ಮತ್ತಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಜೆಇಇ ಮೇನ್ ಪರೀಕ್ಷೆ
ನವದೆಹಲಿ, ಅಕ್ಟೋಬರ್ 23: ಮುಂದಿನ ವರ್ಷದಿಂದ ಮುಖ್ಯ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ. ನೂತನ ಶಿಕ್ಷಣ ನೀತಿಯ ಅಡಿ ಜಂಟಿ ಪ್ರವೇಶಾತಿ ಮಂಡಳಿಯು (ಜೆಎಬಿ) ಈ ನಿರ್ಧಾರ ತೆಗೆದುಕೊಂಡಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದರು.
ಪಿಐಎಸ್‌ಎ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸುವ ದೇಶಗಳಲ್ಲಿ ಪರೀಕ್ಷೆಯು ಮಾತೃಭಾಷೆಯ ಮಾಧ್ಯಮದಲ್ಲಿಯೇ ನಡೆಯುತ್ತಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದರು. ಅವರು ಹೇಳಿರುವಂತೆ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ಪ್ರಧಾನಿಗೆ ಅದರ ಶ್ರೇಯಸ್ಸು ಸಲ್ಲಿಸಿದ್ದಾರೆ.
ಜೆಎಬಿ ತೆಗೆದುಕೊಂಡ ನಿರ್ಧಾರವು ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಇನ್ನಷ್ಟು ಚೆನ್ನಾಗಿ ಗ್ರಹಿಸಲು ಹಾಗೂ ಅಧಿಕ ಅಂಕಗಳನ್ನು ಗಳಿಸಲು ನೆರವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

'ಪರೀಕ್ಷೆಗಳ ಆಧಾರದಲ್ಲಿ ರಾಜ್ಯ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶವನ್ನು ನಿರ್ಧರಿಸುವ ಕಡೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಕೂಡ ಪರೀಕ್ಷೆಗಳನ್ನು ನಡೆಸಲಾಗುವುದು. ಜೆಇಇ ಮುಖ್ಯ ಪರೀಕ್ಷೆಯ ಆಧಾರದಲ್ಲಿ ಪ್ರವೇಶ ನೀಡುವ ರಾಜ್ಯಗಳ ರಾಜ್ಯಭಾಷೆಯೂ ಇದರಲ್ಲಿ ಸೇರಿಕೊಳ್ಳಲಿದೆ' ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ವರ್ಷಕ್ಕೆ ಎರಡು ಬಾರಿ ಜೆಇಇ ಮೇನ್ ಪರೀಕ್ಷೆ ನಡೆಸುತ್ತಿದ್ದು, ಇಂಗ್ಲಿಷ್, ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಈಗ ಯಾವ ಯಾವ ಭಾಷೆಗಳನ್ನು ಇದಕ್ಕೆ ಸೇರಿಸಲಾಗಿದೆ ಅಥವಾ ದೇಶದ ಎಲ್ಲ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆ ಬರೆಯುವ ಅವಕಾಶ ನೀಡಲಾಗುತ್ತಿದೆಯೇ ಎಂಬ ಮಾಹಿತಿ ನೀಡಿಲ್ಲ.












Click it and Unblock the Notifications