• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 24 ವಿದ್ಯಾರ್ಥಿಗಳಿಗೆ ಶೇ 100 ಅಂಕ

|

ನವದೆಹಲಿ, ಸೆಪ್ಟೆಂಬರ್ 12: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಒಟ್ಟು 24 ವಿದ್ಯಾರ್ಥಿಗಳು ಶೇ 100ರಷ್ಟು ಅಂಕಗಳನ್ನು ಪಡೆದಿದ್ದಾರೆ.

ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಸೆ. 1ರಿಂದ 6ರವರೆಗೆ ಕೊರೊನಾ ವೈರಸ್ ಸೋಂಕಿನ ಕುರಿತಾದ ಮುಂಜಾಗ್ರತೆ ಕ್ರಮಗಳ ನಡುವೆ ಜೆಇಇ ಮುಖ್ಯ ಪರೀಕ್ಷೆ ಆಯೋಜಿಸಲಾಗಿತ್ತು.

ನೀಟ್ ಪರೀಕ್ಷೆ ಬರೆಯಲು ಕೊವಿಡ್-19 ಸೋಂಕಿತರಿಗೆ ಅನುಮತಿಯಿಲ್ಲ

ತೆಲಂಗಾಣದಲ್ಲಿ 8 ಮಂದಿ ಶೇ 100ರಷ್ಟು ಅಂಕ ಪಡೆದಿದ್ದಾರೆ. ದೆಹಲಿಯಲ್ಲಿ 5, ರಾಜಸ್ಥಾನದಲ್ಲಿ 4, ಆಂಧ್ರಪ್ರದೇಶದಲ್ಲಿ 3, ಹರಿಯಾಣದಲ್ಲಿ 2 ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರದ ತಲಾ ಒಬ್ಬ ವಿದ್ಯಾರ್ಥಿಗಳು ಶೇ 100ರಷ್ಟು ಅಂಕ ಪಡೆದಿದ್ದಾರೆ.

ಐಐಟ, ಎನ್‌ಐಟಿ ಹಾಗೂ ಸಿಎಫ್‌ಟಿಐಗಳಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಲು ಜೆಇಇ- ಮುಖ್ಯ ಪರೀಕ್ಷೆಗೆ ಒಟ್ಟು 8.58 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಆದರೆ ಅದರಲ್ಲಿ ಶೇ 74ರಷ್ಟು ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು.

   Nirmala Sitharaman ಅವ್ರೇ ಕನ್ನಡಿಗರು ಏನ್ ಪಾಪ ಮಾಡಿದ್ರು? | Oneindia Kannada

   ಕರ್ನಾಟಕದ ಶುಭನ್ ಆರ್. ಶೇಕಡಾ 99.9 ಅಂಕದೊಂದಿಗೆ ಪೇಪರ್ 1 ಟಾಪರ್ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ವಿದ್ಯಾರ್ಥಿ ಎನಿಸಿದ್ದಾರೆ.

   English summary
   JEE-Mains 2020 result has been announced on Friday. 24 students were scored 100 percentile.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X