Jarkhand Election: ಜೆಎಂಎಂ ಬಿಗಿಪಟ್ಟು; ಇಂಡಿಯಾ ಒಕ್ಕೂಟಕ್ಕೆ ಸೀಟು ಹಂಚಿಕೆ ತಲೆನೋವು

ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯ ವಲಯದಲ್ಲಿ ಚಟುವಟಿಕೆ ಗರಿಗೆದರಿದೆ. ಈಗಾಗಲೇ ರಾಜಕೀಯ ಪಕ್ಷಗಳು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿವೆ. ಎನ್‌ಡಿಎ ಸೀಟು ಹಂಚಿಕೆ ಅಂತಿಮಗೊಳಿಸಿದ್ದು, ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಮತ್ತೊಂದೆಡೆ ಇಂಡಿಯಾ ಒಕ್ಕೂಟಕ್ಕೆ ಸೀಟು ಹಂಚಿಕೆ ಸವಾಲಾಗಿದೆ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಬಿಗಿ ನಿಲುವು ಇಂಡಿಯಾ ಒಕ್ಕೂಟಕ್ಕೆ ತಲೆನೋವಾಗಿದೆ.

ಜೆಎಂಎಂ ಮುಖ್ಯಸ್ಥ ಹೇಮಂತ್ ಸೊರೆನ್ ಸೀಟು ಹಂಚಿಕೆ ವಿಚಾರದಲ್ಲಿ ತಮ್ಮ ಪಟ್ಟು ಸಡಿಲಿಸಲು ಸಿದ್ದರಾಗಿಲ್ಲ. ಈಗಾಗಲೇ ಜೆಎಂಎಂ ಮತ್ತು ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷನೆ ಮಾಡಿದೆ. ಆರ್ ಜೆಡಿ ಮತ್ತು ಎಡರಂಗಕ್ಕೆ ಕೇವಲ 11 ಸ್ಥಾನಗಳು ಮಾತ್ರ ಉಳಿಯಲಿವೆ. 70 ಸ್ಥಾನಗಳಲ್ಲಿ 41 ಸ್ಥಾನಗಳಲ್ಲಿ ಜೆಎಂಎಂ ಸ್ಪರ್ಧಿಸುವ ಸಾಧ್ಯತೆ ಇದ್ದು, 29 ಸ್ಥಾನಗಳು ಕಾಂಗ್ರೆಸ್ ಪಾಲಾಗುವ ನಿರೀಕ್ಷೆ ಇದೆ.

jharkhand election 2024 seat sharing challenges jmm

ಸೀಟು ಹಂಚಿಕೆ ವಿಚಾರ ಆರ್ ಜೆಡಿ ಅಸಮಾಧಾನಗೊಂಡಿದೆ. ಹೆಚ್ಚಿನ ಸ್ಥಾನಗಳನ್ನು ಅವರು ನಿರೀಕ್ಷೆ ಮಾಡಿದ್ದರು. ತಮಗೆ ನ್ಯಾಯಯುತವಾಗಿ ಸ್ಥಾನಗಳನ್ನು ಹಂಚಿಕೆ ಮಾಡಿಲ್ಲ ಎನ್ನುವುದು ಆರ್ ಜೆಡಿ ಅಸಮಾಧಾನಕ್ಕೆ ಕಾರಣವಾಗಿದೆ. ಜಾರ್ಖಂಡ್ ಸಿಎಂ, ಜೆಎಂಎಂ ಮುಖ್ಯಸ್ಥ ಹೇಮಂತ್ ಸೊರೆನ್ ಅವರ ನಿರ್ಧಾರ ಏಕಪಕ್ಷೀಯವಾಗಿಗೆ ಎಂದು ಆರ್ ಜೆಡಿ ಸಂಸದ ಮನೋಜ್ ಝಾ ಆರೋಪಿಸಿದ್ದಾರೆ.

ಆರ್ ಜೆಡಿ ಸುಮಾರು 20 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಬಲವಾದ ಅಸ್ತಿತ್ವ ಹೊಂದಿದೆ. 12-13 ಕ್ಕಿಂತ ಕಡಿಮೆ ಸ್ಥಾನಗಳನ್ನು ಹಂಚಿಕೆ ಮಾಡಿದರು ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ತಾವು ಕೇಳಿದಷ್ಟು ಸ್ಥಾನಗಳನ್ನು ಹಂಚಿಕೆ ಮಾಡದಿದ್ದರೆ ಇಂಡಿಯಾ ಒಕ್ಕೂಟದಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಕೂಡ ಚಿಂತಿಸಬಹುದು. ಆದರೆ ಬಿಜೆಪಿಯನ್ನು ಸೋಲಿಲು 60-62 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಬೇಕಾಗಿ ಬಂದರೆ 18-19 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಆರ್ ಜೆಡಿ ಸ್ಪಷ್ಟಪಡಿಸಿದೆ.

ಆರ್ ಜೆಡಿ ವಿರೋಧದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡುವಂತೆ ಜೆಎಂಎಂ ಪಕ್ಷಕ್ಕೆ ಒತ್ತಾಯ ಮಾಡುತ್ತಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ ಜೆಎಂಎಂಗೆ ಕಾಂಗ್ರೆಸ್ 50 ಸ್ಥಾನಗಳನ್ನು ನೀಡಿದ್ದು, ಕಾಂಗ್ರೆಸ್ 31 ಸ್ಥಾನಗಳನ್ನು ಪಡೆಯಲು ನಿರ್ಧರಿಸಿತ್ತು. 81 ಸದಸ್ಯ ಬಲ ಹೊಂದಿರುವ ಜಾರ್ಖಂಡ್‌ನಲ್ಲಿ ಬಹುಮತ ಪಡೆಯಲು 42 ಸ್ಥಾನಗಳನ್ನು ಗೆಲ್ಲಬೇಕಿದೆ. ಜೆಎಂಎಂ ಏಕಾಂಗಿಯಾಗಿ 42 ಸ್ಥಾನಗಳಲ್ಲಿ ಗೆದ್ದರೆ ಕಾಂಗ್ರೆಸ್‌ ಪಕ್ಷವನ್ನು ಕಡೆಗಣಿಸುವ ಸಾಧ್ಯತೆ ಇದ್ದು, ಜೆಎಂಎಂ 42 ಸ್ಥಾನಗಳಲ್ಲಿ ಗೆಲ್ಲದಂತೆ ನೋಡಿಕೊಳ್ಳಲು ಕಾಂಗ್ರೆಸ್ ಮತ್ತು ಆರ್ ಜೆಡಿ ರಣತಂತ್ರ ರೂಪಿಸುತ್ತಿವೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+