ಸಂಬಂಧಿಯ ಆಸೆ, ಪೊಲೀಸರ ಕಾಮತೃಷೆಗೆ ಬಾಲಕಿ ಬಲಿ

ಅಲೆಪ್ಪಿ, ಜನವರಿ 17 : ನಂಬಿಗಸ್ತ ಸಂಬಂಧಿಯೆಂದು ಆಕೆ ಕರೆದುಕೊಂಡು ಹೋದಲ್ಲೆಲ್ಲ ಹದಿನಾರರ ಹರೆಯದ ಆ ಬಾಲಕಿ ಹೋಗುತ್ತಿದ್ದಳು. ಆದರೆ, ಅಲ್ಲಿ ನಡೆಯುತ್ತಿದ್ದುದು ಏನು? ಯಾಕೆ ಇಷ್ಟು ದಿನ ಆ ಬಾಲಕಿ ಬಾಯಿ ಮುಚ್ಚಿಕೊಂಡಿದ್ದಳು?

ಹೀನ ಸುಳಿಯಲ್ಲಿ ಸಿಲುಕಿದ್ದ ಬಾಲಕಿಯ ವಿಚಾರಣೆ ನಡೆಸಿದಾಗ, ಕತ್ತಲೆ ಲೋಕದ ಅಸಹ್ಯಗಳು ಬರಿದು ಬೆತ್ತಲಾಗುತ್ತಿವೆ. ಸತ್ಯಸಂಗತಿಯನ್ನು ಕೆದಕುತ್ತ ಹೋದಂತೆಲ್ಲ ಕರಾಳ ಮುಖಗಳ ದಿಗ್ದರ್ಶನವಾಗುತ್ತಿದೆ. ಇದು ನಡೆದಿರುವುದು ಕೇರಳದ ಅಲೆಪ್ಪಿಯಲ್ಲಿ.

24 ವರ್ಷದ ಲಜ್ಜೆಗೆಟ್ಟ ಹೆಸರು ಅತಿರಾಳ ದುರಾಸೆಗಾಗಿ 16 ವರ್ಷದ ಬಾಲಕಿ ಕವಿತಾ(ಹೆಸರು ಬದಲಾಯಿಸಲಾಗಿದೆ)ಳ ಬಾಳಲ್ಲಿ ಬರೀ ಕತ್ತಲೆ ತುಂಬಿಕೊಂಡಂತಾಗಿದೆ. ಡ್ರೈವರುಗಳು, ಕಾಲೇಜು ವಿದ್ಯಾರ್ಥಿಗಳು, ಕಡೆಗೆ ಪೊಲೀಸರು ಕೂಡ ಕವಿತಾಳ ಬಾಳನ್ನು ಹಾಳುಗೆಡವಿದ್ದಾರೆ.

Kerala teen subjected to horrific ordeal

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅತಿರಾಳನ್ನು ಕೇರಳದಲ್ಲಿ ಬಂಧಿಸಲಾಗಿದ್ದರೆ, ಕವಿತಾಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಹಿರಿಯ ಪೊಲೀಸ್ ಅಧಿಕಾರಿ ತಲೆಮರೆಸಿಕೊಂಡಿದ್ದ ನೆಲ್ಸನ್ ಥಾಮಸ್ ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಜೊತೆಗೆ, ಪ್ರೊಬೇಷನರಿ ಪೊಲೀಸ್ ಅಧಿಕಾರಿ ಲೈಜುನನ್ನು ಕೂಡ ಬಂಧಿಸಲಾಗಿದೆ.

ಕರಾಳ ಅಧ್ಯಾಯ : ನೋಡಲು ಸುಂದರವಾಗಿದ್ದರೂ ಆರ್ಥಿಕವಾಗಿ ದುರ್ಬಲಳಾಗಿದ್ದ ಕವಿತಾಳ ಮನೆಗೆ ಸಂಬಂಧಿಯಾದ ಅತಿರಾ ಆಗಾಗ ಬರುತ್ತಿದ್ದಳು. ಕವಿತಾಳ ತಂದೆ ಅಂಗವಿಲಕನಾಗಿದ್ದರೆ, ತಾಯಿ ಮಾನಸಿಕವಾಗಿ ಅಸ್ವಸ್ಥಳು. ನಂಬಿಗಸ್ತಳೆಂದು ಅತಿರಾಳ ಜೊತೆ ಕವಿತಾಳನ್ನು ಕಳಿಸಿಕೊಡುತ್ತಿದ್ದರು.

