ಕರ್ನಾಟಕ ಬಂದ್ vs ಕಾವೇರಿ ಅರ್ಜಿ: ಆ.13ರಂದು ರಾಜ್ಯದಲ್ಲಿ ಏನಾಗಲಿದೆ? ಹೆಚ್ಚಿದ ಕುತೂಹಲಕ್ಕೆ ಕಾರಣ..

ಬೆಂಗಳೂರು: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಒಂದು ಕಡೆ ಗುರುವಾರ ಆಗಸ್ಟ್ 13ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ ಮಾಡಲು ಮುಂದಾಗಿವೆ. ಮತ್ತೊಂದೆಡೆ ಅದೇ ದಿವಸವೇ ಕಾವೇರಿ ನೀರು ಸಾಲುತ್ತಿಲ್ಲ, ನಮ್ಮ ಪಾಲಿನ ನೀರು ಬಿಡುಗಡೆಗೆ ಸೂಚನೆ ನೀಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

'ಕರ್ನಾಟಕ ಬಂದ್'ಗೆ ನಿರ್ಧಾರ ಕೈಗೊಂಡ ಸಂದರ್ಭದಲ್ಲಿ ಎರಡು ವಾರಗಳ ಹಿಂದೆ ಅಷ್ಟಾಗಿ ಮಳೆ ಆಗಿರಲಿಲ್ಲ. ಅಲ್ಲಿಂದ ಈವರೆಗೆ ಹಲವೆಡೆ ಉತ್ತಮ ಮಳೆ ದಾಖಲಾಗಿದ್ದು, ಕಾವೇರಿ ಜಲಾನಯನ ಭಾಗದಲ್ಲಿ ನೀರಿನ ಕೊರತೆ ತಕ್ಕಮಟ್ಟಿಗೆ ನೀಗಿಸಿದೆ. ಹೀಗಾಗಿ ಬಂದ್ ಮಾಡುವ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳ ಮಧ್ಯೆ ಒಮ್ಮತ ಮೂಡುತ್ತಿಲ್ಲ ಎನ್ನಲಾಗಿದೆ. ಬಂದ್ ನಡೆಯುತ್ತಾ? ಇಲ್ಲವಾ?. ಇಂದಿನ ಬೆಳವಣಿಗೆ ನೋಡಿದರೆ ರಾಜ್ಯ ಬಂದ್ ಆಗುವುದು ಅನುಮಾನ ಎನ್ನಲಾಗಿದೆ. ವಾಟಾಳ್ ನಾಗರಾಜ್ ಅವರು ರಾಜ್ಯ ಬಂದ್ ಘೋಷಣೆ ಹಿಂಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Karnataka Bandh

ವಾಟಾಳ್ ನಾಗರಾಜ್ ಅವರು ಬಂದ್ ಮಾಡಿಯೇ ತೀರುತ್ತೇವೆ. ಇದು ಕಾವೇರಿ ವಿಚಾರಕ್ಕೆ ಮಾತ್ರವೇ ಅಲ್ಲ, ಮೇಕೆದಾಟು ಯೋಜನೆ ತ್ವರಿತ ಜಾರಿ, ಬಿಡದಿ ಟೌನ್‌ಶಿಪ್ ಯೋಜನೆ ಕೈ ಬಿಡಬೇಕು ಎಂಬುದರ ಕುರಿತು ಎಂದು ತಿಳಿಸಿದ್ದರು. ಮಳೆಯಿಂದಾಗಿ ಅಣೆಕಟ್ಟುಗಳ ಭರ್ತಿಯಾಗುವ ಹಂತಕ್ಕೆ ಬಂದಿದ್ದ ಪರಿಸ್ತಿತಿ ಬದಲಾಗಿದೆ. ಹೀಗಾಗಿ ಕನ್ನಡಪರ ಕಾರ್ಯಕರ್ತರಲ್ಲಿ ಬಂದ್ ಮಾಡಲು ಮೊದಲಿದ್ದ ಉತ್ಸಾಹ ಕಾಣುತ್ತಿಲ್ಲ. ಹೀಗಾಗಿಯೇ ಬಂದ್‌ಗೆ ಎರಡು ದಿನ ಬಾಕಿ ಇದ್ದರೂ ಸಹಿತ ಅಂತಿಮ ದೃಢ ನಿರ್ಧಾರ ಪ್ರಕಟಿಸಲು ಆಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಆಗಸ್ಟ್ 13ರಂದು ತಮಿಳುನಾಡು ಅರ್ಜಿ ವಿಚಾರಣೆ

