ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ ನಡ್ಡಾ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 05 : ಜಯಲಲಿತಾ ಆರೋಗ್ಯ ಸ್ಥಿತಿ ಹೇಗಿದೆ? ಎಂಬ ಬಗ್ಗೆ ಅಪೋಲೋ ಆಸ್ಪತ್ರೆಯಾಗಲಿ, ತಮಿಳುನಾಡು ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಯಾವುದೇ ನಿಖರವಾದ ಮಾಹಿತಿ ಕೊಡುತ್ತಿಲ್ಲ. ಈ ನಡುವೆ ಕೇಂದ್ರ ಆರೋಗ್ಯ ಸಚಿವರು ನೀಡಿರುವ ಒಂದು ಹೇಳಿಕೆ ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ.

"ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾದವರು (ಅಪೋಲೋ) ಆಸ್ಪತ್ರೆಯವರು. ನಮ್ಮಿಂದ ಏನೇನು ಸಹಾಯ, ಬೆಂಬಲ ನೀಡಲು ಸಾಧ್ಯವೋ ಅದನ್ನೆಲ್ಲ ನೀಡುತ್ತೇವೆ" ಎಂದು ಕೇಂದ್ರ ಆರೋಗ್ಯ ಸಚಿವ ಜಯ ಪ್ರಕಾಶ್ ನಡ್ಡಾ ಅವರು ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ಅರ್ಥವೇನು ಅವರೇ ವಿವರಿಸಬೇಕು.

Jayalalithaa health : It is for doctor to decide

ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿಸಲಾಗಿರುವ ಸಂಸದೆ ಶಶಿಕಲಾ ಪುಷ್ಪಾ ಅವರು ಕೂಡ, ಜಯಲಲಿತಾ ಆರೋಗ್ಯದ ಕುರಿತು ಯಾವುದೇ ಪಾರದರ್ಶಕತೆ ಇಲ್ಲ. ಅವರು ಇನ್ನೂ ಬದುಕಿರುವ ಬಗ್ಗೆ ಜನ ತಿಳಿಯಬಯಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯ ಪ್ರವೇಶಿಸಿ, ಊಹಾಪೋಹಗಳಿಗೆ ಕೊನೆ ಹಾಡಬೇಕು ಎಂದು ಆಗ್ರಸಿದ್ದಾರೆ.

ಡಿಎಂಕೆ ಪಕ್ಷದ ಸಂಸದರೊಬ್ಬರಿಗೆ ಕಪಾಳಮೋಕ್ಷ ಮಾಡಿದ ನಂತರ ಶಶಿಕಲಾ ಪುಷ್ಪಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದುಕೊಳ್ಳಲಾಗಿತ್ತು. ನಂತರ ತಮಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕೆಂದು ಅವರು ಒತ್ತಾಯಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Expelled AIADMK MP Sasikala Pushpa on Monday demanded transparency on Jayalalithaa's health. Sasikala asked for the Prime Minister to intervene in the matter immediately. This is for doctors to decide, we are supporting them in whatever way possible: Union Health Minister JP Nadda.
Please Wait while comments are loading...