Bike-Taxi: ಕರ್ನಾಟಕದಲ್ಲಿ ಬೈಕ್, ಟ್ಯಾಕ್ಸಿ ಸೇವೆ ಭವಿಷ್ಯ ನಿರ್ಧರಿಸಲಿರುವ ಸುಪ್ರೀಂ ಕೋರ್ಟ್; ನವೆಂಬರ್‌ನಲ್ಲಿ ವಿಚಾರಣೆ

ನವದೆಹಲಿ: ಕರ್ನಾಟಕದಲ್ಲಿ ರಾಜ್ಯದಲ್ಲಿ ಬೈಕ್ ಮತ್ತು ಟ್ಯಾಕ್ಸಿ ಕಾರ್ಯಾಚರಣೆಗೆ ಇದ್ದ ನಿಷೇಧವನ್ನು ತೆರವುಗೊಳಿಸಿರುವ ರಾಜ್ಯ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆಯು ಮುಂದಿನ ತಿಂಗಳ ನವೆಂಬರ್ 16 ರಿಂದ ಆರಂಭವಾಗುವ ವಿಚಾರಣೆಗಳ ಪಟ್ಟಿಯಲ್ಲಿರುವಂತೆ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ಕರ್ನಾಟಕ ಹೈಕೋರ್ಟ್ ಬೈಕ್ ಮತ್ತು ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿ ಆದೇಶಿಸಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನವೆಂಬರ್ 16ರ ನಂತರ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್. ಕೋಟಿಸ್ವರ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ನಿರ್ಧರಿಸಿದೆ ಎಂದು 'ಡಿಎಚ್' ವರದಿ ಮಾಡಿದೆ.

Karnataka Bike Taxi Case

ರಾಜ್ಯ ಕಾಂಗ್ರೆಸ್ ಸರ್ಕಾರದ ಪರವಾಗಿ ಇಂದು ಸುಪ್ರೀಂ ಕೋರ್ಟ್‌ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಮೇಲ್ಮನವಿ ಸಂಬಂಧಿಸಿದ ಅಗತ್ಯ ಹೆಚ್ಚುವರಿ ದಾಖಲೆ ಒದಗಿಸಲು ಅವಕಾಶ ನೀಡಲಾಯಿತು. ವಿಶೇಷ ರಜಾ ಅರ್ಜಿ ಸಲ್ಲಿಸಿದ್ದರಿಂದ ಅವರು, ಮೆಹ್ತಾ ಅವರು ಆನ್‌ಲೈನ್ ಮೂಲಕ ಹಾಜರಾಗಿದ್ದರು. 2026ರ ಜನವರಿಯಲ್ಲಿ ಕರ್ನಾಟಕದಲ್ಲಿ ಬೈಕ್, ಟ್ಯಾಕ್ಸಿ ಸೇವೆಗಳ ಮೇಲಿನ ನಿಷೇಧ ತೆರವು ಮಾಡಿ ಹೈಕೋರ್ಟ್‌ನ ಆದೇಶಿಸಿತ್ತು. ಅದನ್ನು ಪ್ರಶ್ನಿಸಲು ಸಕಾ್ರ ಸಾಲಿಸಿಟರ್ ಜನರಲ್ ಅವರನ್ನು ನೇಮಕ ಮಾಡಿದೆ.

ನ್ಯಾಯಪೀಠದ ಮುಂದೆ ಕೇಂದ್ರ ಆದೇಶ ಸಲ್ಲಿಕೆ

ಇಂದಿನ ಅರ್ಜಿ ಕುರಿತ ವಿಚಾರಣೆ ವೇಳೆ 'ಬೈಕ್ ಟ್ಯಾಕ್ಸಿ ರೈಡರ್ಸ್ ಸಂಘ' ದಪರವಾಗಿ ಹಾಜರಾದ ಹಿರಿಯ ವಕೀಲ ಶಶಾಂಕ್ ಗಾರ್ಗ್, ಬೈಕ್ ಟ್ಯಾಕ್ಸಿ ನಿರ್ವಾಹಕರನ್ನು ಬೆಂಬಿಸಲಿ ಕೇಂದ್ರ ಹಲವು ಸುತ್ತೋಲೆ ಹೊರಡಿಸಿದೆ. ಅದೆಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದರು. ಬೈಕ್, ಟ್ಯಾಕ್ಸಿ ಸೇವೆ ನೀಡಲು ಅವಕಾಶ ಇದೆ. ಅದರಂತೆ ಕೇಂದ್ರವು ಸುತ್ತೋಲೆ ಹೊರಡಿಸಿದೆ ಎಂದು ಹೈಕೋರ್ಟ್ ಆದೇಶ ತಾವು ಸ್ವಾಗತಿಸಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