ಆದರೆ, ಅತಿರಾ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿದ್ದುದಾದರೂ ಎಲ್ಲಿಗೆ? ವಿಟಪುರುಷರು ಕಾದುಕುಳಿತಿದ್ದ ಹೋಟೆಲಿಗೆ, ಲಾಡ್ಜುಗಳಿಗೆ. ಆಕೆ ನಿರಂತರವಾಗಿ ಐದಾರು ತಿಂಗಳುಗಳಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಅತಿರಾ ತನ್ನ ಥೈಲಿಯನ್ನು ತುಂಬಿಕೊಳ್ಳುತ್ತಿದ್ದರೆ, ಕವಿತಾ ಕಣ್ಣನ್ನು ತುಂಬಿಕೊಳ್ಳುತ್ತಿದ್ದಳು.

ಅತಿರಾಳ ಚಲನವಲನಗಳು, ಬರಬಾರದ ಸಮಯದಲ್ಲೆಲ್ಲ ಕವಿತಾಳ ಮನೆಗೆ ಬರುತ್ತಿದ್ದುದು ನೋಡಿ ನೆರೆಹೊರೆಯವರಿಗೆ ಶಂಕೆ ಬಂದಿದೆ. ಸಾಕಷ್ಟು ವಿಚಾರಣೆಯನ್ನು ನೆರೆಹೊರೆಯವರು ನಡೆಸಿದರೂ ಕವಿತಾ ಬಾಯಿಬಿಟ್ಟಿಲ್ಲ. ಕಡೆಗೆ ಪೊಲೀಸರಿಗೆ ದೂರ ಹೋದಾಗ ಎಲ್ಲ ಬಯಲಾಗಿದೆ.

ಮಹಿಳಾ ಪೊಲೀಸ್ ಅಧಿಕಾರಿಯ ಮುಂದೆ ತನ್ನ ಕತ್ತಲ ಲೋಕದ ಕಥೆಯನ್ನು ಕವಿತಾ ಬಿಚ್ಚಿಟ್ಟಿದ್ದಾಳೆ. ಹಲವಾರು ಹೆಸರುಗಳನ್ನು ಕೂಡ ತೆಗೆದುಕೊಂಡಿದ್ದಾಳೆ. ಅತಿರಾಳನ್ನು ಅತಿಯಾಗಿ ನಂಬಿದ್ದ ಕವಿತಾಳ ಪೋಷಕರಿಗೆ ಕೂಡ ಏನು ನಡೆಯುತ್ತಿತ್ತೆಂಬುದು ಕೂಡ ಅರಿವಿಲ್ಲ.

ಇಲ್ಲಿಯವರೆಗೆ ಇಬ್ಬರು ಪೊಲೀಸ್ ಅಧಿಕಾರಿಗಳು, ಪ್ರಿನ್ಸ್ ಮತ್ತು ಜಿನು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಈ ಜಾಲದಲ್ಲಿ ಇನ್ನೂ ಹಲವಾರು ಜನರು ಭಾಗಿಯಾಗಿರಬಹುದೆಂದು ಪೊಲೀಸರು ಶಂಕಿಸಿ, ಅವರನ್ನು ಬಂಧಿಸಲು ಜಾಲ ಬೀಸಿದ್ದಾರೆ.

ಭಾರತೀಯ ದಂಡೆ ಸಂಹಿತೆಯ ಸೆಕ್ಷನ್ 342, 353, 356, 370 ಮತ್ತು ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು 76, ಹಾಗು ಪೋಕ್ಸೋ ಕಾಯ್ದೆಯ 8, 9, 11, 12 ಮತ್ತು 16 ಅಡಿಗಳಲ್ಲಿ ಕೇಸನ್ನು ಹಾಕಲಾಗಿದೆ. ಕವಿತಾಳನ್ನು ಅತಿರಾಳ ಆಕೆಯ 5 ವರ್ಷದ ಮಗಳ ಸಮೇತ ರಿಮಾಂಡ್ ಹೋಂಗೆ ಸೇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+