Republic Exit Poll 2024: ರಿಪಬ್ಲಿಕ್ ಪ್ರಕಾರ ಜಾರ್ಖಂಡ್‌ನಲ್ಲಿ ಯಾವ ಪಕ್ಷಕ್ಕೆ ಗೆಲುವು?
Jharkhand Assembly Election 2024 Exit Poll: ಜಾರ್ಖಂಡ್ ವಿಧಾನಸಭೆ ಚುನಾವಣೆ 2024ರ ಎರಡು ಹಂತದ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಇದೀಗ ರಿಪಬ್ಲಿಕ್ ಸುದ್ದಿ ವಾಹಿನಿ ಚುಣಾವಣೋತ್ತರ ಸಮೀಕ್ಷೆ ಪ್ರಕಟಿಸಿದೆ. ಹಾಗಾದರೆ ಈ ವಾಹಿನಿಯ ಪ್ರಕಾರ ಯಾವ ಪಕ್ಷ ಗೆಲುವು ಸಾಧಿಸಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಿಪಬ್ಲಿಕ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, 81 ಸ್ಥಾನಗಳಲ್ಲಿ ಎನ್‌ಡಿಎ 31-40 ಸ್ಥಾನ, ಇಂಡಿಯಾ ಮೈತ್ರಿಕೂಟ 37-47, ಪಕ್ಷೇತರ 01-06 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 41 ಆಗಿದೆ.

ಜಾರ್ಖಂಡ್‌ನಲ್ಲಿ ನವೆಂಬರ್ 13ರಂದು 43 ವಿಧಾನಸಭೆ ಕ್ಷೇತ್ರಗಳು, ಇಂದು (ನವೆಂಬರ್ 20) 38 ವಿಧಾನಸಭಾ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ಯಶ್ವಸ್ವಿಯಾಗಿದೆ ಮುಕ್ತಯವಾಗಿದೆ. ಒಟ್ಟು ಶೇಕಡ 67.59ರಷ್ಟು ಮತದಾನ ಆಗಿದ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ 17-27 ಸ್ಥಾನ ಗಳಿಸಲಿದ್ದು, ಹೀನಾಯ ಸೋಲು ಕಾಣಲಿದೆ. ಬಿಜೆಪಿ 16-26, ಎಜೆಎಸ್‌ಯುಪಿ 0-1, ಜೆಡಿಯು 0-1, ಎಲ್‌ಜೆಪಿ 0-1 ಸ್ಥಾನ ಗಳಿಸಲಿದ್ದು, ಒಟ್ಟಾಗಿ ಶೇಕಡ 37ರಷ್ಟು ಮತ ಗಳಿಸಲಿವೆ ಎಂದು ಹೇಳಿದೆ.
ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ 32-36 ಸ್ಥಾನ ಗಳಿಸಿದರೆ, ಕಾಂಗ್ರೆಸ್ 13-16, ಆರ್‌ಜೆಡಿ 3-4, ಸಿಪಿಐ(ಎಂಎಲ್)ಎಲ್ 1-3 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಒಟ್ಟಾರೆ, ಐಎನ್‌ಡಿಐಎ ಮೈತ್ರಿ ಪಕ್ಷಗಳು ಶೇಕಡ 45ರ ವರೆಗೆ ಮತಗಳನ್ನು ಬಾಚಿಕೊಳ್ಳಲಿವೆ ಎಂದು ಸರ್ವೆ ಭವಿಷ್ಯ ನುಡಿದಿದೆ.
ಇತರರು 1-6 ಸ್ಥಾನಗಳನ್ನು ಪಡೆದುಕೊಳ್ಳಬಹುದು ಎಂದು ಸಮೀಕ್ಷೆಯು ತಿಳಿಸಿದೆ. 81 ಸದಸ್ಯ ಬಲದ ಜಾರ್ಖಂಡ್‌ನಲ್ಲಿ ಬಹುಮತಕ್ಕೆ 41 ಸ್ಥಾನಗಳು ಅಗತ್ಯವಾಗಿವೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯ 43 ಕ್ಷೇತ್ರಗಳಿಗೆ ಕಳೆದ ನಬೆಂಬರ್ 13ರಂದು ಮೊದಲ ಹಂತದಲ್ಲಿ ಮತದಾನ ನಡೆದಿತ್ತು. ಇದರಲ್ಲಿ ಶೇಕಡ 65ರಷ್ಟು ಮತದಾನ ನಡೆದಿತ್ತು. ಇನ್ನುಳಿದ 38 ಕ್ಷೇತ್ರಗಳ ಮತದಾನ ಇಂದು (ನವೆಂಬರ್ 20) ನಡೆಡೆದಿದೆ.
ಸಿಎಂ ಹೇಮಂತ್ ಸೊರೆನ್, ಕಲ್ಪನಾ ಸೊರೇನ್, ವಿಧಾನಸಭೆ ಸ್ಪೀಕರ್ ರವೀದ್ರನಾಥ್ ಮಹ್ತೊ (ಜೆಎಂಎಂ), ಎಎಸ್‌ಜೆಯು ಅಧ್ಯಕ್ಷ ಸುದೇಶ್ ಕುಮಾರ್ ಮಹ್ತೊ, ಮಾಜಿ ಸಿಎಂ ಚಂಪೈ ಸೊರೇನ್, ಬಾಬುಲಾಲ್ ಮರಾಂಡಿ, ಅಮರ್‌ನಾಥ್ ಬೌರಿ (ಬಿಜೆಪಿ) ಸೇರಿ ಹಲವರು ಕಣದಲ್ಲಿದ್ದರು.












Click it and Unblock the Notifications