ಕರ್ನಾಟಕ - ಆಂಧ್ರಪ್ರದೇಶದ ಬಗ್ಗೆ ಮಹತ್ವದ ಸಂದೇಶ ಹಂಚಿಕೊಂಡ ನಟ, ಡಿಸಿಎಂ ಪವನ್ ಕಲ್ಯಾಣ್
ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರು ಕರ್ನಾಟಕ ಸರ್ಕಾರದ ಬಗ್ಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೆ, ರಾಜ್ಯ ಅತಿಥಿ ಗೌರವ ಮತ್ತು ನನ್ನ ಭೇಟಿಯ ಸಮಯದಲ್ಲಿ ನೀಡಿದ ಅಸಾಧಾರಣ ಆತಿಥ್ಯಕ್ಕಾಗಿ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಆಂಧ್ರಪ್ರದೇಶ ಮತ್ತು ಕರ್ನಾಟಕವು ದೀರ್ಘಕಾಲದ ಸಾಂಸ್ಕೃತಿಕ ಬಾಂಧವ್ಯ, ನಾಗರಿಕತೆಯ ಪರಂಪರೆ ಮತ್ತು ಭೌಗೋಳಿಕ ಮತ್ತು ರಾಜಕೀಯ ಗಡಿಗಳನ್ನು ಮೀರಿದ ಪರಸ್ಪರ ಗೌರವವನ್ನು ಹೊಂದಿವೆ. ಈ ಸೌಹಾರ್ದಯುತ ನಡೆ ನಮ್ಮ ಎರಡು ರಾಜ್ಯಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪವನ್ ಕಲ್ಯಾಣ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಉತ್ತಮ ಬಾಂಧವ್ಯವಿದ್ದು ಎರಡೂ ರಾಜ್ಯಗಳ ಗಡಿ ಮೀರಿದ ಪರಸ್ಪರ ಗೌರವವನ್ನು ಹೊಂದಿವೆ ಎಂದು ಹೇಳಿದ್ದು, ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ಒಳ್ಳೆಯ ಸಂದೇಶ. ಕರ್ನಾಟಕದ ಆತಿಥ್ಯ ಮತ್ತು ನಮ್ಮ ನಾಗರಿಕತೆಯ ಹಂಚಿಕೆಯ ಸಂಬಂಧಗಳ ಬಗ್ಗೆ ನಿಮ್ಮ ಸ್ವೀಕೃತಿ ನಿಜವಾದ ರಾಜನೀತಿಯನ್ನು ಪ್ರತಿಬಿಂಬಿಸುತ್ತದೆ. ಆಂಧ್ರಪ್ರದೇಶ ಮತ್ತು ಕರ್ನಾಟಕ ಯಾವಾಗಲೂ ಸಂಸ್ಕೃತಿ, ಭಕ್ತಿ ಮತ್ತು ಪರಸ್ಪರ ಗೌರವದ ಮೂಲಕ ಸಂಪರ್ಕ ಹೊಂದಿವೆ - ಈ ರೀತಿಯ ಸನ್ನೆಗಳು ಆ ಬಂಧವನ್ನು ಇನ್ನಷ್ಟು ಗಾಢಗೊಳಿಸುತ್ತವೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಮತ್ತೊಬ್ಬರು ಹಾಗಾದರೆ ಕನ್ನಡ ಚಿತ್ರಗಳಿಗೆ ಥಿಯೇಟರ್‌ಗಳನ್ನು ಏಕೆ ನೀಡಬಾರದು, ಕರ್ನಾಟಕದ ಮಾವಿನ ಬೆಳೆಗಾರರಿಗೆ ಏಕೆ ಅವಮಾನ ಹಾಗೂ ನೀವು ಎಲ್ಲವನ್ನೂ ನಮ್ಮ ಮೇಲೆ ಹೇರುತ್ತೀರಿ ಆದರೆ ಅದನ್ನು ಮತ್ತೆ ತೆಗೆದುಕೊಳ್ಳುವುದಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ರಘು ಎನ್ನುವವರು ಆನೆ ತಗೊಂಡ್ ಹೋಗೋವಾಗಲು ಹೀಗೆ ಹೇಳಿ ಆಮೇಲೆ ಕರ್ನಾಟಕದ ಮಾವಿನ ಹಣ್ಣನ್ನ ಆಂಧ್ರನಲ್ಲಿ ಮಾರಬಾರದು ಅಂತ ಬ್ಯಾನ್ ಮಾಡಿದ್ದ ಕಥೆ ನಾವಿನ್ನೂ ಮರೆತಿಲ್ಲ!🤷🏻♂️ ಎಂದು ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.











Click it and Unblock the Notifications