"ಕಾರ್ತಿ ಬಂಧನವಾಗುತ್ತಿದ್ದಂತೆ ರಾಹುಲ್ ಗಾಂಧಿಗೆ ಅಜ್ಜಿ ನೆನಪಾದರು!"
ಪಾಟ್ನಾ, ಮಾರ್ಚ್ 02: ಇಟಲಿಯಲ್ಲಿರುವ ತಮ್ಮ ಅಜ್ಜಿಯನ್ನು ನೋಡಲು ಹೊರಟ ರಾಹುಲ್ ಗಾಂಧಿಯರ ನಡೆಯನ್ನು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಟೀಕಿಸಿದ್ದಾರೆ. 'ಕಾರ್ತಿ ಚಿದಂಬರಂ ಅವರ ಬಂಧನವಾಗುತ್ತಿದ್ದಂತೆಯೇ ರಾಹುಲ್ ಗಾಂಧಿಯವರಿಗೆ ತಮ್ಮ ಅಜ್ಜಿಯ ನೆನಪಾಗಿದೆ!' ಎಂದು ಅವರು ಕಾಲೆಳೆದಿದ್ದಾರೆ.

ತಾವು ಅಜ್ಜಿಯನ್ನು ಭೇಟಿ ಮಾಡಲು ಹೊರಟಿದ್ದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ನನ್ನ ಅಜ್ಜಿಗೆ 93 ವರ್ಷ. ಅವರದು ಅತ್ಯಂತ ಅಕ್ಕರೆಯ ಆತ್ಮ.
ಈ ಹೋಳಿ ವಾರಾಂತ್ಯಕ್ಕೆ ನಾನು ಅವರಿಗೆ ಅಚ್ಚರಿ ನೀಡಲು ಹೋಗುತ್ತಿದ್ದೇನೆ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
Very nice gesture, Karti’s arrest ने नानी याद दिला दी ! https://t.co/zy3BeFnq9M
— Meenakashi Lekhi (@M_Lekhi) March 1, 2018
ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಇಟಲಿಯಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷ ಸಹ ರಾಹುಲ್ ಗಾಂಧಿ ತಮ್ಮ ಹುಟ್ಟಿದ ದಿನ(ಜೂನ್ 19)ವನ್ನು ಅವರೊಂದಿಗೇ ಆಚರಿಸಿದ್ದರು.












Click it and Unblock the Notifications