ಕಾವೇರಿ ನೀರು ನಿರ್ವಹಣಾ ಸಮಿತಿ (CWMC) ಸೂಚನೆ ಬಳಿಕವು ಕರ್ನಾಟಕವು ನಮ್ಮ ಪಾಲಿನ ನೀರು ಬಿಡುತ್ತಿಲ್ಲ. ಕಾವೇರಿ ಹಾಗೂ ಅದರ ಉಪ ನದಿ, ಜಲಾಶಯಗಳಲ್ಲಿ ಅಗತ್ಯದಷ್ಟು ನೀರಿದ್ದರು. ನೀರಿನ ಕೊರತೆ ಸಂದರ್ಭದಲ್ಲಿ ತಮಿಳುನಾಡಿಗೆ ಬಿಡಬೇಕಾದಷ್ಟು ನೀರು ಬಿಡದೇ ತಗಾದೆ ತೆಗೆದಿದೆ. ಉತ್ತಮ ಮಳೆ ಹಿನ್ನೆಲೆ ನೀರಿನ ಸಂಗ್ರಹ ಉತ್ತಮವಾಗಿದ್ದು, ನಮ್ಮ ನೀರು ಬಿಡಲು ಸೂಚಿಸುವಂತೆ ತಮಿಳುನಾಡು ಪರ ವಕೀಲ ಕೋರಿದ್ದರು. ಅರ್ಜಿಯನ್ನು ತ್ವರಿತ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆಯು ನೆನ್ನೆ ಸೋಮವಾರ ಕೋರಿದ್ದರು.

ಆದರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಜಾಯ್ ಮಾಲ್ಯಾ ಬಾಗ್ಚಿ, ವಿ.ಮೋಹನಾ ಅವರಿದ್ದ ನ್ಯಾಯಪೀಠವು ಇಂದು ಅರ್ಜಿ ವಿಚಾರಣೆ ಅಸಾಧ್ಯ, ಗುರುವಾರ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಬಂದ್ ಉದ್ದೇಶಿತ ದಿನವೇ ಕಾವೇರಿ ನೀರಿಗೆ ಸಂಬಂಧಿಸಿದಂತೆ ತಮಿಳುನಾಡಿನ ಅರ್ಜಿ ವಿಚಾರಣೆ ನಡೆಯಲಿದೆ. ಕೋರ್ಟ್ ಆದೇಶವು ಕರ್ನಾಟಕ ಮತ್ತು ತಮಿಳುನಾಡಿನ ಪಾಲಿಗೆ ಏನಾಗಲಿದೆ? ಎಂಬ ಕುತೂಹಲ ಹೆಚ್ಚಾಗಿದೆ.

ಇತ್ತೀಚೆಗೆ ಕಾವೇರಿ ನೀರು ನಿರ್ವಹಣಾ ಸಮಿತಿ (CWMC) ಪ್ರತಿ ದಿನ 3500 ಕ್ಯೂಸೆಕ್ ನೀರನ್ನು ಮುಂದಿನ 15 ದಿನ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿತ್ತು. ಆಗ ಕೆಆರ್ ಎಸ್ ಜಲಾಶಯದಲ್ಲಿ ನೀರಿಲ್ಲದ ಕಾರಣ ಕರ್ನಾಟಕ ನೀರು ಬಿಡದಿರಲು ನಿರ್ಧರಿಸಿತ್ತು. ಇದೇ ವೇಳೆ ನಿರಂತರವಾಗಿ ಬಂದ ಮಳೆಗೆ ಕಬಿನಿ ಭರ್ತಿ ಹಂತಕ್ಕೆ ಬರುತ್ತಿದ್ದಂತೆ ಹೆಚ್ಚುವರಿ ನೀರನ್ನು ನೆರೆ ರಾಜ್ಯಕ್ಕೆ ಬಿಡಲಾಯಿತು. ಮುಂದೆ ಮಳೆ ಕಡಿಮೆ ಆದರೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ನೀರು ಸಂಗ್ರಹಿಸಿಟ್ಟುಕೊಳ್ಳುವ ಅನಿವಾರ್ಯತೆ ಕರ್ನಾಟಕಕ್ಕೆ ಇದೆ. ಹೀಗಿದ್ದರೂ ತಮ್ಮ ಪಾಲಿನ ಎಲ್ಲ ನೀರು ಬೇಕು ಎಂದು ತಮಿಳನಾಡು ಖ್ಯಾತೆ ತೆಗೆದು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಮೇಕೆದಾಟುಗೆ ಒಪ್ಪಿದರೆ 2 ರಾಜ್ಯಗಳಿಗೂ ನೀರು

ಕರ್ನಾಟಕ ಅನೇಕ ಬಾರಿ ಮೇಕೆದಾಟು ಯೋಜನೆಯಿಂದ ಎರಡು ರಾಜ್ಯಗಳ ನೀರಿಗೆ ಅನುಕೂಲವಾಗಲಿದೆ ಎಂದು ಹೇಳಿದರೂ ಸಹಿತ ತಮಿಳುನಾಡು ಒಪ್ಪದೇ ಪದೇ ಪದೇ ಖ್ಯಾತೆ ತೆಯುತ್ತಿದೆ. ನೀರು ಬೇಕು ಎನ್ನುವ ತಮಿಳನಾಡು ಯೋಜನೆಗೆ ಪೂರಕ ನಿರ್ಧಾರ ಕೈಗೊಂಡರೆ ಎರಡು ರಾಜ್ಯಗಳ ನೀರಿನ ಭವಿಷ್ಯ ಸುಭೀಕ್ಷವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+