OMG: ಮಗುವಿನ ಶ್ವಾಸಕೋಶದಲ್ಲಿ ಪತ್ತೆಯಾದ ಎಲ್‌ಇಡಿ ಬಲ್ಬ್! ಮುಂದೆನಾಯ್ತು..?

ತಿರುವನಂತಪುರಂ ಅಕ್ಟೋಬರ್ 3: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವಿನ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್ ಪತ್ತೆಯಾದ ಭಯಾನಕ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಏಳು ತಿಂಗಳ ಮಗುವಿನ ಶ್ವಾಸಕೋಶದಲ್ಲಿ ಆಟಿಕೆಗಳಲ್ಲಿ ಬಳಸುವ ಎಲ್‌ಇಡಿ ಬಲ್ಬ್ ಪತ್ತೆಯಾಗಿದ್ದು ವೈದ್ಯರು ಶಾಕ್ ಆಗಿದ್ದಾರೆ.

ಕೆಲ ದಿನಗಳ ಹಿಂದೆ ಪೋಷಕರಿಬ್ಬರು ಮಗುವಿಗೆ ಉಸಿರಾಟದ ತೊಂದರೆಯ ಕಾರಣ ಹೇಳಿ ಕೊಟ್ಟಾಯಂನ ಆಸ್ಪತ್ರೆಗೆ ಹೋಗಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಸ್ಕ್ಯಾನಿಂಗ್ ಮಾಡಿಸಲು ತಿಳಿಸಿದ್ದಾರೆ. ಸ್ಕ್ಯಾನಿಂಗ್ ವರದಿಯಲ್ಲಿ ಮಗುವಿನ ಶ್ವಾಸಕೋಶದಲ್ಲಿ ಏನೋ ಇರುವುದು ಕಂಡು ಬಂದಿದೆ. ಸೂಕ್ಷ್ಮವಾಗಿ ಅದನ್ನು ಗಮನಿಸಿದಾಗ ಅದು ಎಲ್‌ಇಡಿ ಬಲ್ಬ್ ಎಂದು ತಿಳಿದುಬಂದಿದೆ. ತಡಮಾಡದೇ ವೈದ್ಯರು ಮಗುವನ್ನು ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.

Kerala: LED bulb found in childs lungs! what happened next?

ಅಲ್ಲಿ ಬ್ರಾಂಕೋಸ್ಕೋಪಿಕ್ ವಿಧಾನದ ಮೂಲಕ ಇದನ್ನು ಹೊರಗೆ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಮಗು ಸದ್ಯ ಪ್ರಾಣಾಪಾಯದಿಂದ ಪಾರಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಯವಿಧಾನದ ನೇತೃತ್ವ ವಹಿಸಿದ್ದ ಅಮೃತಾ ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮನಾಲಜಿ ವಿಭಾಗದ ಮುಖ್ಯಸ್ಥ ಡಾ. ಟಿಂಕು ಜೋಸೆಫ್, ಸುಮಾರು ಒಂದು ವಾರದ ಹಿಂದೆ ಮಗುವಿನ ದೇಹವನ್ನು ಪ್ರವೇಶಿಸಿರುವ ಶಂಕೆ ಇದೆ ಎಂದು ತಿಳಿಸಿದರು.

'ಮಗು ಸಾಮಾನ್ಯವಾಗಿ ಆಟಿಕೆಗಳೊಂದಿಗೆ ಆಟವಾಡುತ್ತದೆ. ಅದನ್ನು ನಾವು ಗಮನಿಸಿಲ್ಲ. ಉಸಿರಾಟದ ತೊಂದರೆಗೆ ಶೀತ ಕಾರಣ ಎಂದು ನಾವು ಭಾವಿಸಿದ್ದೆವು. ವೈದ್ಯರು ತಿಳಿಸಿದಾಗ ನಮಗೆ ನಿಜಕ್ಕೂ ಗಾಬರಿಯಾಯಿತು. ನಮಗೆ ವೈದ್ಯರು ಧೈರ್ಯ ಹೇಳಿ ಮಗುವಿನ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸದ್ಯ ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ' ಎಂದು ಪೋಷಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+