಾನದ ಜಾತ್ರೆಯಲ್ಲಿ ನಡೆದ ಅಗ್ನಿ ದುರಂತಕ್ಕೆ ಕಾರಣವಾದ ಪಟಾಕಿಗಳಲ್ಲಿ ನಿಷೇಧಿತ ರಸಾಯನಿಕಗಳನ್ನು ಬಳಕೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದಾರೆ.[ದೇವರ ನಾಡು ಕೇರಳದ ಮೇಲೆ ಮೂಕಾಂಬಿಕೆಯ ಮುನಿಸು!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Three abandoned cars with fireworks have been seized by the Kerala police. The three cars were found abandoned near the Puttingal temple where a major accident took place in which over 100 people died and nearly 380 persons were injured.
Please Wait while comments are loading...