ಸಬ್ಸಿಡಿ ಇರುವ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ
ಸಬ್ಸಿಡಿ ಇರುವ ಅಡುಗೆ ಅನಿಲ ಸಿಲಿಂಡರ್ (ಎಲ್ ಪಿಜಿ) ದರದಲ್ಲಿ ಏರಿಕೆಯಾಗಿದೆ. ಜತೆಗೆ ವಿಮಾನ ಇಂಧನ ಬೆಲೆ ಕೂಡಾ ಏರಿಕೆ ಕಂಡಿದೆ. ಜುಲೈ ತಿಂಗಳಿನಿಂದ ಇದು 8ನೇ ಬಾರಿಗೆ ಏರಿಕೆಯಾಗಿದೆ.
ನವದೆಹಲಿ, ಜನವರಿ 01 : ಸಬ್ಸಿಡಿ ಇರುವ ಅಡುಗೆ ಅನಿಲ ಸಿಲಿಂಡರ್ (ಎಲ್ ಪಿಜಿ) ದರದಲ್ಲಿ ಏರಿಕೆಯಾಗಿದೆ. ಜತೆಗೆ ವಿಮಾನ ಇಂಧನ ಬೆಲೆ ಕೂಡಾ ಏರಿಕೆ ಕಂಡಿದೆ. ಜುಲೈ ತಿಂಗಳಿನಿಂದ ಇದು 8ನೇ ಬಾರಿಗೆ ಏರಿಕೆಯಾಗಿದೆ.
ಜೆಟ್ ಇಂಧನ ದರದಲ್ಲಿ ಶೇ 8.6 ರಷ್ಟು ಏರಿಕೆ ಹಾಗೂ ಎಲ್ ಪಿಜಿ ಸಿಲಿಂಡರ್ ದರವನ್ನು 2 ರು ಏರಿಸಲಾಗಿದೆ. ಜೆಟ್ ಇಂಧನ ದರವನ್ನು ಕಳೆದ ತಿಂಗಳು ಶೇ 3.7 ರಷ್ಟು ಇಳಿಕೆ ಮಾಡಲಾಗಿತ್ತು. ಈಗ ಪ್ರತಿ ಕಿಲೋ ಲೀಟರ್ ಗೆ 4,161 ರು ಏರಿಕೆಯಾಗಿದೆ. ದೆಹಲಿಯಲ್ಲಿ ಜೆಟ್ ಇಂಧನ ದರ ಪ್ರತಿ ಲೀಟರ್ ಗೆ 52,540.63 ರು ನಷ್ಟಿದೆ. [ಡಿಸೆಂಬರ್ 01: ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ]

ಸಬ್ಸಿಡಿ ಸಹಿತ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್ ಗೆ 434.71 ರುಗೇರಿದೆ. ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಒಂದು ರುಪಾಯಿ ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಬೆಲೆ 585 ರು ನಷ್ಟಿದೆ.
ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications