ಇಂಧನ ಖಾಲಿಯಾದರೂ ವಿಮಾನ ಹಾರಾಡುತ್ತಲೇ ಇತ್ತು!

ನವದೆಹಲಿ, ಆಗಸ್ಟ್. 21: ಹಾರಾಡುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿಯಾಗುತ್ತ ಬಂದಿತ್ತು. ಇನ್ನೇನು ಕೆಲವೇ ನಿಮಿಷದಲ್ಲಿ ಇಂಧನ ಖಾಲಿಯಾಗುತ್ತದೆ ಎಂಬ ಸಂದರ್ಭ ಎದುರಾದಾಗ ಅಂತೂ ಪೈಲಟ್ ಭೂ ವಿಮಾನವನ್ನು ಭೂ ಸ್ಪರ್ಶ ಮಾಡಿಸಿದ್ದಾನೆ. ವಿಮಾನದಲ್ಲಿದ್ದ 152 ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ನಿರ್ಲಕ್ಷ ಮಾಡಿದ ಪೈಲಟ್ ನನ್ನು ಅಮಾನತು ಮಾಡಲಾಗಿದೆ. ಆಗಸ್ಟ್ 8 ರಂದು ದೋಹದಿಂದ ಕೊಚ್ಚಿಗೆ ಬರುತ್ತಿದ್ದ ಜೆಟ್ ಏರ್ವೇಸ್‌ನ ವಿಮಾನದಲ್ಲಿ 152 ಪ್ರಯಾಣಿಕರಿದ್ದರು. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯನ್ನು ಗುರುತಿಸಲಾಗದ ಪೈಲಟ್ ಆಗಸದಲ್ಲೇ ವಿಮಾನವನ್ನು ಹಾರಾಡಿಸುತ್ತಿದ್ದ.[ಮಂಗಳೂರು : ಜೆಟ್ ಏರ್‌ವೇಸ್‌ನಿಂದ ಅಬುಧಾಬಿಗೆ ನೇರ ವಿಮಾನ]

plane

ಇಂಧನ ಕನಿಷ್ಠ ಮಟ್ಟ 3500 ಕೆಜಿಗಿಂತ ಕಡಿಮೆಗಿಳಿದ್ದರಿಂದ ಎಚ್ಚೆತ್ತ ಪೈಲಟ್ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ್ದಾನೆ. ಇನ್ನು ಕೆಲ ಕ್ಷಣಗಳು ವಿಮಾನ ಆಗಸದಲ್ಲೇ ಇದ್ದರೆ ಇಂಧನ ಖಾಲಿಯಾಗಿ ಅಪಘಾತ ಸಂಭವಿಸುತ್ತಿತ್ತು.[ಜೆಟ್ ಏರ್ ವೇಸ್ ಕಾಮುಕ ಪೈಲಟ್ ಸೆರೆ]

ಪೈಲಟ್ ನ ಅಚಾತುರ್ಯವನ್ನು ಮನಗಂಡ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ(ಡಿಜಿಸಿಎ) ಪೈಲಟನ್ನು ಅಮಾನತು ಮಾಡಿದೆ. ಇಂಥ ಸಂದರ್ಭ ಎದುರಾಗಿದ್ದರೂ ವಿಮಾನದಲ್ಲಿನ ಸಿಬ್ಬಂದಿ ಯಾವುದೇ ಬಗೆಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+