ಅಣ್ಣಾಮಲೈ ಫುಲ್ ರೆಬೆಲ್, ಬಿಜೆಪಿ ಹೈಕಮಾಂಡ್ ಕೊಟ್ಟಿದ್ದ ಹುದ್ದೆಗೆ ಗುಡ್‌ಬೈ... K Annamalai
ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿಯ ಎಲೆಕ್ಷನ್ ಗೆದ್ದೇ ಗೆಲ್ಲಬೇಕು ಎಂಬ ಗುರಿಯೊಂದಿಗೆ ಬಿಜೆಪಿ ನಾಯಕರು ಮುಂದೆ ನುಗ್ಗಿದ್ದಾರೆ. ಈ ಪೈಕಿ ಘಟಾನುಘಟಿ ನಾಯಕರೇ ತಮಿಳುನಾಡು ರಾಜ್ಯದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿ ಮತಬೇಟೆ ಶುರು ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಶಕ್ತಿಶಾಲಿ ರಾಜ್ಯದಲ್ಲಿ ಅಧಿಕಾರ ಹಿಡಿದೇ ತೀರಬೇಕು ಎಂಬುದು ಬಿಜೆಪಿ ನಾಯಕರ ಶಪಥ. ಹೀಗಿದ್ದಾಗ ಪ್ರಬಲವಾಗಿರುವ ನಾಯಕನ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಎಲ್ಲಾ ರೀತಿ ತಯಾರಿ ನಡೆದಿತ್ತು. ಆದರೆ ಈಗ ಕೊನೆಯ ಹಂತದಲ್ಲಿ ಅಣ್ಣಾಮಲೈ ಫುಲ್ ರೆಬೆಲ್ ಆಗಿದ್ದಾರೆ.
ಅಣ್ಣಾಮಲೈ ಐಪಿಎಸ್ ಅಧಿಕಾರಿಯಾಗಿ, ಕರ್ನಾಟಕದಲ್ಲಿ ಸಿಂಗಂ ಎಂಬ ಬಿರುದು ಕೂಡ ಪಡೆದು ದೊಡ್ಡ ಹೆಸರು ಮಾಡಿದ್ದರು. ಆ ನಂತರ ದಿಢೀರ್ ರಾಜಕೀಯಕ್ಕೆ ಹೊರಟ ಕೆ. ಅಣ್ಣಾಮಲೈ, ಬಿಜೆಪಿ ಪಕ್ಷ ಸೇರಿ ತಮಿಳುನಾಡು ರಾಜ್ಯದಲ್ಲಿ ಪಕ್ಷದ ಉನ್ನತ ಹುದ್ದೆಗಳನ್ನು ಕೂಡ ಅಲಂಕರಿಸಿ ಸದ್ದು ಮಾಡಿದ್ದರು. ತಮಿಳುನಾಡು ಬಿಜೆಪಿ ಘಟಕದಲ್ಲಿ ಅಣ್ಣಾಮಲೈ ಅವರಷ್ಟು ಪ್ರಭಾವಶಾಲಿ ನಾಯಕ ಇನ್ನೊಬ್ಬರು ಇಲ್ಲ ಎನ್ನುವಷ್ಟು ಹವಾ ಇಟ್ಟಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅತ್ತ ಬಿಜೆಪಿ ಹೈಕಮಾಂಡ್ ನಾಯಕರ ನಿರ್ಧಾರಗಳು ಹಾಗೂ ತಮಿಳುನಾಡು ಬಿಜೆಪಿ ಘಟಕದಲ್ಲಿರುವ ತಿಕ್ಕಾಟಗಳು ಅಣ್ಣಾಮಲೈ ಅವರ ಹಾದಿಯನ್ನೇ ಬದಲಾಯಿಸಿದಂತೆ ಕಾಣುತ್ತಿದೆ.

ತಮಿಳುನಾಡು ರಾಜಕೀಯದಲ್ಲಿ ಸಂಚಲನ
ಭಾರತೀಯ ರಾಜಕೀಯ ಇತಿಹಾಸದಲ್ಲಿ ಮತ್ತೊಮ್ಮೆ ಸದ್ದು & ಗದ್ದಲ ಮಾಡಲು 2026 ಬಂದಿದೆ, ಏಕೆಂದರೆ ನಾವು ಈಗ ಇರುವ 2026ರಲ್ಲೇ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ನಡೆಯಲಿದೆ. 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ನಡೆಸಿ, ಪ್ರಜಾಪ್ರಭುತ್ವದ ಕರ್ತವ್ಯ ಪೂರ್ಣಗೊಳಿಸಲು ಚುನಾವಣಾ ಆಯೋಗ ಸಜ್ಜಾಗಿದೆ. ಹೀಗಿದ್ದಾಗಲೇ ತಮಿಳುನಾಡು ರಾಜ್ಯ ಕೂಡ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಒಂದು ಕಡೆ ಬಿಜೆಪಿ ನಾಯಕರು ಈ ಬಾರಿಯ ತಮಿಳುನಾಡು ಚುನಾವಣೆಯಲ್ಲಿ ಗೆಲುವು ಪಡೆಯುವ ಹುಮ್ಮಸ್ಸು ಹೊಂದಿರುವಾಗಲೇ, ಅಣ್ಣಾಮಲೈ ಅವರ ದಿಢೀರ್ ಮುನಿಸು ಸಂಚಲನ ಸೃಷ್ಟಿ ಮಾಡಿದೆ.
