Kerala Elections 2026: ಕೇರಳಂ ಚುನಾವಣಾ ಸಮೀಕ್ಷೆ: ಯುಡಿಎಫ್‌ಗೆ ಅಧಿಕಾರದ ಹಾದಿ ಸುಗಮ; ಎಲ್‌ಡಿಎಫ್‌ಗೆ ಹಿನ್ನಡೆ ಸಾಧ್ಯತೆ
ಕೇರಳಂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ 'ಪೋಲ್ ಟ್ರ್ಯಾಕರ್' (Poll Tracker) ನಡೆಸಿರುವ ಸಮೀಕ್ಷೆಯ ವರದಿ ಹೊರಬಿದ್ದಿದ್ದು, ರಾಜ್ಯದಲ್ಲಿ ಯುಡಿಎಫ್ (UDF) ಮೈತ್ರಿಕೂಟ ಸ್ಪಷ್ಟ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಕೇರಳಂನ ರಾಜಕೀಯ ಅಖಾಡದಲ್ಲಿ ಈ ಬಾರಿ ಅಧಿಕಾರ ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ಸಮೀಕ್ಷೆ ಸೂಚಿಸಿದೆ.
ಪ್ರಸ್ತುತ ಆಡಳಿತಾರೂಢ ಎಲ್‌ಡಿಎಫ್ (LDF) ಮೈತ್ರಿಕೂಟವನ್ನು ಹಿಂದಿಕ್ಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ. ಕೇರಳಂ ವಿಧಾನಸಭೆಯ ಒಟ್ಟು 140 ಸ್ಥಾನಗಳಲ್ಲಿ ಬಹುಮತ ಪಡೆಯಲು 71 ಸ್ಥಾನಗಳ ಅಗತ್ಯವಿದೆ. ಸಮೀಕ್ಷೆಯ ಪ್ರಕಾರ ಫಲಿತಾಂಶ ಈ ರೀತಿ ಇದೆ.

ಮೈತ್ರಿಕೂಟ: ಅಂದಾಜು ಸ್ಥಾನಗಳು (ಮತ ಹಂಚಿಕೆ)
UDF (ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ): 76-85 ಸ್ಥಾನಗಳು (ಶೇ. 42.8- 44.2 ಮತಗಳು)
LDF (ಸಿಪಿಐಎಂ ನೇತೃತ್ವದ ಮೈತ್ರಿಕೂಟ): 55-60 ಸ್ಥಾನಗಳು (ಶೇ.37.5-39.5 ಮತಗಳು)
NDA (ಬಿಜೆಪಿ ನೇತೃತ್ವದ ಮೈತ್ರಿಕೂಟ): 1-3 ಸ್ಥಾನಗಳು (ಶೇ.13.5-14.8 ಮತಗಳು)
ಇತರೆ: 0 ಸ್ಥಾನ (ಶೇ.2.0-2.5 ಮತಗಳು)
ಸಮೀಕ್ಷೆಯ ಪ್ರಕಾರ ಯುಡಿಎಫ್ 76-85 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತದ ಗಡಿಯನ್ನು ದಾಟಲಿದೆ. ಸುಮಾರು ಶೇ. 44ರಷ್ಟು ಮತಗಳನ್ನು ಪಡೆಯುವ ಮೂಲಕ ಯುಡಿಎಫ್ ಪ್ರಬಲವಾಗಿ ಹೊರಹೊಮ್ಮಲಿದೆ. ಸತತ ಎರಡನೇ ಬಾರಿಗೆ ಅಧಿಕಾರದಲ್ಲಿರುವ ಎಲ್‌ಡಿಎಫ್ ಈ ಬಾರಿ 55-60 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು. ಕಳೆದ ಬಾರಿಗಿಂತ ಮತ ಹಂಚಿಕೆಯಲ್ಲೂ ಇಳಿಕೆಯಾಗುವ ಸಾಧ್ಯತೆಯಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೇರಳದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದ್ದು, 1-3 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಶೇ.13ರಷ್ಟು ಮತ ಹಂಚಿಕೆ ಪಡೆಯುವ ಮೂಲಕ ಎನ್‌ಡಿಎ ನಿರ್ಣಾಯಕ ಶಕ್ತಿಯಾಗಲು ಪ್ರಯತ್ನಿಸುತ್ತಿದೆ.
Poll Tracker's #Kerala survey:
— Poll Tracker (@PollTracker) April 6, 2026
Seats and Vote %:
LDF: 55- 60(37.5% - 39.5%)
UDF: 76 - 85(42.8% - 44.2%)
NDA: 1 -3 (13.5% - 14.8%)
OTH : 0 (2-2.5%)
Verdict: Clear edge for the #UDF pic.twitter.com/ouZJ6Yv0Zu
ರಾಜಕೀಯ ಲೆಕ್ಕಾಚಾರಗಳೇನು?