ಇನ್ನೂ ಕರ್ನಾಟಕದ ಸರ್ಕಾರದ ಪರ ವಕೀಲ ಮೆಹ್ತಾ ಅವರಿಗೆ ಈ ವಿಷಯಕ್ಕೆ ಸಂಬಂಧಿಸಿದ ಸರಿಯಾದ ನಿಲುವು ತಿಳಿಸಲು ಅವಕಾಶ ಇದೆ ನ್ಯಾಯಾಲಯದ ಸೂಚಿಸಿತು. "ಸಾಲಿಸಿಟರ್ ಜನರಲ್ ಅವರು ಕೇಂದ್ರ ಸರ್ಕಾರದ ಪರವು ಹಾಜರಾಗುತ್ತಾರೆ. ಅವರು ಸರಿಯಾದ ನಿಲುವನ್ನೇ ತಿಳಿಸುತ್ತಾರೆ. ಆ ನಂಬಿಕೆ ಇದೆ, ಈ ಬಗ್ಗೆ ನಿಮಗೆ ಚಿಂತೆ ಬೇಡ ಎಂದು ಬೈಕ್, ಟ್ಯಾಕ್ಸಿ ಅಸೋಸಿಯೇಷನ್‌ ಅವರಿಗೆ ನ್ಯಾಯಪೀಠ ತಿಳಿಸಿತು.

ವಿಚಾರಣೆಗೆ ಹಾಜರಾಗಿದ್ದ 'ಊಬರ್' (Uber) ಕಂಪನಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಕೇಂದ್ರ ಸರ್ಕಾರದ ದಾಖಲೆಗಳು ಬೈಕ್ ಟ್ಯಾಕ್ಸಿ ನಿರ್ವಾಹಕರ ಪರವಾಗಿವೆ. ಮೆಹ್ತಾ ಅವರು ಕೇವಲ ಕರ್ನಾಟಕ ಸರ್ಕಾರದ ಪರವಾಗಿ ಮಾತ್ರ ವಾದ ಮಂಡಿಸಬಹುದು ಎಂದು ತಿಳಿಸಿದರು. ಮೆಹ್ತಾ ಅವರ ಹಾಜರಾತಿಗೆ ತಮ್ಮದೇನೂ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನೂ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ನೇಮಿಸಿಕೊಂಡಿತ್ತು. ಇದೇ ಕಪಿಲ್ ಸಿಬಲ್ ಅವರು 'ರಾಪಿಡೋ' ಸಂಸ್ಥೆಗೆ ಈ ಹಿಂದೆ ಕಾನೂನು ಸಲಹೆ ನೀಡಿದ್ದರು ಎಂಬುದನ್ನು ಕೋರ್ಟ್ ಗಮನಕ್ಕೆ ತರಲಾಯಿತು.

ಅನುಮತಿ ನೀಡಿದರೆ ಪ್ರತಿಕೂಲ ಪರಿಣಾಮ

ಬೈಕ್‌ಗಳಿಗೆ ಸೇವೆಗೆ ಅನುಮತಿ ನಿಡಿದರೆ, ಪ್ರಯಾಣಿಕರ ಸುರಕ್ಷತೆ, ವಿಮಾ ರಕ್ಷಣೆ ಮತ್ತು ಸುರಕ್ಷತೆ ಇಲ್ಲದಿರುವುದು ಕಳವಳಕಾರಿಯಾಗಿದೆ. ಅಲ್ಲದೇ ಬೈಕ್, ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ್ದನ್ನು ಐದು ಆಟೋ ಮತ್ತು ಟ್ಯಾಕ್ಸಿ ಚಾಲಕ ಸಂಘಗಳು ಪ್ರಶ್ನಿಸಿವೆ. ಹಾಲಿ ಸೇವೆಯಲ್ಲಿರುವ ವಾಹನಗಳಿಗೆ ತೊಂದರೆ ಆಗಲಿದೆ ಎಂದು ಅವರು ಮನವಿ ಮಾಡಿಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+