ಜಾರ್ಖಂಡ್ ಕಲ್ಲಿದ್ದಲು ಗಣಿ ದುರಂತ : ಸತ್ತವರ ಸಂಖ್ಯೆ 7ಕ್ಕೇರಿಕೆ

Posted By:
Subscribe to Oneindia Kannada

ಗೊಡ್ಡ, ಡಿಸೆಂಬರ್ 30 : ಖಾಸಗಿ ಕಲ್ಲಿದ್ದಲು ಗಣಿಯಲ್ಲಿ ಮಣ್ಣು ಕುಸಿದು 50ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡ ಭಾರೀ ದುರ್ಘಟನೆ ಶುಕ್ರವಾರ ಸಂಭವಿಸಿದ್ದು, ಸತ್ತವರ ಸಂಖ್ಯೆ ಏಳಕ್ಕೇರಿದೆ.

ಖಾಸಗಿ ಕಲ್ಲಿದ್ದಲು ಗಣಿಯಲ್ಲಿ ಕೆಲವು ಯಂತ್ರಗಳ ಜತೆಗೆ ನಲವತ್ತರಿಂದ ಐವತ್ತು ಕಾರ್ಮಿಕರು ಸಿಕ್ಕಿಕೊಂಡ ಘಟನೆ ಜಾರ್ಖಂಡ್ ರಾಜ್ಯದ ಗೊಡ್ಡ ಜಿಲ್ಲೆಯ ಲಾಲ್ ಮಟಿಯದಲ್ಲಿ ನಡೆದಿದೆ.

ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ಗೆ ಸೇರಿದ ಈ ಗಣಿಯಲ್ಲಿ ಮಣ್ಣು ಕುಸಿದು, ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಕರ್ತವ್ಯದಲ್ಲಿದ್ದ ಸಿಐಎಸ್ ಎಫ್ ಸೆಂಟ್ರಿ ಸುರಕ್ಷಿತವಾಗಿದ್ದಾರೆ. ರಾತ್ರಿ ಮಂಜಿನ ಪ್ರಮಾಣ ಹೆಚ್ಚಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಲು ಸ್ವಲ್ಪ ತಡವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಸ್ಥಳೀಯರ ಪ್ರಕಾರ ಗಣಿಯ ಪ್ರವೇಶದಲ್ಲೇ ಮಣ್ಣು ಕುಸಿದು, ಪ್ರವೇಶಕ್ಕೆ ಅಡ್ಡಿಯಾಗಿದೆ.

Jharkhand Mine Collapse: 40-50 Workers Trapped

ನೆಲಮಟ್ಟದಿಂದ ಇನ್ನೂರು ಅಡಿ ಕೆಳಗೆ ಗಣಿ ಚಟುವಟಿಕೆ ನಡೆಯುತ್ತಿತ್ತು. ಇದೇ ವೇಳೆ ಈ ಪ್ರದೇಶದ ವಿದ್ಯುತ್ ಸರಬರಾಜು ವ್ಯವಸ್ಥೆ ಕೂಡ ಕೈಕೊಟ್ಟಿತ್ತು. "ಒಳಗೆ ಎಷ್ಟು ಜನರು ಸಿಕ್ಕಿಹಾಕಿಕೊಂಡಿದ್ದಾರೆ, ಎಷ್ಟು ವಾಹನಗಳು ಸಿಲುಕಿವೆ ಎಂಬ ಬಗ್ಗೆ ನಿಖರ ಸಂಖ್ಯೆ ತಿಳಿದಿಲ್ಲ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಧನ್ ಬಾದ್ ಜಿಲ್ಲೆಯ ಪುಟ್ಕಿ ಬಲಿಹರಿ ಪ್ರದೇಶದಲ್ಲಿ ಗುರುವಾರ ಚಾವಣೆ ಕುಸಿದು ಇಬ್ಬರಿಗೆ ಗಂಭೀರ ಗಾಯಗಳಾಗಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 40-50 workers along with some machineries belonging to a private coal mining company Eastern Coalfields Limited (ECL) are believed to be trapped after a heap of mud caved-in at the entry point of Latmatia mines in Godda district of Jharkhand.
Please Wait while comments are loading...