ಈ ಸಮೀಕ್ಷೆ ಹೇಳುವಂತೆ ಕಳೆದ ಹತ್ತು ವರ್ಷಗಳಿಂದ ಸತತವಾಗಿ ಎಲ್‌ಡಿಎಫ್ (LDF) ಆಡಳಿತದಲ್ಲಿದೆ. ಹತ್ತು ವರ್ಷಗಳ ಈ ಆಡಳಿತದ ನಂತರ ಮತದಾರರಲ್ಲಿ ಬದಲಾವಣೆಯ ಬಯಕೆ ಮೂಡಿದೆ, ಇದು ಯುಡಿಎಫ್‌ಗೆ ಲಾಭವಾಗಬಹುದು. ಬಿಜೆಪಿ ಮತ್ತು ಸಿಪಿಐಎಂ ನಡುವೆ ಒಳ ಒಪ್ಪಂದವಿದೆ ಎಂಬ ವದಂತಿಗಳು ಅಲ್ಪಸಂಖ್ಯಾತ ಸಮುದಾಯಗಳಲ್ಲಿ (ಮುಸ್ಲಿಂ ಮತ್ತು ಕ್ರಿಶ್ಚಿಯನ್) ಆತಂಕ ಮೂಡಿಸಿದೆ. ಇದರಿಂದಾಗಿ ಸುಮಾರು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈ ಮತಗಳು ಯುಡಿಎಫ್ ಪರವಾಗಿ ಕ್ರೋಢೀಕರಣಗೊಳ್ಳುವ ಸಾಧ್ಯತೆಯಿದೆ.
ಶಬರಿಮಲೆ ವಿವಾದದ ಮೇಲಿನ ಅಸಮಾಧಾನ, ಆರೋಗ್ಯ ಮೂಲಸೌಕರ್ಯಗಳ ಕೊರತೆ ಮತ್ತು ಇತ್ತೀಚಿನ ಭ್ರಷ್ಟಾಚಾರ ಪ್ರಕರಣಗಳು ಮತದಾರರಲ್ಲಿ ಆಕ್ರೋಶ ಮೂಡಿಸಿವೆ. ಇದನ್ನು ಯುಡಿಎಫ್ ತನ್ನ ಪರವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಬದಲಾವಣೆಯ ಗಾಳಿಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಜಾತಿ, ಸಮುದಾಯ ಮತ್ತು ಭೌಗೋಳಿಕ ಎಲ್ಲೆಗಳನ್ನು ಮೀರಿ ಯುಡಿಎಫ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ. 'ಪೋಲ್ ಟ್ರ್ಯಾಕರ್' ಪ್ರಕಾರ 2026ರಲ್ಲಿ ಕೇರಳದಲ್ಲಿ ಆಡಳಿತ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ ಮತ್ತು ಯುಡಿಎಫ್ ಮೈತ್ರಿಕೂಟವು ಅಧಿಕಾರಕ್ಕೆ ಮರಳುವ ಮುನ್ಸೂಚನೆ ಇದೆ.
-
'By Election: ಕಾಂಗ್ರೆಸ್ನಿಂದ ವೀರಶೈವ ಲಿಂಗಾಯತರನ್ನು ಒಡೆಯುವ ಪ್ರಯತ್ನ'' -
ದಾವಣಗೆರೆ ಟಿಕೆಟ್ ವಿಚಾರವಾಗಿ ನಾನು ಮುನಿಸಿಕೊಂಡಿರಲಿಲ್ಲ: ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ -
ಬಾಗಲಕೋಟೆಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ರೆ ಪಕ್ಷ ಮತ್ತೆ ಗೆಲ್ಲುತ್ತಿತ್ತೇ? ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ತಿರುಗೇಟು -
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
ಕೇರಳದಲ್ಲಿ ಬದಲಾವಣೆಯ ಪರ್ವ ಆರಂಭ: ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ಕೈಹಿಡಿಯಲಿದ್ದಾರೆ-ಡಿ.ಕೆ.ಶಿವಕುಮಾರ್ ಭವಿಷ್ಯ -
Baglkot By Poll:9 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸಾಧನೆ ಶೂನ್ಯ: ಗ್ಯಾರಂಟಿ ಯೋಜನೆಗಳ ಲೆಕ್ಕ ಕೊಟ್ಟ ಸಿದ್ದರಾಮಯ್ಯ -
ಕೇರಳಂನಲ್ಲಿ ಕಾಂಗ್ರೆಸ್ - ಯುಡಿಎಫ್ ಮೈತ್ರಿಕೂಟಕ್ಕೆ ಮೂರನೇ ಎರಡರಷ್ಟು ಬಹುಮತ: ಡಿಸಿಎಂ ಡಿ.ಕೆ. ಶಿವಕುಮಾರ್ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ












Click it and Unblock the Notifications