Jharkhand Assembly Polls 2024: 'ಮಂಡಲ್‌ ಮುರ್ಮು ಬಿಜೆಪಿ ಸೇರ್ಪಡೆ'

Jharkhand Assembly Polls 2024: ಈಗಾಗಲೇ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇನ್ನು ರಾಜ್ಯದಲ್ಲಿ ಇದೀಗ ಪಕ್ಷಾಂತರ ಕಾರ್ಯಗಳು ಶುರುವಾಗಿಬಿಟ್ಟಿವೆ. ಇನ್ನು ಇದೀಗ ಸಂತಾಲ್‌ ಪ್ರಾಂತ್ಯದ ಬುಡಕಟ್ಟು ಸಮುದಾಯದ ನಾಯಕ ಮಂಡಲ್‌ ಮುರ್ಮು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಇಂದು (ನವೆಂಬರ್ 07) ತಿಳಿಸಿದ್ದಾರೆ.

ಸೆರೈಕೆಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಚಂಪೈ ಸೋರೆನ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಬಾಂಗ್ಲಾದೇಶದಿಂದ ನುಸುಳುವವರು ಸ್ಥಳೀಯ ಬುಡಕಟ್ಟು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

Jharkhand Assembly Polls 2024 Mandal Murmu joins BJP says Champai Soren

ಕೆಲ ದಿನಗಳ ಹಿಂದೆಯಷ್ಟೇ ಸಿಎಂ ಹೇಮಂತ್‌ ಸೊರೇನ್‌ ಅವರ ನಾಮಪತ್ರಕ್ಕೆ ಮಂಡಲ್‌ ಮುರ್ಮು ಪ್ರಸ್ತಾವಕರಾಗಿ ಸಹಿ ಹಾಕಿದ್ದರು. ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ನೀಡುತ್ತಿಲ್ಲ. ಬಾಂಗ್ಲಾದೇಶದಿಂದ ನುಸುಳಿದವರು ರಾಜಕೀಯ ಪ್ರಭಾವ ಬಳಸಿ ಬುಡಕಟ್ಟು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಸಮುದಾಯದ ಸಾಮಾಜಿಕ ಸ್ಥಿತಿಗತಿಗಳು ಅಸ್ತವ್ಯಸ್ತಗೊಂಡಿವೆ. ಈ ಹಿನ್ನೆಲೆ ಮಂಡಲ್‌ ಮುರ್ಮು ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಇನ್ನು ಜಾರ್ಖಂಡ್‌ನ 81 ವಿಧಾನಸಭಾ ಸ್ಥಾನಗಳಿಗಗೆ ನವೆಂಬರ್ 13 ಮತ್ತು ನವೆಂಬರ್ 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23ರಂದು ನಡೆಯಲಿದೆ.

ಸಪ್ತ ಗ್ಯಾರಂಟಿಗಳು: ಜಾರ್ಖಂಡ್ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಈಗಾಗಲೇ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಇದೀಗ ಇಂಡಿಯಾ ಮೈತ್ರಿ ಕೂಟದಿಂದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಹಾಗಾದರೆ ಈ ಎಷ್ಟು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

* ಖತಿಯಾನ್‌ನ ಖಾತರಿ: ಸ್ಥಳೀಯ ಹಕ್ಕುಗಳನ್ನು ಕಾಪಾಡಲು 1932ರ ಖತಿಯಾನ್‌ನ ಆಧಾರದ ಮೇಲೆ ಸ್ಥಳೀಯ ನೀತಿ ಜಾರಿಗೊಳಿಸಲಾಗುವುದು. ಸರ್ನಾ ಧರ್ಮ ಸಂಹಿತೆಯನ್ನು ಪರಿಚಯಿಸಲಾಗುವುದು ಮತ್ತು ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿ ಸಂರಕ್ಷಿಸಲು ಕ್ರಮ.

* ಮೈನಿಯ ಸಮ್ಮಾನ್ ಗ್ಯಾರಂಟಿ: ಮೈನಿಯ ಸಮ್ಮಾನ್ ಯೋಜನೆ ಡಿಸೆಂಬರ್ 2024ರಿಂದ ಆರಂಭಗೊಳ್ಳಲಿದ್ದು, ಈ ಯೋಜನೆಯಡಿ 2,500 ರೂಪಾಯಿ ಗೌರವಧನ ಒದಗಿಸಲಾಗುತ್ತದೆ.

* ಸಾಮಾಜಿಕ ನ್ಯಾಯದ ಖಾತರಿ: ಮೀಸಲಾತಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು, ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇಕಡಾ 28ರಷ್ಟು, ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಶೇಕಡಾ 12 ಮತ್ತು ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಶೇಕಡಾ 27ರಷ್ಟು ಮೀಸಲಾತಿ ನೀಡಲಾಗುವುದು. ಹೆಚ್ಚುವರಿಯಾಗಿ, ಹಿಂದುಳಿ ವರ್ಗಗಳಿಗೆ ಪ್ರತ್ಯೇಕ ಕಲ್ಯಾಣ ಸಚಿವಾಲಯ, ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನೂ ರಕ್ಷಿಸಲಾಗುವುದು.

* 7 ಕೆಜಿ ಪಡಿತರ: ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಪ್ರತಿ ವ್ಯಕ್ತಿಗೆ 5-7 ಕೆಜಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುವುದು. ಜೊತೆಗೆ ಬಡ ಕುಟುಂಬಗಳಿಗೆ 450 ರೂಪಾಯಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ನೀಡಲಾಗುವುದು.

* ಉದ್ಯೋಗ ಖಾತ್ರಿ: ಜಾರ್ಖಂಡ್‌ನಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿ.

* ಶಿಕ್ಷಣದ ಭರವಸೆ: ಪ್ರತಿ ಬ್ಲಾಕ್‌ನಲ್ಲಿ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು.

* ರೈತ ಕಲ್ಯಾಣ ಖಾತ್ರಿ: ರೈತರ ಜೀವನೋಪಾಯವನ್ನು ಸುಧಾರಿಸಲು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ಪರಿಷ್ಕರಿಸಲು ಮೈತ್ರಿಕೂಟ ವಾಗ್ದಾನ ಮಾಡಿದೆ. ಭತ್ತದ ಎಂಎಸ್‌ಪಿಯನ್ನು 2,400-3,200 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+