ಅಫ್ಜಲ್ ಗುರು ಪರ ಘೋಷಣೆ ಕೂಗಿದವರ ಬಂಧನ
ನವದೆಹಲಿ, ಫೆಬ್ರವರಿ, 12: ನವದೆಹಲಿಯಲ್ಲಿ ಪ್ರತಿಭಟನೆಗಳದ್ದೇ ಕಾರು ಬಾರು. ಸಂಸತ್ ದಾಳಿ ರೂವಾರಿ, ನೇಣಿಗೇರಿದ ಉಗ್ರ ಅಫ್ಜಲ್ ಗುರು ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಜವಾಹರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ನಾ ಕುಮಾರ್ ನನ್ನು ಬಂಧಿಸಲಾಗಿದೆ
ಈ ಕ್ರಮವವನ್ನು ವಿರೋಧಿಸಿ ಎಬಿವಿಪಿ ಮತ್ತು ಬಿಜೆಪಿ ಪ್ರತಿಭಟನೆ ನಡೆಸಿದ್ದವು. ಅಲ್ಲದೇ ಉಗ್ರಗಾಮಿ ಪರ ಘೋಷಣೆ ಕೂಗಿದವರ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಬಿಜೆಪಿ ಸಂಸದ ಮಹೇಶ್ ಗಿರಿ ಅವರು ಪ್ರತ್ಯೇಕ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ನಾ ಕುಮಾರ್ ನನ್ನು ಬಂಧಿಸಿದ್ದಾರೆ.[ನವದೆಹಲಿಯ ಚಳಿ ದೂರ ಮಾಡಿದ ಪ್ರತಿಭಟನೆ ಕಾವು]

ಸಂಘಟನೆಯ ಅಧ್ಯಕ್ಷ ಕನಯ್ನಾ ಕುಮಾರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆದರೆ ಭಾರತ ವಿರೋಧಿ ಪ್ರತಿಭಟನೆ ಆಯೋಜಿಸಿದ್ದಕ್ಕೆ ಜೆಎನ್ ಯು ವಿದ್ಯಾರ್ಥಿ ಸಂಘಟನೆ ಜವಾಬ್ದಾರನಲ್ಲ ಎಂದು ಕನಯ್ನಾ ಕುಮಾರ್ ಹೇಳಿದ್ದಾರೆ. ಒಟ್ಟಿನಲ್ಲಿ ನವದೆಹಲಿ ಶುಕ್ರವಾರ ಪ್ರತಿಭನೆ ಸೇರಿದಂತೆ ಹೈ ಡ್ರಾಮಾಕ್ಕೆ ಸಾಕ್ಷಿಯಾಯಿತು.[ಅಫ್ಜಲ್ ಗುರುಗೆ ಗಲ್ಲು]
ನಡೆದಿದ್ದೇನು?
ಸಂಸತ್ ಮೇಲೆ ದಾಳಿ ನಡೆಸಿದ ಆರೋಪಿ ಅಫ್ಜಲ್ ಗುರು ಗಲ್ಲಿಗೇರಿಸಿದ್ದನ್ನು ಖಂಡಿಸಿ, ವಿದ್ಯಾರ್ಥಿಗಳ ಗುಂಪೊಂದು ಫೆಬ್ರವರಿ 9ರಂದು ವಿವಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಇತ್ತ ಇಡೀ ಭಾರತ ಯೋಧರ ಸಾವಿಗೆ ಕಂಬನಿ ಮಿಡಿಯುತ್ತಿದ್ದರೆ ದೇಶದ ರಾಜಧಾನಿಯಲ್ಲೇ ಇಂಥ ಘಟನಾವಳಿಗಳು ನಡೆಯುತ್ತಿರುವುದು ನಿಜಕ್ಕೂ ಖೇದಕರ.













Click it and Unblock the Notifications