6 ಕ್ಷೇತ್ರಗಳ ಉಸ್ತುವಾರಿಗೆ ಗುಡ್‌ಬೈ
ಅಂದಹಾಗೆ 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೊಯಮತ್ತೂರಿನ ಸಿಂಗನಲ್ಲೂರು ಸೇರಿ ಒಟ್ಟು 6 ಕ್ಷೇತ್ರಗಳಲ್ಲಿ ಕೆ. ಅಣ್ಣಾಮಲೈ ಅವರಿಗೆ ಉಸ್ತುವಾರಿ ನೀಡಲಾಗಿತ್ತು. ಆದರೆ ದಿಢೀರ್ ತಮಗೆ ಬಿಜೆಪಿ ಹೈಕಮಾಂಡ್ ನೀಡಿದ್ದ 6 ಕ್ಷೇತ್ರಗಳ ಚುನಾವಣೆ ಪ್ರವಾಸದ ಉಸ್ತುವಾರಿ ಹುದ್ದೆಯಿಂದ ಕೆಳಗಿಳಿಯಲು, ಕೆ. ಅಣ್ಣಾಮಲೈ ನಿರ್ಧರಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ರೆಬೆಲ್ ಆಗಿದ್ದಾರೆ. ಕೊಯಮತ್ತೂರಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕೆ. ಅಣ್ಣಾಮಲೈ, ತಂದೆ ಅನಾರೋಗ್ಯದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವೆ ಎಂದಿದ್ದಾರೆ.
ಆದರೆ, ಇದೀಗ ರಾಜಕೀಯ ವಲಯದಲ್ಲಿ ಬೇರೆಯದ್ದೇ ಚರ್ಚೆ ಶುರುವಾಗಿದೆ. ಕೆ. ಅಣ್ಣಾಮಲೈ ಅವರು ವರಿಷ್ಠರ ನಿರ್ಧಾರಕ್ಕೆ ತಿರುಗಿಬಿದ್ದಿದ್ದಾರೆ ಎಂಬ ಚರ್ಚೆಗಳ ನಡುವೆ, ಈ ಭಾಗದಲ್ಲಿ ಅವರು ಸ್ಪರ್ಧೆ ಮಾಡುವ ಉದ್ದೇಶದಿಂದ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ. ಇದರ ಜೊತೆ ಇನ್ನೂ ಒಂದು ವಿಚಾರ ಪ್ರಸ್ತಾಪವಾಗಿದ್ದು, ಆಂತರಿಕ ಹೊಂದಾಣಿಕೆ ಕೊರತೆ ಕಾಣುತ್ತಿದೆ ಎನ್ನಲಾಗಿದೆ. ಎಲೆಕ್ಷನ್ ಆರಂಭಕ್ಕೆ ಮೊದಲೇ ಇದೀಗ ಗೊಂದಲದ ವಾತಾವರಣ ತಮಿಳುನಾಡು ಬಿಜೆಪಿ ಘಟಕದಲ್ಲಿ ಸೃಷ್ಟಿಯಾಗಿದೆ. ಇಡೀ ದೇಶದಲ್ಲಿ ಹವಾ ಎಬ್ಬಿಸಿರುವ ಬಿಜೆಪಿ ನಾಯಕರಿಗೆ ಇದೀಗ ತಮಿಳುನಾಡು ಗೆಲ್ಲುವ ವಿಚಾರ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.
ಬಿಜೆಪಿ ನಾಯಕರಿಗೆ ಸಿಕ್ಕಾಪಟ್ಟೆ ಟೆನ್ಷನ್
ತಮಿಳುನಾಡು ಬಿಜೆಪಿ ಪಕ್ಷದಲ್ಲಿ ದೊಡ್ಡ ನಾಯಕರಾಗಿ ಗುರುತಿಸಿಕೊಂಡಿರುವ ಕೆ. ಅಣ್ಣಾಮಲೈ ಅವರನ್ನ ಸಿಂಗನಲ್ಲೂರು, ಮಧುರೈ ದಕ್ಷಿಣ, ವಿರುಗಂಪಕ್ಕಂ, ಕಾರೈಕುಡಿ, ಶ್ರೀವೈಕುಂಡಂ ಸೇರಿ ಪದ್ಮನಾಭಪುರಂ ಭಾಗದಲ್ಲಿ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಇದೀಗ ಅವರು ದಿಢೀರ್ ಈ ಹುದ್ದೆಯಿಂದ ಕೆಳಗೆ ಇಳಿಯುತ್ತಿರುವ ನಿರ್ಧಾರ ಪ್ರಕಟಿಸಿರುವುದು ಹೊಸ ತಲ್ಲಣವನ್ನೇ ಎಬ್ಬಿಸಿದೆ. ಮತ್ತೊಂದು ಕಡೆ ಬಿಜೆಪಿ ನಾಯಕರಿಗೆ ಕೂಡ ಸಿಕ್ಕಾಪಟ್ಟೆ ಟೆನ್ಷನ್ ಕೊಡುತ್ತಿದೆ. ಆದರೆ ಡಿಎಂಕೆ ಸೇರಿ ಬಿಜೆಪಿ ವಿರೋಧಿ ಪಕ್ಷಗಳಿಗೆ ಇದು ಪ್ಲಸ್ ಪಾಯಿಂಟ್ ಆಗುವ ನಿರೀಕ್ಷೆಗಳು ಇದ್ದು, ಆದಷ್ಟು ಬೇಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿ ನಾಯಕರು ಪ್ಲಾನ್ ಮಾಡುವ ನಿರೀಕ್ಷೆ ಇದೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ












Click it and Unblock the Notifications