Get Updates
Get notified of breaking news, exclusive insights, and must-see stories!

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಮಾ.3ರ ತನಕ ಸಲ್ಮಾನ್ ಗೆ ರಿಲೀಫ್

ಜೋಧ್ ಪುರ್, ಫೆ.25: ಹಿಂದಿ ಚಿತ್ರರಂಗದ ಜನಪ್ರಿಯ ನಟ ಸಲ್ಮಾನ್ ಖಾನ್ ಆರೋಪಿಯಾಗಿರುವ ಕೃಷ್ಣಮೃಗ ಬೇಟೆ ಪ್ರಕರಣ ತೀರ್ಪು ಮಾ.3ಕ್ಕೆ ಹೊರಬೀಳಲಿದೆ. ಸುಮಾರು 16 ವರ್ಷಗಳ ನಂತರ ಪ್ರಕರಣದ ತೀರ್ಪು ಹೊರ ಬರಬೇಕಿದ್ದು, ಈ ಕಾಯ್ದಿಟ್ಟ ತೀರ್ಪಿನಲ್ಲಿ ಏನಿದೆಯೋ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಫೆ.25ಕ್ಕೆ ಅಂತಿಮ ತೀರ್ಪು ನೀಡುವುದಾಗಿ ಜೋಧಪುರ ನ್ಯಾಯಾಲಯದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಹೇಳಿದ್ದರು, ಆದರೆ, ಅಕ್ರಮ ಶಸ್ತ್ರಾಸ್ತ್ರ ಬಳಸಿಕೊಂಡು ಕೃಷ್ಣಮೃಗ, ಚೀಂಕರಗಳನ್ನು ಹತ್ಯೆ ಮಾಡಿದ ಆರೋಪ ಹೊತ್ತಿರುವ 49ವರ್ಷದ ಬಹುಬೇಡಿಕೆಯ ನಟ ಸಲ್ಮಾನ್ ಖಾನ್ ಅವರಿಗೆ ಮಾ.3ರ ತನಕ ರಿಲೀಫ್ ಸಿಕ್ಕಿದೆ. [ಸಲ್ಮಾನ್ ಗೆ ಶುರುವಾಯ್ತು ತೀರ್ಪಿನ ಭೀತಿ]

Jodhpur : Arms Case Against Actor Salman Khan Verdict Put Off Till March 3

ಈ ನಡುವೆ ಶೂಟಿಂಗ್ ಗಾಗಿ ಬ್ರಿಟನ್ ಗೆ ತೆರಳಲು ಅನುಮತಿ ನೀಡುವಂತೆ ಸಲ್ಮಾನ್ ಕೋರಿದ್ದು, ಕೋರ್ಟ್ ಅನುಮತಿ ನಿರಾಕರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಭಜರಂಗಿ ಭಾಯ್ ಜಾನ್, ರಾಮ್ ರತನ ಧನ್ ಪಾವೋ ಚಿತ್ರಗಳಲ್ಲಿ ಸಲ್ಮಾನ್ ನಿರತರಾಗಿದ್ದಾರೆ. [ಸಲ್ಮಾನ್ 'ಫಾರೀನ್ ಟೂರಿಗೆ ಕಂಟಕ]

ಅಕ್ರಮ ಶಸ್ತ್ರಾಸ್ತ್ರ ಬಳಕೆ: ಕೃಷ್ಣಮೃಗ ಬೇಟೆಯಾಡಲು ಸಲ್ಮಾನ್ ಖಾನ್ ಹಾಗೂ ಇತರೆ ಆರೋಪಿಗಳು ಬಳಸಿದ ಶಸ್ತ್ರಾಸ್ತ್ರಗಳು ಲೈಸನ್ ಹೊಂದಿಲ್ಲ ಎಂದು ಅರಣ್ಯ ಇಲಾಖೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರೆ, ಸಲ್ಮಾನ್ ಬಳಿ ಇದ್ದ ಗನ್ ಲೈಸನ್ ನವೀಕರಣಕ್ಕೆ ಅರ್ಜಿ ಹಾಕಲಾಗಿದೆ. ಲೈಸನ್ಸ್ ರದ್ದಾಗಿಲ್ಲ ಹಾಗೂ ಅವಧಿಯೂ ಮುಗಿದಿಲ್ಲ ಹೀಗಾಗಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದು ಸಲ್ಮಾನ್ ಪರ ವಕೀಲರು ವಾದಿಸಿದ್ದಾರೆ. [ಗುದ್ದೋಡು ಪ್ರಕರಣ: ಸಲ್ಮಾನ್ ಇನ್ ಟ್ರಬಲ್]

1998ರ ಅಕ್ಟೋಬರ್ 1-2ರಂದು ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು. ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಮುಕ್ತಾಯವಾಗಿದೆ. ಜಸ್ಟೀಸ್ ಎಸ್ ಜೆ ಮುಖ್ಯೋಪಾಧ್ಯಾಯ್ ಹಾಗೂ ಎಕೆ ಗೋಯಲ್ ಅವರಿದ್ದ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿತ್ತು. ಬ್ರಿಟನ್ ವೀಸಾ ಪಡೆಯಲು ಆರೋಪಿಗೆ ಅನುಕೂಲವಾಗಲೆಂದು ಶಿಕ್ಷೆ ಬಗ್ಗೆ ಆದೇಶವನ್ನು ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+