ಕರ್ನಾಟಕದ ಫಲಿತಾಂಶ ತೆಲಂಗಾಣದಲ್ಲೂ ಬರಲಿದೆ: ರೇವಂತ್‌ ರೆಡ್ಡಿ ವಿಶ್ವಾಸ

ಹೈದರಾಬಾದ್‌, ಡಿಸೆಂಬರ್‌ 1: ಕರ್ನಾಟಕದ ಚುನಾವಣಾ ಫಲಿತಾಂಶ ತೆಲಂಗಾಣದಲ್ಲೂ ಪುನರಾವರ್ತನೆಯಾಗಲಿದೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಭಾರೀ ಭದ್ರತೆಯ ನಡುವೆ ರಾಜ್ಯದ ವಿವಿಧ ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಕಾಂಗ್ರೆಸ್ ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ಮಾಡುತ್ತದೆ. ನಾವು ತೆಲಂಗಾಣದಲ್ಲೂ ಕರ್ನಾಟಕ ಫಲಿತಾಂಶ ಬರಲಿದೆ. ಭಾರತ್ ಜೋಡೋ ಯಾತ್ರೆಯ ನಂತರ ತೆಲಂಗಾಣದಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾಗಿದೆ ಎಂದು ಹೇಳಿದ್ದಾರೆ.

Karnataka result will come in Telangana too: Revanth Reddy confident

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 85 ಶಾಸಕರಿದ್ದಾರೆ, ಎಲ್ಲರೂ ಸಿಎಂ ಹುದ್ದೆಗೆ ಸಮರ್ಥರು, ಇದು ಪ್ರಕ್ರಿಯೆ ನಡೆಯಬೇಕಿದೆ. 10 ವರ್ಷಗಳ ಕಾಲ ಕೆಸಿಆರ್ ಸರ್ಕಾರದಲ್ಲಿ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಿಎಂ ಕೆ ಚಂದ್ರಶೇಖರ ರಾವ್ ನೇತೃತ್ವದ ಆಡಳಿತಾರೂಢ ಬಿಆರ್‌ಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತೆಲಂಗಾಣದ ಭವಿಷ್ಯವನ್ನು ಮುಂದಕ್ಕೆ ಕೊಂಡೊಯ್ಯುವ ಮೊದಲ ಬಾರಿಗೆ ಮತದಾರರಿಂದ ಅವರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಜನರ ನಿರೀಕ್ಷೆಗಳನ್ನು ಈಡೇರಿಸಲು ಕಾಂಗ್ರೆಸ್ ಎಲ್ಲ ರೀತಿಯ ಪ್ರಯತ್ನ ಮಾಡಲಿದೆ. ಬಿಆರ್‌ಎಸ್, ಬಿಜೆಪಿ ಮತ್ತು ಎಐಎಂಐಎಂ ನಡುವೆ ಚುನಾವಣಾ ಪೂರ್ವ ನಂಟು ಇದೆ. ಅವರು ಒಟ್ಟಾಗಿ ಕಾಂಗ್ರೆಸ್ ಅನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಎಕ್ಸಿಟ್‌ ಪೋಲ್‌ ವಿವರಗಳು ಬಹಿರಂಗಗೊಂಡಿದ್ದು, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ. ಸಮೀಕ್ಷೆ ಪ್ರಕಾರ, ತೆಲಂಗಾಣದಲ್ಲಿ ಮೂರನೇ ಬಾರಿಗೆ ಅಧಿಕಾರ ಪಡೆಯುವ ಕನಸನ್ನು ಕಾಂಗ್ರೆಸ್ ನುಚ್ಚು ನೂರು ಮಾಡಿದೆ. ಏಕೆಂದರೆ ಒಟ್ಟು 119 ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್ ಗೂ(60) ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಹೀಗಾಗಿ ಬಿಆರ್‌ಎಸ್ ಸೋಲುಣಬೇಕಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಇಲ್ಲಿ ಕಾಂಗ್ರೆಸ್‌ಗೆ ಒಟ್ಟು 63-79 ಸ್ಥಾನ ದೊರೆಯಲಿದೆ. ಇಷ್ಟು ಸ್ಥಾನಗಳು ಅಧಿಕಾರ ಹಿಡಿಯಲು ಸಾಕಾಗುತ್ತದೆ. ಆದರೆ ಕಾಂಗ್ರೆಸ್ ಸವಾಲಿನ ಮಧ್ಯೆ ತೀವ್ರ ಪೈಪೋಟಿ ಎದುರಿಸಿದ್ದ ಬಿಆರ್‌ಎಸ್ 31-47 ಸ್ಥಾನ ಪಡೆದುಕೊಳ್ಳಲಿದೆ. ಈ ಮೂಲಕ ಹ್ಯಾಟ್ರಿಕ್ ಭಾರಿಸಲು ಸಜ್ಜಾಗಿದ್ದ ಸಿಎಂ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೆ ಭಾರಿ ಹಿನ್ನಡೆ ಆಗಲಿದೆ ಎಂದು ಭವಿಷ್ಯ ನುಡಿದಿದೆ.

ಕಾಂಗ್ರೆಸ್‌ ಮತ್ತು ಭಾರತ್ ರಾಷ್ಟ್ರೀಯ ಸಮಿತಿ (BRS) ಚುನಾವಣೆ ಸ್ಪರ್ಧೆ ಮಧ್ಯೆ ಬಿಜೆಪಿ ಮತ್ತು ಎಐಎಂಐಎಂ ಮತ್ತಿತರ ಪಕ್ಷಗಳು ಸೊರಗಿವೆ. ಅಂದರೆ ತೆಲಂಗಾಣದಲ್ಲಿ ಈ ಬಾರಿಗೆ ಬಿಜೆಪಿಗೆ ಕೇವಲ 2-4 ಸ್ಥಾನ, ಎಐಎಂಐಎಂ ಪಕ್ಷಕ್ಕೆ 5-7 ಸ್ಥಾನ ಧಕ್ಕಲಿವೆ ಎಂದು ಇಂಡಿಯಾ ಟಿವಿ ಸಿಎನ್‌ಎಸ್ ಯ ಅಂಶಗಳು ಮಾಹಿತಿ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+