Jharkhand Election Results:: ಜೆಜೆಎಂ & ಬಿಜೆಪಿಯಿಂದ ಯಾರೆಲ್ಲಾ ಮುನ್ನಡೆ ಸಾಧಿಸಿದ್ದಾರೆ?

Jharkhand Election results 2024: ಜಾರ್ಖಂಡ್‌ನ 81 ವಿಧಾನಸಭೆ ಸ್ಥಾನಸಗಳಿಗೆ ನವೆಂಬರ್ 13 ಹಾಗೂ 20ರಂದು ಮತದಾನ ನಡೆದಿತ್ತು. ಇಂದು (ನವೆಂಬರ್ 23) ಮತ ಎಣಿಕೆ ನಡೆಯುತ್ತಿದೆ. ಚುನಾವಣೆ ಆಯೋಗದ ವೆಬ್‌ಸೈಟ್‌ನ ಪ್ರಕಾರ, ರಾಜ್ಯದಲ್ಲಿ ಯಾವೆಲ್ಲ ಪಕ್ಷಗಳು ಮುನ್ನಡೆಯಲ್ಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಚುನಾವಣೆ ಆಯೋಗದ ವೆಬ್‌ಸೈಟ್‌ನ ಪ್ರಕಾರ, ರಾಜ್ಯದಲ್ಲಿ ಜೆಎಂಎಂ ನೇತೃತ್ವದ INDIA ಬ್ಲಾಕ್ 50 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಎನ್‌ಡಿಎ 30 ಸ್ಥಾನಗಳಲ್ಲಿ ಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Jharkhand Election Results Full List of Those who leading parties

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಇನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ ಪ್ರಕಾರ ಇಲ್ಲಿವರೆಗೆ, ಇಂಡಿಯಾ ಮೈತ್ರಿಕೂಟ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜೆಎಂಎಂ 30, ಕಾಂಗ್ರೆಸ್ 14 ಮತ್ತು ಪಕ್ಷೇತರ 6 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಬರ್ಹೈತ್ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಯವಾಗಿದೆ. ಮುಖ್ಯಮಂತ್ರಿ ಹಾಗೂ ಜೆಜೆಎಂದ ಅಭ್ಯರ್ಥಿ ಹೇಮಂತ್ ಸೊರೆನ್ ಅವರು ಬಿಜೆಪಿಯ ಗಮ್ಲಿಯೆಲ್, ಹೆಂಬ್ರೋಮ್ ಅವರಿಗಿಂಯ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುವ ಭರವಸೆಯಲ್ಲಿದ್ದಾರೆ.

ಇನ್ನು ಜೆಎಂಎಂ ಶಾಸಕಿ ಮತ್ತು ಹೇಮಂತ್ ಸೊರೇನ್‌ ಪತ್ನಿ ಕಲ್ಪನಾ ಅವರು ಗಂಡೇ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರು ನಾಲ್ಕನೇ ಸುತ್ತಿನ ಮತ ಎಣಿಕೆ ನಂತರ ಬಿಜೆಪಿಯ ಮುನಿಯಾ ದೇವಿ ವಿರುದ್ಧ ಹಿನ್ನಡೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಎರಡನೇ ಸುತ್ತಿನ ಮತ ಎಣಿಕೆ ಮುಗಿದ ಬಳಿಕ ಬಿಜೆಪಿ ಅಭ್ಯರ್ಥಿ ಬಾಬುಲಾಲ್ ಮರಾಂಡಿ ಅವರು ಸಿಪಿಐಎಂಎಲ್‌ನ ರಾಜ್‌ಕುಮಾರ್ ಯಾದವ್ ಅವರಿಗಿಂತ ಮುನ್ನಡೆಯಲ್ಲಿದ್ದಾರೆ. ಸೆರೈಕೆಲಾದಲ್ಲಿ ಮಾಜಿ ಸಿಎಂ ಮತ್ತು ಬಿಜೆಪಿ ಅಭ್ಯರ್ಥಿ ಚಂಪೈ ಸೊರೇನ್ ಮೂರನೇ ಸುತ್ತಿನ ನಂತರ ಜೆಎಂಎಂನ ಗಣೇಶ್ ಮಹಲಿ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಘಟ್ಸಿಲಾ ಕ್ಷೇತ್ರದಿಂದ ಸ್ಪರ್ಧಿಸಿರುವ ಸಿಎಂ ಚಂಪೈ ಸೊರೆನ್ ಅವರ ಪುತ್ರ ಹಾಗೂ ಬಿಜೆಪಿ ಅಭ್ಯರ್ಥಿ ಬಾಬುಲಾಲ್ ಸೊರೇನ್ ಹಿನ್ನಡೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ರಘುಬರ್ ದಾಸ್ ಅವರ ಸೊಸೆ ಪೂರ್ಣಿಮಾ ಸಾಹು ಅವರು ಜೆಮ್‌ಶೆಡ್‌ಪುರ ಪೂರ್ವದಿಂದ 8,000ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಅಜೋಯ್ ಕುಮಾರ್ ವಿರುದ್ಧ ಭಾರೀ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಒಟ್ಟು 1,211 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಇಂದಿನ ಫಲಿತಾಂಶದ ಮೂಲಕ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+